ಬೆಳ್ಳಿ ತೊಟ್ಟಿಲಲ್ಲಿ ಬಾಲಕೃಷ್ಣನ ಮೂರ್ತಿಗೆ ಆರಾಧನೆ

| Published : Aug 17 2025, 02:44 AM IST

ಬೆಳ್ಳಿ ತೊಟ್ಟಿಲಲ್ಲಿ ಬಾಲಕೃಷ್ಣನ ಮೂರ್ತಿಗೆ ಆರಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ತಾಸಿಗೂ ಅಧಿಕ ಕಾಲ ಭಜನೆ ಮಾಡಿದ್ದು ಎಲ್ಲರನ್ನೂ ಭಕ್ತಿಯ ಕಡಲಲ್ಲಿ ತೇಲಿಸಿತ್ತು.

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಇಲ್ಲಿನ ವೆಂಕಟ್ರಮಣ ದೇವಾಲಯದಲ್ಲಿ ಶುಕ್ರವಾರ ಮಧ್ಯ ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನಡೆದು ನಂತರ ಬೆಳ್ಳಿಯ ತೊಟ್ಟಿಲಲ್ಲಿ ಬೆಳ್ಳಿಯ ಬಾಲಕೃಷ್ಣನ ಮೂರ್ತಿಯನ್ನು ಇಟ್ಟು ಆರಾಧಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಇದಕ್ಕೂ ಮೊದಲು ಇಲ್ಲಿನ ಲಕ್ಷ್ಮಿ ವೆಂಕಟೇಶ ಪ್ರೇಮ ಫಂಡ್ ಸಂಘದಿಂದ ವಾರ್ಷಿಕವಾಗಿ ನಡೆದ ಅಹೋರಾತ್ರಿ ಭಜನಾ ಸಪ್ತಾಹ ಸೇವೆಯಲ್ಲಿ ಸ್ಥಳೀಯರ ಜೊತೆಯಾಗಿ ಕೃಷ್ಣನ ನಾಮಸ್ಮರಣೆ ಮಾಡುತ್ತಾ ಎರಡು ತಾಸಿಗೂ ಅಧಿಕ ಕಾಲ ಭಜನೆ ಮಾಡಿದ್ದು ಎಲ್ಲರನ್ನೂ ಭಕ್ತಿಯ ಕಡಲಲ್ಲಿ ತೇಲಿಸಿತ್ತು. ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡುವುದರೊಂದಿಗೆ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವ ನೆರವೇರಿತು.

ಇದರಂತೆ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ಮಂದಿರದಲ್ಲಿ ಶುಕ್ರವಾರ ರಾತ್ರಿ ವಿಶೇಷ ಪೂಜೆಯೊಂದಿಗ ಬಾಲಕೃಷ್ಣ ಆರಾಧಿಸಲಾಯಿತು. ದೇವರಿಗೆ ಹೂವಿನ ಅಲಂಕಾರ, ಮಂದಿರಕ್ಕೆ ವಿದ್ಯುತ್ ದೀಪಾಲಂಕಾರ ಭಕ್ತರನ್ನು ಆಕರ್ಷಿಸಿರತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪೂಜೆ ನೆರವೇರಿಸಿದರು.

ಈ ಭಾಗದಲ್ಲಿರುವ ವಿವಿಧ ಶ್ರೀಕೃಷ್ಣನ ಮಂದಿರಗಳಲ್ಲಿ ಸಹ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಪ್ರತಿ ಮನೆಯಲ್ಲಿ ಸಹ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.