ಕುಟುಂಬದಲ್ಲಿ ಸಂಬಂಧಗಳು ಹಾಳಗುತ್ತಿರುವುದರಿಂದ ಆತ್ಮಹತ್ಯೆ ಹೆಚ್ಚಳ

| Published : Sep 14 2024, 01:52 AM IST

ಕುಟುಂಬದಲ್ಲಿ ಸಂಬಂಧಗಳು ಹಾಳಗುತ್ತಿರುವುದರಿಂದ ಆತ್ಮಹತ್ಯೆ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳತ್ತಿರುವುದು ಆರೋಗ್ಯ ಸಮಸ್ಯೆ, ಡ್ರಗ್ಸ್, ಕೆಟ್ಟ ಚಟಗಳು ಮತ್ತು ವ್ಯಸನಗಳಿಂದಾಗಿ

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ದಿನಗಳಲ್ಲಿ ಕುಟುಂಬದಲ್ಲಿ ಸಂಬಂಧಗಳು ಹಾಳಗುತ್ತಿರುವುದರಿಂದ ಆತ್ಮಹತ್ಯೆ ಹೆಚ್ಚಾಗುತಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಕ್ಲಿನಿಕಲ್ ಮನಶಾಸ್ತ್ರಜ್ಞೆ ಡಾ. ಜ್ಯೋತಿ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳತ್ತಿರುವುದು ಆರೋಗ್ಯ ಸಮಸ್ಯೆ, ಡ್ರಗ್ಸ್, ಕೆಟ್ಟ ಚಟಗಳು ಮತ್ತು ವ್ಯಸನಗಳಿಂದಾಗಿ ಎಂದರು.

ಸರಿಯಾದ ಆಹಾರ ಕ್ರಮ ಇಲ್ಲದೆ ಇರುವುದು, ಮಾನಸಿಕ ಖಿನ್ನತಕ್ಕೆ ಒಳಗಾಗುವುದು, ಅನೇಕ ತಪ್ಪು ತಿಳವಳಿಕೆಗಳು ಆತ್ಮಹತ್ಯೆಗೆ ಕಾರಣವಾಗುತ್ತಿದೆ. ನಾವು ಅದನ್ನು ತಡೆಯಬೇಕಾಗಿದೆ. ಇಂದು ನಾವು ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಗೇಟ್ ಕೀಪರ್ ಗಳ ರೀತಿಯಲ್ಲಿ ಕಾಯಬೇಕಾದ ಅನಿವಾರ್ಯತೆ ಬಂದು ಒದಗಿದೆ. ಇಂದು ಸಾಮಾನ್ಯರೇ ಆತ್ಮಹತ್ಯೆ ಮಾಡಿಕೊಳ್ಳತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ವಿದ್ಯಾರ್ಥಿಗಳು ಬೇರೆಯವರಿಗೆ ಧೈರ್ಯ ಮತ್ತು ಮಾರ್ಗದರ್ಶನವನ್ನು ನೀಡಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾಲೇಜಿನ ಅಧ್ಯಾಪಕ ಸಲಹೆಗಾರ ಡಾ.ಪಿ.ಕೆ. ಗೋವರ್ಧನ್ ಇದ್ದರು. ಸಹಾಯಕ ಪ್ರಾಧ್ಯಾಪಕರಾದ ಸೌಮ್ಯ ಸ್ವಾಗತಿಸಿದರು. ಎನ್. ನಿವೇದಿತಾ ವಂದಿಸಿದರು.