ಕನ್ನಡನಾಡಿಗೆ ಸಾಹಿತಿಗಳು, ಕವಿಗಳು ಕೊಡುಗೆ ಅಪಾರ

| Published : Nov 02 2024, 01:21 AM IST

ಸಾರಾಂಶ

ವಿಜಯನಗರ ಸಾಮ್ರಾಜ್ಯ 1565ರಲ್ಲಿ ಪಥನವಾಗಿ 390 ವರ್ಷಗಳ ನಂತರ ಕನ್ನಡಿಗರೆಲ್ಲಾ ಒಂದುಗೂಡಿ 69 ವರ್ಷಗಳೇ ಆಗಿವೆ. ನಾಡು, ನುಡಿಗೆ ಸಾಹಿತಿಗಳು, ಕವಿಗಳು ಕೊಟ್ಟ ಕೊಡುಗೆ ಅನನ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರಲ್ಲಿ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಶಾಸಕ ದೇವೇಂದ್ರಪ್ಪ - - - ಕನ್ನಡಪ್ರಭ ವಾರ್ತೆ ಜಗಳೂರು

ವಿಜಯನಗರ ಸಾಮ್ರಾಜ್ಯ 1565ರಲ್ಲಿ ಪಥನವಾಗಿ 390 ವರ್ಷಗಳ ನಂತರ ಕನ್ನಡಿಗರೆಲ್ಲಾ ಒಂದುಗೂಡಿ 69 ವರ್ಷಗಳೇ ಆಗಿವೆ. ನಾಡು, ನುಡಿಗೆ ಸಾಹಿತಿಗಳು, ಕವಿಗಳು ಕೊಟ್ಟ ಕೊಡುಗೆ ಅನನ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 30 ವರ್ಷಗಳ ನಂತರ ಜಗಳೂರಿನಲ್ಲಿ ಡಿ.28 ಮತ್ತು 29ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿಜಾತ್ರೆ ನಡೆಯಲಿದೆ ಎಂದರು.

ತರಳಬಾಳು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ದೂರದೃಷ್ಟಿ ಫಲವಾಗಿ ತಾಲೂಕಿನಲ್ಲಿ ಎಲ್ಲ ಕೆರೆಗಳು ಭಾಗಶಃ ತುಂಬಿವೆ. ಹೀಗಾಗಿ ''''''''ಜಗಳೂರು ಉತ್ಸವ'''''''' ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರದ 5 ಗ್ಯಾರಂಟಿಗಳು ಜನೋಪಕಾರಿಯಾಗಿವೆ ಎಂದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಭವ್ಯ ಪರಂಪರೆ, ಇತಿಹಾಸ ಸಂಸ್ಕೃತಿಯ ಈ ನಾಡಿನಲ್ಲಿ ಜನಿಸಿದ ನಾವೇ ಧನ್ಯ. ನಾವು ಎಂದಿಗೂ ಕನ್ನಡಾಂಬೆಯ ಋಣ ಮರೆಯಬಾರದು ಎಂದರು.

ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್ ವಿಶೇಷ ಉಪನ್ಯಾಸ ನೀಡಿ, ವಿಶ್ವಕ್ಕೆ ಕನ್ನಡದ ಕೊಡುಗೆಗಳಾದ ಶಿಲಾ ಶಾಸಕನಗಳು, ಭಾಷೆ, ಸಂಸ್ಕೃತಿಯ ಇತಿಹಾಸದ ಬಗ್ಗೆ ತಿಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕಿಲಾರಿ ಕೃಷ್ಣಮೂರ್ತಿ, ಡಿ.ಸಿ.ಮಲ್ಲಿಕಾರ್ಜುನ್, ಡಿ.ಟಿ.ಆದಂ ಸೇರಿದಂತೆ 10 ಸಾಧಕರನ್ನು ಶಾಸಕರು ಸನ್ಮಾನಿಸಲಾಯಿತು. ಇನ್‌ಸ್ಪೆಕ್ಟರ್‌ ಎಂ.ಶ್ರೀನಿವಾಸ ರಾವ್, ತಾಪಂ ಇಒ ಎನ್.ಕೆ.ಕೆಂಚಪ್ಪ, ಬಿಇಒ ಈ. ಹಾಲಮೂರ್ತಿ, ಪಪಂ ಚೀಫ್ ಆಫೀಸರ್ ಸಿ.ಲೋಕ್ಯನಾಯ್ಕ್, ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

- - - (ಬಾಕ್ಸ್-1) ಆಸನಗಳ ಕುಂಟುನೆಪ: ರಾಜ್ಯೋತ್ಸವಕ್ಕೆ ಗೈರು ಜಗಳೂರು ಪಪಂ ಅಧ್ಯಕ್ಷ, ಉಪಾಧ್ಯಕ್ಷರು, ಎಲ್ಲ ಪಕ್ಷಗಳ ಸದಸ್ಯರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಯೋಜಕರು ಸರಿಯಾದ ವ್ಯವಸ್ಥೆ ಮಾಡದೇ, ಚುನಾಯಿತ ಸದಸ್ಯರನ್ನು ಶಿಷ್ಟಾಚಾರದಂತೆ ನಡೆಸಿಕೊಂಡಿಲ್ಲ ಎಂದು ಸಭೆ ಆರಂಭಕ್ಕೂ ಮುನ್ನ ಹೊರನಡೆದರು. ಜನಪ್ರತಿನಿಧಿಗಳಾಗಿರುವ ಸದಸ್ಯರಿಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅವಮಾನ ಮಾಡಲಾಗಿದೆ. ಮುಂದಿನ ಆಸನಗಳನ್ನು ವ್ಯವಸ್ಥೆ ಮಾಡಲಾಗದೇ ಹಿಂಭಾಗ ಖರ್ಚಿಗಳನ್ನು ಹಾಕಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಪಪಂ ಅಧ್ಯಕ್ಷ ನವೀನ್, ಪಪಂ ಮಾಜಿ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್, ಕಾಂಗ್ರೆಸ್ ಸದಸ್ಯ ಲುಕ್ಮಾನ್ ಉಲ್ಲಾ ಖಾನ್, ಅರಿಶಿಣಗುಂಡಿ ಮಂಜುನಾಥ್, ರಮೇಶ್‌ ರೆಡ್ಡಿ, ಕುಮಾರ್, ಸದಸ್ಯರು ಬೇಸರ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಗೈರಾದರು.

- - - -1ಜೆಎಲ್ಆರ್ಚಿತ್ರ1ಎ:

ಜಗಳೂರು ಪಟ್ಟಣದ ಬಯಲು ರಂಗ ಮಂದಿರದಲ್ಲಿ 69ನೇ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.