ಸಾರಾಂಶ
ಯಡ್ರಾಮಿ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರಾಜ್ಯ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹದಗೆಟ್ಟ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದಾಗಿ ಜನಸಾಮಾನ್ಯರು ಶಾಸಕಾರಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರಾಜ್ಯ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹದಗೆಟ್ಟ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ.ಇದರಿಂದಾಗಿ ಜನಸಾಮಾನ್ಯರು ಶಾಸಕಾರಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಕೆಲವೊಂದು ಕಡೆ ರಸ್ತೆಗೆ ಹಾಕಿದ ಡಾಂಬರ್ ಕಿತ್ತು ಹೋಗಿದೆ. ಇಲ್ಲಿ ಡಾಂಬರ್ ರಸ್ತೆ ಇತ್ತೂ ಇಲ್ಲವೋ ಎಂದು ಅನುಮಾನಿಸುವಂತಾಗಿದೆ.
ಹೀಗಾಗಿ ಬಹುತೇಕ ಹಳ್ಳಿಗಳಲ್ಲಿ ದಾರಿಯೇ ಕಾಣದಂತಾಗಿದೆಯಂತೆ. ತಾಲೂಕಿನಿಂದ ನಾಗರಹಳ್ಳಿ ಗ್ರಾಮಕ್ಕೆ ಹೋಗುವ ಮಧ್ಯದಲ್ಲಿ ಸುಮಾರು ಎರಡು ಕಿಲೋಮೀಟರ್ ರಸ್ತೆಯಲ್ಲಿ ಗುಂಡಿಗಳದ್ದೆ ಸಾಮ್ರಾಜ್ಯ ಹಲವು ವರ್ಷಗಳಿಂದ ದುರಸ್ತಿ ಕಾಣದ ರಸ್ತೆಗಳಿಗೆ ಇತ್ತೀಚೆಗೆ ಕೆಂಪು ಮಣ್ಣು ಹಾಕಿ ತಗ್ಗು ಗುಂಡಿಗಳನ್ನು ಮುಚ್ಚಿದ್ದರು, ಆದ್ರೆ ಮಳೆಗಾಲ ಪ್ರಾರಂಭ ವಾಗಿದ್ದರಿಂದ ರಸ್ತೆ ಎಲ್ಲಾ ಕೆಂಪಾಗಿದೆ.ಸುತ್ತಲಿನ ಊರಿಗೆ ಹೋಗಬೇಕಾದರೂ ಕೂಡ ಹದಗೆಟ್ಟ ರಸ್ತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ, ಯಡ್ರಾಮಿಯಿಂದ ನಾಗರಹಳ್ಳಿ ಗ್ರಾಮಕ್ಕೆ ಹೋಗಬೇಕಾದರೆ ರಸ್ತೆಗಳು ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಎದ್ದಿರುವ ತಗ್ಗು ಗುಂಡಿಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿದೆ.
ಇನ್ನು ರಸ್ತೆ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಬಸ್ಸಗಳು ಗ್ರಾಮಕ್ಕೆ ತಲುಪುತ್ತಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಯಡ್ರಾಮಿ ತಾಲೂಕಿನ ಶಾಸಕ ಡಾ.ಅಜಯ್ ಸಿಂಗ್ ಅವರೇ ಒಮ್ಮೆ ಇತ್ತ ಕಡೆ ನೋಡಿ, ಹಲವು ಬಾರಿ ಈ ವಿಚಾರವಾಗಿ ಸಂಘಟನೆಗಳು ಮನವಿ ಮಾಡಿದರೂ ಜನಪ್ರತಿ ನಿಧಿಗಳು, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ತಾಲೂಕಿನಲ್ಲಿ ಗ್ರಾಮದ ರಸ್ತೆಗಳು ಅಭಿವೃದ್ಧಿ ಕಾಣದೇ ಜನರು, ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ನಾಗರಹಳ್ಳಿ ಗ್ರಾಮ ದಿಂದ ಯಡ್ರಾಮಿ ತಾಲೂಕಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು ಪರಿಸ್ಥಿತಿ ಹಿಡಿದ ಕೈಗನ್ನಡಿ.ಸಾರ್ವಜನಿಕರು ಹಳ್ಳಿಗಳಿಂದ ಯಡ್ರಾಮಿ ಪಟ್ಟಣಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಬೈಕ್ ಮೇಲೆ ಹೊದರೆ ಗುಂಡಿಗಳಲ್ಲಿ ಸಿಲುಕಿಕೊಳ್ಳೋದು ಗ್ಯಾರಂಟಿ. ಹಳ್ಳಿಗಳ ಕಡೆ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು.- ಗಿರೀಶ ಗುತ್ತೇದಾರ, ಯಡ್ರಾಮಿ ಸ್ಥಳೀಯ