ಕುಸ್ತಿ ಪಂದ್ಯಾವಳಿ ವಿಶ್ವದ ಪ್ರಾಚೀನ ಕ್ರೀಡೆ: ಪಟ್ಟಣಶೆಟ್ಟಿ

| Published : May 21 2024, 12:39 AM IST

ಕುಸ್ತಿ ಪಂದ್ಯಾವಳಿ ವಿಶ್ವದ ಪ್ರಾಚೀನ ಕ್ರೀಡೆ: ಪಟ್ಟಣಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಕುಸ್ತಿ ಪಂದ್ಯಾವಳಿ ವಿಶ್ವದ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹಾಗೂ ಜನಪ್ರಿಯತೆ ಹೊಂದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಕುಸ್ತಿ ಪಂದ್ಯಾವಳಿ ವಿಶ್ವದ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹಾಗೂ ಜನಪ್ರಿಯತೆ ಹೊಂದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆಯ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿಯ ಉದ್ಘಾಟಿಸಿ ಮಾತನಾಡಿದರು. ಒಲಿಂಪಿಕ್ಸ್‌ನಲ್ಲಿ ಕುಸ್ತಿ ಪ್ರತಿಷ್ಠಿತ ಕ್ರೀಡೆಯಾಗಿದೆ. ಈ ಮೊದಲು ಇದನ್ನು ಮಲ್ಲಯುದ್ಧವೆಂದು ಕರೆಯಲಾಗುತಿತ್ತು. ಇಂದು ಭಾರತೀಯ ಕ್ರೀಡಾ ಪ್ರಾಧಿಕಾರ ಇಂತಹ ಅಪ್ರತಿಮ ಕುಸ್ತಿ ಪಟುಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದೆ. ಆದ್ದಾಗಲೂ ಕುಸ್ತಿ ಪಟುಗಳ ಸಂಖ್ಯೆ ಕುಸಿಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್ ಪ್ರಸಿದ್ದವಾಗಿವೆ. ಮೈಸೂರಿನ ದಸರಾ ಉತ್ಸವದಲ್ಲಿ ಕುಸ್ತಿ ಪಂದ್ಯಾಟ ಜರುಗುತ್ತವೆ. ಉತ್ತರ ಕರ್ನಾಟಕದ ಕುಸ್ತಿ ಪಟುಗಳೇ ಬಹುಮಾನ ಪಡೆದುಕೊಳ್ಳುತ್ತಾರೆ. ವಿಶ್ವದ ಹಾಗು ರಾಷ್ಟ್ರೀಯ ಕುಸ್ತಿ ಪಂದ್ಯಗಳಲ್ಲಿ ಭಾರತೀಯ ಕುಸ್ತಿ ಪಟುಗಳು ಪ್ರಸಿದ್ಧರಾಗಿದ್ದು, ಮಹಿಳಾ ಕುಸ್ತಿ ಪಟುಗಳು ಸಹ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಅವಕಾಶ ಹಾಗು ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಸಂಘಟಕರಾದ ಶ್ರೀಕಾಂತ ಚೌಧರಿ, ಸಿದ್ದು ಪವಾರ, ಜಗನ್ನಾಥ ಚೌಧರಿ, ಚಂದ್ರಶೇಖರ ಮಲಘಾಣ, ಅಶೋಕ ಬಗಲಿ, ರಾಜೇಂದ್ರ ಬಿರಾದಾರ, ಬಸನಗೌಡ ಬಿರಾದಾರ, ಮಲ್ಲಪ್ಪ ಕತ್ನಳ್ಳಿ, ಪ್ರಕಾಶ ಚಿಕ್ಕಲಕಿ, ಈರನಗೌಡ ಬಿರಾದಾರ, ಮುದಸ್ಸರ ವಾಲಿಕಾರ, ರವಿ ಬಿರಾದಾರ, ದುಂಡಪ್ಪ ಬಗಲಿ, ಮಲ್ಲಪ್ಪ ಭಾವಿಕಟ್ಟಿ, ಬಸನಗೌಡ ಬಿರಾದಾರ, ವಿಠ್ಠಲ ಸಾರವಾಡ, ಈರಪ್ಪಾ ಸಾವಳಗಿ, ಪ್ರಕಾಶ ಚಿಕ್ಕಲಕಿ, ಮಹೇಶ ಮಾಲಗಾರ, ಮಲ್ಲಿಕಾರ್ಜುನ ಕಂಬಾರ, ರಾಮಗೊಂಡ ಪಡಕೋಟಿ, ಶ್ರೀಕಾಂತ ಗೊಂಗಡಿ, ಸಿದ್ದನಗೌಡ ಬಿರಾದಾರ, ಸುಭಾಷ ಯಂಭತ್ತನಾಳ, ಗೌಡಪ್ಪ ಬೆನಕಟ್ಟಿ, ಲಚ್ಚಪ್ಪ ಬಗಲಿ, ಯಲ್ಲಪ್ಪ ದುರ್ಗೊಗೋಳ, ಖಾನಪ್ಪ ಚಿತ್ತಾಪೂರ, ಚಂದ್ರಶೇಖರ ಇಂಡಿ, ಸುರೇಶ ಇಂಡಿ, ಅಪ್ಪು ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.