ಶ್ರೀಹೊಳೆ ಆಂಜನೇಯಸ್ವಾಮಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಪೂಜೆ

| Published : Feb 07 2024, 01:49 AM IST

ಶ್ರೀಹೊಳೆ ಆಂಜನೇಯಸ್ವಾಮಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕದಂಬ ನದಿ ತೀರದ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲ ತನ್ನದೇ ಆದ ಇತಿಹಾಸ ಹೊಂದಿದೆ. ತಾವು ಈ ಹಿಂದೆ ದೇಗುಲಕ್ಕೆ ಭೇಟಿ ನೀಡಿದ ವೇಳೆ ನನ್ನ ಇಷ್ಟಾರ್ಥ ನೆರವೇರಲಿ ಎಂದು ಪ್ರಾರ್ಥನೆ ಮಾಡಿದ್ದೆ. ಇದಕ್ಕೆ ಭಗವಂತನ ಅನುಗ್ರಹವಾಗಿದೆ. ಈ ದೇಗುಲ ಮತ್ತಷ್ಟು ಅಭಿವೃದ್ಧಿ ಸಾಧಿಸುವ ಮೂಲಕ ಭಕ್ತರ ಬಯಕೆ ಈಡೇರಲಿ.

ಕನ್ನಡಪ್ರಭ ವಾರ್ತೆ ಮದ್ದೂರುಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಸೋಮವಾರ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬೆಂಗಳೂರಿನಿಂದ ರಾತ್ರಿ 7.30ರ ಸುಮಾರಿಗೆ ಕುಟುಂಬ ಸಮೇತ ಆಗಮಿಸಿದ ನ್ಯಾಯಮೂರ್ತಿ ಅವರನ್ನು ಜಿಲ್ಲಾಡಳಿತ ಮತ್ತು ದೇಗುಲದಿಂದ ಸಾಂಪ್ರದಾಯಕ ಸ್ವಾಗತ ನೀಡಲಾಯಿತು.

ನಂತರ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರು ಶ್ರೀಹೊಳೆ ಆಂಜನೇಯ ಸ್ವಾಮಿ ಮೂಲ ವಿಗ್ರಹದ ಮುಂದೆ ಕುಳಿತು ತಮ್ಮ ಎರಡು ಕೈಗಳ ಹಸ್ತದಲ್ಲಿ 1.25 ರು.ನಾಣ್ಯವನ್ನು ಹಿಡಿದು ಧ್ಯಾನ ಮುಗ್ಧರಾಗಿ ಪ್ರಾರ್ಥನೆ ಸಲ್ಲಿಸಿದರು.

ವಿಶೇಷ ಪೂಜೆಯೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ದಂಪತಿಯನ್ನು ದೇಗುಲದ ಪ್ರಧಾನ ಅರ್ಚಕ ಪ್ರದೀಪಚಾರ್ಯ ಮತ್ತು ಸಹ ಅರ್ಚಕ ಸುರೇಶಚಾರ್ಯ ಅವರುಗಳು ನ್ಯಾಯಮೂರ್ತಿಗಳನ್ನು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ದೇವರ ದರ್ಶನ ನಂತರ ಸಂತಸ ಹಂಚಿಕೊಂಡ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರು, ಕದಂಬ ನದಿ ತೀರದ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲ ತನ್ನದೇ ಆದ ಇತಿಹಾಸ ಹೊಂದಿದೆ. ತಾವು ಈ ಹಿಂದೆ ದೇಗುಲಕ್ಕೆ ಭೇಟಿ ನೀಡಿದ ವೇಳೆ ನನ್ನ ಇಷ್ಟಾರ್ಥ ನೆರವೇರಲಿ ಎಂದು ಪ್ರಾರ್ಥನೆ ಮಾಡಿದ್ದೆ. ಇದಕ್ಕೆ ಭಗವಂತನ ಅನುಗ್ರಹವಾಗಿದೆ. ಈ ದೇಗುಲ ಮತ್ತಷ್ಟು ಅಭಿವೃದ್ಧಿ ಸಾಧಿಸುವ ಮೂಲಕ ಭಕ್ತರ ಬಯಕೆ ಈಡೇರಲಿ ಎಂದು ಹಾರೈಸಿದರು.

ದೇಗುಲದಲ್ಲೇ ಪ್ರಸಾದ ಸ್ವೀಕರಿಸಿದ ನಂತರ ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್. ಜಿಲ್ಲಾ ಎಸ್ಪಿ ಎನ್.ಯತೀಶ್. ಜಿಲ್ಲಾ ಸತ್ರ ನ್ಯಾಯಾಧೀಶ ರಾಧಾ ರಮಾ, ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀವಿದ್ಯಾ, ಎಂ .ಸಿ. ನಂಜೇಗೌಡ, ಬಿ. ಪ್ರಿಯಾಂಕ, ಎನ್. ವಿ. ಕೋನಪ್ಪ, ಎಸ್ .ಸಿ.ನಳಿನ, ಎಸ್.ಪಿ.ಕಿರಣ್, ಮನ್ಮುಲ್ ನಿರ್ದೇಶಕಿ ರೂಪ, ಮುಖಂಡರಾದ ಜಿ.ಎಂ. ನರಸಿಂಹಮೂರ್ತಿ ಮತ್ತಿತರರು ಇದ್ದರು.