ಸಾರಾಂಶ
ಅನ್ನ, ಅಕ್ಷರ, ಆಧ್ಯಾತ್ಮ ದಾಸೋಹಗಳು ಸರ್ವಕಾಲಕ್ಕೂ ಅವಶ್ಯಕತೆಯಿದೆ. ದಾನವ ಮಾನವನಾಗಬೇಕು. ಮಾನವ ದೇವಮಾನವನಾಗಬೇಕು. ದೇವಮಾನವ ಹಂಚುವ ಪದಾರ್ಥ ಪ್ರಸಾದವಾಗುತ್ತದೆ. ತನ್ಮೂಲಕ ದಾಸೋಹವೇ ದೇವಧಾಮವಾಗಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅನ್ನ, ಅಕ್ಷರ, ಆಧ್ಯಾತ್ಮ ದಾಸೋಹಗಳು ಸರ್ವಕಾಲಕ್ಕೂ ಅವಶ್ಯಕತೆಯಿದೆ. ದಾನವ ಮಾನವನಾಗಬೇಕು. ಮಾನವ ದೇವಮಾನವನಾಗಬೇಕು. ದೇವಮಾನವ ಹಂಚುವ ಪದಾರ್ಥ ಪ್ರಸಾದವಾಗುತ್ತದೆ. ತನ್ಮೂಲಕ ದಾಸೋಹವೇ ದೇವಧಾಮವಾಗಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ಬಾಗಲಕೋಟೆ ನವನಗರದ ಶ್ರೀ ಚಂದ್ರದೇವಿ ಭೋವಿ-ವಡ್ಡರ್ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡ ಚಂದ್ರಾದೇವಿ, ದುರ್ಗದೇವಿ, ವಿನಾಯಕ, ಹಾಗೂ ಮಾರುತಿ ದೇವಾಲಯಗಳ ಜಾತ್ರಾ ಮಹೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶ್ರಮಿಕ ವರ್ಗದವರು ಬಡತನದಲ್ಲಿ ಹುಟ್ಟಿದ್ದರೂ ಸತತ ಕಾಯಕ ಮಾರ್ಗದೊಂದಿಗೆ ತಂತ್ರಜ್ಞಾನ ಲೋಕಜ್ಞಾನ ಪಡೆದು ಬಡತನದಿಂದ ವಿಮುಕ್ತಿ ಹೊಂದಬೇಕು. ಶರಣವಾಣಿಯಂತೆ ಕಾಯಕ ಮಾಡಿ ಶೇ.50ರಷ್ಟು ದಾಸೋಹ ಮಾಡಬೇಕು. ಪರಸ್ಪರ ಸಹಕಾರ ಸಹಾಯ ಮನೋಭಾವದಿಂದ ಸಮಸಮಾಜ ಕಟ್ಟಲು ಸರ್ವರ ಸಹಕಾರ ಮನೋಭಾವ ಬೆಳೆಯಬೇಕು ಎಂದು ತಿಳಿಸಿದರು.ಸಮಾರಂಭದಲ್ಲಿ ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀ ಸಾನ್ನಿಧ್ಯವಹಿಸಿದ್ದರು. ಉಮೇಶ ಮೇಟಿ, ಸತ್ಯನಾರಾಯಣ, ಸಂಘದ ಅಧ್ಯಕ್ಷರಾದ ಸಿದ್ಧರಾಮಪ್ಪ ಪಾತ್ರೋಟ, ರಾಮಚಂದ್ರ ಎಪ್ ಮುಧೋಳ, ರಂಗಪ್ಪ ಮುತ್ತಪ್ಪ, ಪಾತ್ರೋಟ, ಋಷಿ ಪಾತ್ರೋಟಿ, ರಾಜು ಯ ಮಾಡಮಗೇರಿ, ಚಂದ್ರಶೇಖರ ಪಾತ್ರೋಟಿ, ಪ್ರಕಾಶ ಎಲ್ ವಡ್ಡರ, ಮಲ್ಲಿಕಾಜರ್ುನ ಕ ಪಾತ್ರೋಟ, ಪರಶುರಾಮ ಆರ್ ಪಾತ್ರೋಟಿ, ಸದಾಶಿವ ಪಾತ್ರೋಟ, ನಾಗೇಶ್ ಪಾತ್ರೋಟ ಪಾತ್ರೋಟ ಸಮಾಜದ ಹಿರಿಯರು ಯುವಕರು ಮಹಿಳೆಯರು ಭಾಗವಹಿಸಿದ್ದರು.