ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಕವನ ರಚಿಸುವುದು ಪ್ರತಿಭಾವಂತರಿಗೆ ಸಾಧ್ಯ. ವಚನ ಶಿಲಾಶಾಸನ ವಚನ ಮಂಟಪ ನಿರ್ಮಿಸಿದ ಲಿಂ.ಚನ್ನಬಸವ ಸ್ವಾಮೀಜಿಯವರ ಕುರಿತು ಕವನ ವಾಚಿಸಿರುವುದು ಶ್ಲಾಘನೀಯ ಎಂದು ಮಸಬಿನಾಳ ದಾಸೋಹ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಕವನ ರಚಿಸುವುದು ಪ್ರತಿಭಾವಂತರಿಗೆ ಸಾಧ್ಯ. ವಚನ ಶಿಲಾಶಾಸನ ವಚನ ಮಂಟಪ ನಿರ್ಮಿಸಿದ ಲಿಂ.ಚನ್ನಬಸವ ಸ್ವಾಮೀಜಿಯವರ ಕುರಿತು ಕವನ ವಾಚಿಸಿರುವುದು ಶ್ಲಾಘನೀಯ ಎಂದು ಮಸಬಿನಾಳ ದಾಸೋಹ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳವರ 92 ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಇಂಗಳೇಶ್ವರ ಉತ್ಸವದಲ್ಲಿ ಲಿಂ.ಚನ್ನಬಸವ ಸ್ವಾಮೀಜಿಗಳ 95 ನೇ ಗುರುವಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಕವಿಗೋಷ್ಠಿ ಉದ್ಘಾಟಿಸಿದ ಬಸವನಬಾಗೇವಾಡಿ ವಿರಕ್ತಮಠ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕವನ ವಾಚನ ಮಾಡುವವರು ತುಂಬ ಉಪಯುಕ್ತ ಕವನಗಳನ್ನು ರಚಿಸಿ ವಾಚಿಸಿರುವುದು ತುಂಬ ಪ್ರಶಂಸನೀಯ. ಬಸವಣ್ಣನವರ, ಚನ್ನಬಸವ, ಅಕ್ಕಮಹಾದೇವಿ,ಮುಂತಾದದವರ ಕುರಿತು ಗುಣಮಟ್ಟದ ಕವಿತೆಗಳು ಮೂಡಿಬಂದಿದ್ದು ಶ್ಲಾಘನೀಯ ಕಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೂವಿನಹಿಪ್ಪರಗಿ ಪತ್ರಿಮಠದ ದ್ರಾಕ್ಷಾಯಿಣಿ ಮಾತನಾಡಿ, ವಚನ ಶಿಲಾಶಾಸನ ಮಂಟಪ ಇಂಗಳೇಶ್ವರ ಇಂದು ಬಸವಾದಿ ಶರಣರ ಕಾಯಕ ತತ್ವಗಳ ಕೇಂದ್ರವಾಗಿದೆ. ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಠಗಳೊಂದಿಗೆ ಸೇರಿ ಸಾಹಿತ್ಯವನ್ನು ಬೆಳೆಸುವ ಹಾಗೂ ಉಳಿಸುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಿ.ಮತೂ೯ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಆರ್‌.ಜಿ.ಅಳ್ಳಗಿ, ನಿಂಗಪ್ಪ ಬೊಮ್ಮನಳ್ಳಿ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಮಾತನಾಡಿದರು.

ಲೋಟಗೇರಿ ಕಣಕಾಲಮಠದ ಗುರುಮೂರ್ತಿ, ಚಡಚಣ ವಿರಕ್ತಮಠದ ಷಡಕ್ಷರ ಸ್ವಾಮೀಜಿ, ಪಡೆಕನೂರ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ,

ವಡವಡಗಿಯ ವೀರಸಿದ್ಧ ಸ್ವಾಮೀಜಿ, ಬಾಬುರಾವ ಮಹಾರಾಜ ಹೊನವಾಡ ಇದ್ದರು.

ಕವಿಗೋಷ್ಠಿಯಲ್ಲಿ ಶಾಂತಲಾ ಪಾಟೀಲ, ರೂಪಾ ರಜಪೂತ, ಪರವೀನ ಶೇಖ, ಸಂಗಮೇಶ ಕರೆಪ್ಪಗೋಳ, ಸುರೇಶ ಪೂಜಾರಿ, ವೈಶಾಲಿ ಬೀಳೂರ,

ಸಿ.ಎಲ್.ಬಿರಾದಾರ, ಮಮತಾ ಮುಳಸಾವಳಗಿ, ಅಂಬಣ್ಣ ಬಡಚಿ, ಚೈತನ್ಯ ಮುದ್ದೇಬಿಹಾಳ, ರಾಹುಲ ರಜಪೂತ, ಅಂಬಿಕಾ ಕರೆಕಪ್ಪಗೋಳ, ಸುಜಾತಾ ಹ್ಯಾಳದ, ದಾನಮ್ಮ ಹೂಗಾರ, ಶರಣಗೌಡ ಗೆಣ್ಣೂರ ಕವನ ವಾಚಿಸಿದರು. ಶರಣ ಚಿಂತಕಿ ರಶ್ಮಿ ಬದ್ನೂರ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸ್ವಾಗತಿಸಿ, ಗೌರವಿಸಿದರು. ಎಸ್.ಎಲ್.ಓಂಕಾರ ನಿರೂಪಿಸಿದರು. ಗಿರಿಜಾ ಸಜ್ಜನ ವಂದಿಸಿದರು.