ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ ಮಹೋತ್ಸವದ ಅಂಗವಾಗಿ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಅಷ್ಟೋತ್ರ, ರಥೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಟೀಕಾರಾಯರ ಆರಾಧನಾ ಮಹೋತ್ಸವ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಪುಷ್ಪಾಲಂಕಾರ ಕಣ್ಮಣ ಸೆಳೆಯಿತು. ವಿವಿಧ ಪ್ರಕಾರದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಶ್ರೀಗಳ ದರ್ಶನ ಪಡೆದು ಪುನೀತರಾದರು, ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ ಮಹೋತ್ಸವದ ಅಂಗವಾಗಿ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಅಷ್ಟೋತ್ರ, ರಥೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಟೀಕಾರಾಯರ ಆರಾಧನಾ ಮಹೋತ್ಸವ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಪುಷ್ಪಾಲಂಕಾರ ಕಣ್ಮಣ ಸೆಳೆಯಿತು. ವಿವಿಧ ಪ್ರಕಾರದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಶ್ರೀಗಳ ದರ್ಶನ ಪಡೆದು ಪುನೀತರಾದರು, ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ದಾಸರ ಹಾಡುಗಳು ಹಾಡಿಗೆ ತಕ್ಕಂತೆ ಮಹಿಳೆಯರು ಹೆಜ್ಜೆ ಹಾಕಿದರು. ಜಯತೀರ್ಥ ಗುರುಭ್ಯೋನಮಃ ಘೋಷಣೆಗಳು ಮೊಳಗಿದವು. ಎದುರಾರೈತ ಗುರುವೇ ನಿಮಗೆ ಸಮನಾರೈ ಎಂಬ ದಾಸರ ಪದ ಹಾಡುತ್ತ ಯುವಕರು ಉತ್ಸಾಹದಿಂದ ರಥೋತ್ಸವದ ಮುಂದೆ ಕುಣಿದು ಕುಪ್ಪಳಿಸಿದರು.ಈ ವೇಳೆ ವಿಪ್ರ ಸಮಾಜದ ಮುಖಂಡರಾದ ಬಿ.ಎಲ್.ಬಬಲಾದಿ, ಎಸ್.ಎನ್.ಕುಲಕರ್ಣಿ, ಕಾರ್ಯದರ್ಶಿ ಲಕ್ಷ್ಮೀಕಾಂತ ದೇಶಪಾಂಡೆ, ಕೆ.ವ್ಹಿ.ಕುಲಕರ್ಣಿ, ಬಿ.ಡಿ.ಚಿನಗುಂಡಿ, ಗೋವಿಂದ ಕುಲಕರ್ಣಿ, ಭೀಮಾಚಾರ್ಯ ಜೋಶಿ, ರಮೇಶ ಕುಲಕರ್ಣಿ, ಪ್ರಸಾದ ಸೋಮಾಪುರ, ಸಂತೋಷ ದೇಶಪಾಂಡೆ, ಪ್ರವೀಣ ಸೋಮಾಪುರ, ಅಪ್ಪಾರಾವ ದೇಶಪಾಂಡೆ, ಸಂತೋಷ ಕುಲಕರ್ಣಿ, ರಾಹುಲ್ ಗೂಡುರ, ಅಣ್ಣಾರಾವ ದೇಶಪಾಂಡೆ, ನಾಗರಾಜ ಕುಲಕರ್ಣಿ, ಸುಶೀಲೇಂದ್ರ ದೇಶಪಾಂಡೆ, ಅರ್ಚಕ ಆನಂದಚಾರ್ಯ ಜಂಬಗಿ, ಕೆ.ಜಿ.ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಪ್ರಲ್ಹಾದ ಜೋಶಿ ವಿಪ್ರ ಸಮಾಜ, ಗುರುಸಾರ್ವಭೌಮ ಯುವಕ ಮಂಡಳ, ಗಾಯತ್ರಿ ಭಜನಾ ಮಂಡಳದ ಸರ್ವ ಸದಸ್ಯರು ಇದ್ದರು.