ಎಂಜಿನಿಯರ್ಸ್ ಸಂಸ್ಥೆಯಿಂದ ವಿಶ್ವ ಜಲ ದಿನ ಆಚರಣೆ

| Published : Mar 27 2024, 01:01 AM IST

ಎಂಜಿನಿಯರ್ಸ್ ಸಂಸ್ಥೆಯಿಂದ ವಿಶ್ವ ಜಲ ದಿನ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ: ನಗರದ ದಿ.ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ ಸ್ಥಾನಿಕ ಸಂಸ್ಥೆಯಲ್ಲಿ ಇತ್ತೀಚೆಗೆ ವಿಶ್ವಜಲ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರ ಜಿ.ಎಂ.ಶಿವಕುಮಾರ ನೀರಿನ ಸದ್ಬಳಕೆಗೆ ಅಗತ್ಯವಾಗಿರುವ ನೀರಾವರಿ ಯೋಜನೆಗಳ ಆಧುನೀಕರಣದ ಬಗ್ಗೆ ಮಾಹಿತಿ ನೀಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ.ನಾಗರಾಜ ಪಾಟೀಲ ಮಾತನಾಡಿ, ವಿಶ್ವ ವಿದ್ಯಾನಿಲಯದಲ್ಲಿ ನೀರು ಸದ್ಬಳಕೆ ಹಾಗೂ ಮಳೆ ನೀರು ಸಂಗ್ರಹಣೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು.

ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಅಭಿಯಂತರ ಎಸ್.ಎಸ್.ಖಣಗಾವಿ ವಹಿಸಿದ್ದರು. ಬಿ.ಜಿ.ಧರೆಣ್ಣಿ ಸೇರಿದಂತೆ ಸಂಸ್ಥೆಯ ಇನ್ನಿತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ವೆಂಕಟೇಶ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ವಿಲಾಸ ಬದಾಮಿ ಪರಿಚಯಿಸಿದರು. ಸಿ.ಬಿ.ಹಿರೇಮಠ ನಿರೂಪಿಸಿದರು. ಮಂಜುನಾಥ ಶರನಪ್ಪನ್ನವರ ವಂದಿಸಿದರು.