ಸಾರಾಂಶ
ದಾದಿಯರ ಪ್ರತಿನಿಧಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ದಿನವನ್ನು ಸಂಭ್ರಮಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು ಆಸ್ಪತ್ರೆಯ ಎಮ್‌ಕಾಡ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಮತ್ತು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಈ ಮೂರೂ ಆಸ್ಪತ್ರೆಗಳ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಾ. ಸುಭ ಸೂರಿಯಾ ಭಾಗವಹಿಸಿ ಮಾತನಾಡಿ, ಹೊಸ ನರ್ಸಿಂಗ್ ಪದವೀಧರರು ತಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಲು, ಕಲಿಕೆಯಲ್ಲಿ ಆಸಕ್ತಿ ಮತ್ತು ತಮ್ಮ ತಂಡಗಳೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಹೇಳಿದರು. ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸದಿಂದ ದಾದಿಯರು ಕೆಲಸ ನಿರ್ವಹಿಸಬೇಕು ಎಂದರು.
ದಾದಿಯರ ಪ್ರತಿನಿಧಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ದಿನವನ್ನು ಸಂಭ್ರಮಿಸಲಾಯಿತು.ಮಾಹೆ ಮಣಿಪಾಲದ ಚೀಫ್ ಅಪರೇಟಿಂಗ್ ಆಫೀಸರ್ ಡಾ. ಆನಂದ್ ವೇಣುಗೋಪಾಲ್, ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಾನಂದ ಪ್ರಭು ಇದ್ದರು.
ಕೆಎಂಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ ಸ್ವಾಗತಿಸಿದರು. ಫಾರ್ಮಸಿ ವಿಭಾಗದ ಶಾಹಿದಾ ನಿರೂಪಿಸಿದರು. ಉಪ ನರ್ಸಿಂಗ್ ಅಧೀಕ್ಷಕಿ ಸೋಫಿಯಾ ಪಿಂಟೋ ವಂದಿಸಿದರು.