ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸನಾತನ ಹಿಂದೂ ಧರ್ಮದಲ್ಲಿ ಮಹತ್ವದ ಆಚರಣೆಯಲ್ಲಿ ಯಜ್ಞೋಪವಿತಧಾರಣೆ ಎಂಬುವುದು ಕೂಡ ಅತೀವ ಮಹತ್ವದ್ದಾಗಿದ್ದು, ಜನಿವಾರ ಧಾರಣೆ ಎಂದು ಇದಕ್ಕೆ ಕರೆಯಲಾಗುತ್ತಿದೆ. ಇದು ವೈಜ್ಞಾನಿಕ ಮಹತ್ವಕೂಡ ಆಗಿದೆ ಎಂದು ವೇ.ವೆಂಕಟೇಶಆಚಾರ್ಯ ಗ್ರಾಂಪುರೋಹಿತವರು ನುಡಿದರು.ನಿಮಿಷಾಂಬಾ ದೇವಿ ಮಂದಿರದಲ್ಲಿ ಸೋಮವಂಶ ಆರ್ಯಕ್ಷತ್ರೀಯ ಸಮಾಜ ಬಾಂಧವರ ವತಿಯಿಂದ ಸೋಮವಾರ ಏರ್ಪಡಿಸಲಾದ ಯಜ್ಞೋಪವಿತ ಧಾರಣೆ ಕಾರ್ಯಕ್ರಮದಲ್ಲಿ ಹೋಮ-ಹವನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಯರ್ಜುವೇದಗಳಿಗೆ ಶ್ರಾವಣ ಶುದ್ಧ ಪುರ್ಣಮಿಯ ದಿವಸ ಧಾರಣೆ ಮಾಡಿಕೊಳ್ಳುವುದಾಗಿದೆ. ಈ ಯಜ್ಞೋಪವಿತ ಏಕೆ ಧಾರಣೆ ಮಾಡಿಕೊಳ್ಳಬೇಕೆಂದರೇ ಇದರಿಂದ ವೇದಗಳು ಪಟಿಸುವುದು ಮತ್ತು ಗಾಯತ್ರಿ ಮಂತ್ರವನ್ನು ಪಠಿಸುವ ಹಕ್ಕು ಸಿಗುತ್ತದೆ ಎಂದರು. ವೇದವನ್ನು ಅರ್ಥ ಅಧ್ಯಯನ ಮಾಡಿಕೊಳ್ಳಬೇಕಾದರೇ ಪ್ರತಿ ವರ್ಷವು ಈ ಗಾಯತ್ರಿ ಮಂತ್ರವನ್ನು ಹೇಳುವುದ್ದಾಗಿದೆ. ವಿಶೇಷವಾಗಿ ಯಜ್ಞೋಪವಿತ ಧಾರಣೆ ಕಾರ್ಯಕ್ರವನ್ನು ಬ್ರಾಹ್ಮಣ, ಕ್ಷತ್ರೀಯ, ವೈಶ್ಯರು ಯಜ್ಞೋಪವಿತ ಧಾರಣೆ ಮಾಡುವ್ದಾಗಿದೆ. ಮಕ್ಕಳಿಗೆ ಜ್ಞಾನಕೊಡುವಂತೆ ಪದ್ಧತಿ ಇದ್ದು, ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಕಾರ್ಯಕ್ರಮ ಮೊದಲಿಗೆ ಗಣಪತಿ ಪೂಜೆ ಪುಣ್ಯವಾಚನ ಸಪ್ತ ಋಷಿಗಳ ಪೂಜೆ, ಪ್ರಧಾನ ಹೋಮ ನಂತರಯಜ್ಞೋಪವಿತಂ ಧಾರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿಮಿಷಾಂಬಾದೇವಿ ಮಂದಿರದ ಅರ್ಚಕ ಯಲಗುರೇಶ ಆಚಾರ್ಯ ಚಬನೂರ ಅವರು ಶ್ರೀದೇವಿಗೆ ಮಹಾಭಿಷೇಕ ಬಿಲ್ವಾರ್ಚನೆ, ಪುಷ್ಪಾರ್ಚನೆ ನಡೆಸಿಕೊಟ್ಟರು. ಈ ಸಮಯದಲ್ಲಿ ಸೋಮವಂಶ ಆರ್ಯಕ್ಷತ್ರೀಯ ಸಮಾಜದ ಅಧ್ಯಕ್ಷ ಬಾಬುರಾವ್ ಚಿತಾಪುರ, ಉಪಾಧ್ಯಕ್ಷ ರಮೇಶ ಚವ್ಹಾಣ, ಕಾರ್ಯದರ್ಶಿ ಪ್ರದೀಪ ಭೂಸಾರೆ ಹಾಗೂ ತುಳಸಿರಾಂ ಚವ್ಹಾಣ, ಪ್ರಕಾಶ ಉಭಾಳೆ, ದೊಂಡಿರಾಂ ಮಿರಾಜಕರ, ಶಂಕರರಾವ್ ಉಭಾಳೆ, ಗಣಪತಿರಾವ್ ಚವ್ಹಾಣ, ರಾಘವೇಂದ್ರ ಚವ್ಹಾಣ, ಕಾಶೀನಾಥ ಚಿತ್ತಾಪುರ, ಘನಶಾಮ ಚವ್ಹಾಣ ಮೊದಲಾದವರು ಉಪಸ್ಥಿತರಿದ್ದರು. ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಕ್ಷತ್ರೀಯ ಮರಾಠ ಸಮಾಜದಲ್ಲಿಃ
ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಶಿವಭವಾನಿ ಮಂದಿರದಲ್ಲಿ ಜರುಗಿದ ಯಜ್ಞೋಪವಿತ ಧಾರಣೆ ಕಾರ್ಯಕ್ರಮವನ್ನು ಅರ್ಚಕರಾದ ವೇ.ಸಂತೋಷಬಟ್ ಜೋಶಿ ನಡೆಸಿಕೊಟ್ಟರು. ಇದು ಅಲ್ಲದೇ ಕಾರ್ಯಕ್ರಮದ ಮೊದಲಿಗೆ ಶ್ರೀ ಶಿವಭವಾನಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಜರುಗಿತ್ತಲ್ಲದೇ ಹೋಮ ಹವನವನ್ನು ನಡೆಸಿಕೊಟ್ಟರು.ಯಜ್ಞೋಪವಿತ ಧಾರಣೆ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಿಕೊಂಡು ಬರಬೇಕು. ಅದರ ಧಾರಣೆ ಮಾಡುವುದರಿಂದ ಕ್ಷಾತ್ರ ತೇಜದ ದೀರತನ ಶೂರತನವೆಂಬುದು ರಕ್ಷಣೆಯಾಗಲಿದೆ ಧರ್ಮಿಯಂತೆ ಕಾರ್ಯಕ್ರಮ ನಡೆದಿದೆ ಎಂದರು.ಜನೀವಾರ ಧಾರಣೆ ಆದ ನಂತರ ರಕ್ಷಾ ಬಂಧನ ಅಂಗವಾಗಿ ಸಮಾಜ ಬಾಂಧವರು ಪರಸ್ಪರ ರಾಖಿ ಕಟ್ಟಿ ಧರ್ಮದ ಬಾಂಧವ್ಯದ ಬೆಸುಗೆ ಕುರಿತು ಅರ್ಥೈಸಿದರು. ಈ ಸಮಯದಲ್ಲಿ ಸಮಾಜದ ಅಧ್ಯಕ್ಷ ಸಂಭಾಜಿ ವಾಡಕರ, ಕಾಶಿರಾಯ ಮೋಹಿತೆ, ಸಂಭಾಜಿ ಡಿಸಲೆ, ಗುರುರಾಜ ಮಾನೆ, ವಿಠ್ಠಲ ಮೋಹಿತೆ, ಶಿವಾಜಿ ಮೋಹಿತೆ, ಸಂಜೀವಕದಂ, ನಾರಾಯಣ ಸುಭೇದಾರ, ಗುಂಡು ಜಗತಾಪ, ಅನೀಲ ಮಾನೆ, ಧನಂಜಯ ಶಿಂಧೆ, ಮೊದಲಾದವರು ಉಪಸ್ಥಿತರಿದ್ದರು.ಇದು ಅಲ್ಲದೇ ಪಟ್ಟಣದ ರಜಪೂತ ಸಮಾಜದ ವತಿಯಿಂದ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ, ಭವಾನಿ ಮಂದಿರಗಳಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ ನಡೆಯಿತ್ತಲ್ಲದೇ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದ ವತಿಯಿಂದ ಕೂಡಾ ಯಜ್ಞೋಪವಿತ ಧಾರಣೆ ಕಾರ್ಯಕ್ರಮ ಭಕ್ತಿ ಭಾವದಿಂದ ಜರುಗಿತು.