ಸಾರಾಂಶ
ಯಾದಗಿರಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ನಾಯಕರು, ಡಾ. ಅಂಬೇಡ್ಕರ್ ಅವರ ಬದುಕು, ಹೋರಾಟದ ಹಾದಿಯನ್ನು ಮೆಲುಕು ಹಾಕಿ ಅವರ ಮಾನವೀಯ ಸಂದೇಶಗಳು ಇಂದಿನ ಯುವಕರಿಗೆ ಮಾದರಿಯಾಗಲಿ ಎಂದು ಹೇಳಿದರು.
ದೇಶದಲ್ಲಿ ಅಂಬೇಡ್ಕರ ಅವರು ಸಮಾಜದಲ್ಲಿ ಸಮಾನತೆ, ಸಾಮರಸ್ಯ, ಶೈಕ್ಷಣಿಕ ಪ್ರಗತಿ ಹಾಗೂ ಎಲ್ಲಾ ವರ್ಗದ ಬಡ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಶ್ರಮಿಸಿದರು. ಇಡೀ ವಿಶ್ವವೆ ಮೆಚ್ಚುವಂತ ಸಂವಿಧಾನವನ್ನು ರಚಿಸುವ ಮೂಲಕ ಅವರು ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪರಿಣಾಮ ಇಂದು ಎಲ್ಲರೂ ಅವರನ್ನು ಗೌರವಿಸುತ್ತಾರೆ ಎಂದು ತಿಳಿಸಿದರು.ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ನಗರ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಸುದರ್ಶನ ನಾಯಕ, ಮುಖಂಡರಾದ ನೀಲಕಂಠ ಬಡಿಗೇರ. ನಾಗನಾಥರಾವ ತೊಟ್ಲೂರ, ಸಾಯಿಬಣ್ಣಾ ಬೋರಬಂಡಾ, ಡಾ. ಭೀಮಣ್ಣ ಮೇಟಿ, ಶರಣಪ್ಪ ಮಾನೇಗಾರ, ಮಲ್ಲಣ್ಣ ದಾಸನಕೇರಿ, ಯುಡಾ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಭೀಮರಾಯ ಠಾಣಾಗುಂದಿ, ಸ್ಯಾಮಸಲ್ ಮಾಳಿಕೇರಿ, ರವಿ ಮಾಲಿ ಪಾಟೀಲ್, ಮಹ್ಮದ್ ಜಿಲಾನಿ, ವೆಂಕಟರಡ್ಡಿ ವನಕೇರಿ, ಸಾಯಿಬಣ್ಣ ಕೆಂಗೂರಿ, ಸುರೇಶ ಮಡ್ಡಿ, ಮಲ್ಲಿಕಾರ್ಜುನ ಈಟಿ, ಬಾಬುರಾವ ಇದ್ದರು.