ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನದಿಗಳಿಗೆ ನಮನ ಸಲ್ಲಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ಕೆಆರ್‌ಎಸ್‌ನಲ್ಲಿ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮಗೆ ಅನ್ನ ಕೊಡುವ ಮಾತೆಗೆ ಶೃದ್ಧೆಯಿಂದ ನಮಿಸಿ ಅವಳ ಕೃಪೆಗೆ ಪಾತ್ರರಾಗುವ ಅವಕಾಶ ಸಿಕ್ಕಿದೆ. ಇದೊಂದು ಪವಿತ್ರ ಕಾರ್ಯ ಎಂದರು.
ಕಾವೇರಿ ಸನ್ನಿಧಿಯಲ್ಲಿ ಮಾತೆಗೆ ನಮನ ಸಲ್ಲಿಸುವ ಕಾರ್ಯವನ್ನು ಸರ್ಕಾರ ಹಮ್ಮಿಕೊಂಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಭಿಲಾಷೆಯಂತೆ ಆಯೋಜಿಸಲಾಗಿದೆ. ದಕ್ಷಿಣ ಕರ್ನಾಟಕದ ಜೀವನದಿ, ಕೋಟ್ಯಂತರ ಜನರ ದಾಹ ನೀಗಿಸುವ ರೈತರ ಬಾಳು ಬೇಳಗುವ ಈ ಜೀವನದಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿಯನ್ನು ಕೆಲವರು ವಿರೋಧಿಸಿ ಕೋರ್ಟ್‌ಗೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ವಿರೋಧಿಸುವವರು ಕೂಡ ಮನಸ್ಸು ಬದಲಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಶಾಸಕ ದಿನೇಶ್ ಗೂಳಿಗೌಡ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಭವ್ಯ ಸ್ವಾಗತ
ಕನ್ನಡಪ್ರಭ ವಾರ್ತೆ ಕಿಕ್ಕೇರಿರಾಮನಹಳ್ಳಿಯಲ್ಲಿ ನೂತನವಾಗಿ ಪ್ರತಿಷ್ಟಾಪಿಸಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನಾಗರೀಕರು ಸಂಭ್ರಮದಿಂದ ಬರಮಾಡಿಕೊಂಡರು.
ಹೋಬಳಿಯ ಗಡಿಭಾಗದ ತುಳಸಿಗೇಟ್ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗ್ರೇಡ್‌ನ ಯುವಕರು ತಮಟೆ, ನಗಾರಿ, ಡೊಳ್ಳು ಕುಣಿತ ಕಲಾ ತಂಡದೊಂದಿಗೆ ಸ್ವಾಗತಿಸಿದರು. ಆಳೆತ್ತರದ ಕಂಚಿನ ರಾಯಣ್ಣನ ಪ್ರತಿಮೆಗೆ ಕ್ರೇನ್ ಮೂಲಕ ಪುಷ್ಪವೃಷ್ಟಿ ಮಾಡಿದರು. ಹಲವರು ಸಿಹಿ ವಿತರಿಸಿ ಅಭಿಮಾನ ಮರೆದರು.ಬೆಂಗಳೂರಿನಲ್ಲಿ ವಾಸವಿರುವ ರಾಮನಹಳ್ಳಿ ಯುವಕರು ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಬ್ರಿಗೇಡ್ ಸಂಘ ಸ್ಥಾಪಿಸಿಕೊಂಡು ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಚೀಟಿ ಹಾಕಿಕೊಂಡು ಹಣ ಕೂಡಿಟ್ಟು ಸುಮಾರು 8 ಲಕ್ಷ ರು ವೆಚ್ಚದಲ್ಲಿ 10 ಅಡಿ ಎತ್ತರದ ರಾಯಣ್ಣ ಪ್ರತಿಮೆಯನ್ನು ಸವದತ್ತಿಯ ಊಗರಗೋಳದ ಶಿಲ್ಪಿ ಬಳಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಗ್ರಾಮಕ್ಕೆ ತರುವಾಗ ಹೋಬಳಿ ವ್ಯಾಪ್ತಿ ದಾರಿ ಯುದ್ದಕ್ಕೂ ರಾಯಣ್ಣನ ಅಭಿಮಾನಿಗಳು ಪುಷ್ಪಾರ್ಚನೆ, ಜೈಕಾರ ಹಾಕುತ್ತ ಸ್ವಾಗತಿಸಿದರು.
ಈ ವೇಳೆ ಮುಖಂಡ ಡೈರಿ ಕುಮಾರ್, ಆರ್.ಎಸ್. ಮಂಜು, ರವೀಂದ್ರ, ಗೌರೀಶ, ಮಂಜೇಗೌಡ, ಚಿಕ್ಕೇಗೌಡ, ಪ್ರತೀಪ, ಅಣ್ಣೇಗೌಡ, ಬ್ರಿಗೇಡ್ ಗೌರವಾಧ್ಯಕ್ಷ ಸುರೇಶ್, ಅಧ್ಯಕ್ಷ ಮನು, ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಹರೀಶ್, ಸಂಘಟನಾ ಕಾರ್ಯದರ್ಶಿ ಸಾಗರ್, ಸದಸ್ಯರಾದ ಪ್ರದೀಪ, ಹರೀಶ್, ದೇವರಾಜು, ಅನಿಲ್, ಪೃಥ್ವಿ, ಸ್ವಾಮಿ, ದಯಾನಂದ, ಚಂದ್ರು, ರಮೇಶ್, ಲೋಕೇಶ್, ಹೇಮಂತ್, ರವಿ ಮತ್ತಿತರರಿದ್ದರು.