ಸಾರಾಂಶ
ಬೈಲಹೊಂಗಲದಲ್ಲಿ ಪ್ರಭುನೀಲಕಂಠ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಗಣ್ಯಮಾನ್ಯರು ಅಯೋಧ್ಯಾ ಪ್ರಭು ಶ್ರೀರಾಮ ಮಂದಿರದಿಂದ ಬಂದ ಪವಿತ್ರ ಮಂತ್ರಾಕ್ಷತೆ ಕಳಶಕ್ಕೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲೂಕು ಘಟಕದಿಂದ ಅಯೋಧ್ಯಾ ಪ್ರಭು ಶ್ರೀರಾಮ ಮಂದಿರದಿಂದ ಬಂದ ಆಮಂತ್ರಣದ ಪವಿತ್ರ ಮಂತ್ರಾಕ್ಷತೆ ಕಳಶಕ್ಕೆ ಮಂಗಳವಾರ ಸಂಜೆ ಪೂಜೆ ಸಲ್ಲಿಸಿ ಭವ್ಯ ಸ್ವಾಗತ ಕೋರಲಾಯಿತು. ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಲ್ಲಿ ಸೇರಿದ ಹಿಂದೂ ಸಮಾಜ ಬಾಂಧವರು ಅಯೋಧ್ಯಾ ಪ್ರಭು ಶ್ರೀರಾಮ ಮಂದಿರದಿಂದ ಬಂದ ಆಮಂತ್ರಣದ ಪವಿತ್ರ ಮಂತ್ರಾಕ್ಷತೆ ಕಳಶಕ್ಕೆ ಪುಷ್ಪ ಮಾಲೆ ಸಲ್ಲಿಸಿ ಶ್ರದ್ಧೆ, ಭಕ್ತಿಯಿಂದ ಬರ ಮಾಡಿಕೊಂಡರು. ಚನ್ನಮ್ಮನ ವೃತ್ತದಿಂದ ಆರಂಭವಾದ ಶೋಭಾಯಾತ್ರೆ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತ, ಪ್ರಮುಖ ಬಜಾರ ರಸ್ತೆ ಮಾರ್ಗವಾಗಿ ಶಾಖಾ ಮೂರುಸಾವಿರಮಠಕ್ಕೆ ತೆರಳಿತು. ಮೆರವಣಿಗೆಯುದ್ದಕ್ಕೂ ಹನುಮ ಮಾಲಾಧಾರಿಗಳು, ವಿಶ್ವಹಿಂದು, ಬಜರಂಗದಳ ಕಾರ್ಯಕರ್ತರು ಜೈ ಶ್ರೀರಾಮ, ಜೈ ಹನುಮಾನ ಎಂದು ಘೋಷಣೆ ಕೂಗಿದರು. ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಮಂತ್ರಾಕ್ಷತೆ ಕಳಶಕ್ಕೆ ಪೂಜೆ ಸಲ್ಲಿಸಿ ಸ್ವಾಗತಿಸಿ ಮಾತನಾಡಿ, ಶ್ರೀರಾಮ ಜನ್ಮ ಭೂಮಿಯಿಂದ ಪೂಜಿಲ್ಪಟ್ಟ ಅಕ್ಷತಾ ಕಳಶ ವಿಶ್ವಹಿಂದು ಪರಿಷದ್, ಬಜರಂಗದಳ ಮೂಲಕ ಬೈಲಹೊಂಗಲ ನಾಡಿಗೆ ಬಂದು ತಲುಪಿದೆ. ಇದು ಈ ನಾಡಿನ ಜನರ ಸುದೈವ ಆಗಿದೆ. ಈ ಕಾರ್ಯದಲ್ಲಿ ಪ್ರತಿಯೊಬ್ಬರು ಜಾತಿ, ಮತ, ಧರ್ಮ ಮರೆತು ಒಂದಾಗಿ ತೊಡಗಿಸಿಕೊಂಡು ಪವಿತ್ರ ಮಂತ್ರಾಕ್ಷತೆಯನ್ನು ಪೂಜಿಸಬೇಕು ಎಂದರು.ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಮ ಮಂದಿರ ನಿರ್ಮಾಣದ ಕನಸು ಈಡೇರಿರುತ್ತಿರುವುದು ಪ್ರತಿಯೊಬ್ಬ ರಾಮನ ಭಕ್ತರಲ್ಲಿ ಹರ್ಷ ತಂದಿದೆ ಎಂದರು. ವಿಶ್ವಹಿಂದು ಪರಿಷದ್ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ ಮಾತನಾಡಿದರು.
ಶಾಸಕ ಮಹಾಂತೇಶ ಕೌಜಲಗಿ, ಉದ್ಯಮಿ ವಿಜಯ ಮೆಟಗುಡ್ಡ, ನಟ ಶಿವರಂಜನ ಬೋಳನ್ನವರ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಅಮಿತ ಪಾಟೀಲ, ಆನಂದ ತುರಮರಿ, ಎಫ್.ಎಸ್.ಸಿದ್ಧನಗೌಡರ, ನಾರಾಯಣ ನಲವಡೆ, ವಿವೇಕ ಪೂಜೇರ, ಗುರುಪಾದ ಕಳ್ಳಿ, ಸುಭಾಸ ತುರಮರಿ, ರವಿ ತುರಮರಿ, ಮಾರುತಿ ತುರಮರಿ, ಅನೇಕರು ಇದ್ದರು.------