ಯಕ್ಷಗಾನ ಸಂಘಟಕ ಶಿವರಾಮ್‌ ಭಟ್‌ ನಿಧನ

| Published : Apr 10 2025, 01:17 AM IST

ಸಾರಾಂಶ

ಖ್ಯಾತ ಯಕ್ಷಗಾನ ಸಂಘಟಕ ಶಿವರಾಮ್ ಭಟ್ ಅಜೆಕಾರ್ (86) ಹೃದಯಘಾತದಿಂದ ಇತ್ತೀಚೆಗೆ ಅಜೆಕಾರಿನಲ್ಲಿ ನಿಧನರಾದರು. ಯಕ್ಷಗಾನ ಧಾರ್ಮಿಕ ಮತ್ತು ಜೊತೆಗೆ ತನ್ನೂರು ಅಜೆಕಾರಿನಲ್ಲಿ ಕೃಷಿ ಮಾಡಿ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು. ಪತ್ನಿ, ಓರ್ವ ಪುತ್ರಿ ಹಾಗು ಹಾಗು ಪುತ್ರನನ್ನು ಅಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಖ್ಯಾತ ಯಕ್ಷಗಾನ ಸಂಘಟಕ ಶಿವರಾಮ್ ಭಟ್ ಅಜೆಕಾರ್ (86) ಹೃದಯಘಾತದಿಂದ ಇತ್ತೀಚೆಗೆ ಅಜೆಕಾರಿನಲ್ಲಿ ನಿಧನರಾದರು. ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವೆಂಕಟೇಶಯ್ಯ ಮತ್ತು ಲಕ್ಷ್ಮೀಯಮ್ಮ ದಂಪತಿ ಪುತ್ರ. 1966ರಲ್ಲಿ ಬಾಲನಟನಾಗಿ ಯಕ್ಷಗಾನ ರಂಗಪ್ರವೇಶ ಮಾಡಿದರು. 1972 ರಲ್ಲಿ ಯಕ್ಷಗಾನ ಕಲೆಯ ದಂತಕತೆಯಾದ ಕಡಲ ತಡಿಯ ಭಾರ್ಗವ ಕೋಟ ಶಿವರಾಮ್ ಕಾರಂತ ಅವರ ಗರಡಿಯಲ್ಲಿ ಯಕ್ಷಗಾನ ಪಟ್ಟುಗಳನ್ನು ಕಲಿತು ಯಕ್ಷಗಾನದ ಅನಿವಾರ್ಯ ಕಲಾವಿದನಾಗುವಂತೆ ಮಾಡಿತು.

ಪ್ರಮುಖವಾಗಿ ಹಾಸ್ಯ ನಟ ಖಳನಾಯಕ ಪೋಷಕ ಪಾತ್ರ ವನ್ನು ಉತ್ತಮವಾಗಿ ನಿರ್ವಹಿಸಿದರು. ಇವರ ಜಾಂಭವ, ಶನೀಶ್ವರ, ರಾವಣ, ಕೈಲಾಸ ಶಾಸ್ತ್ರಿ, ಬಭ್ರುವಾಹನ ಮತ್ತಿತರ ಪಾತ್ರಗಳು ಕೀರ್ತಿ ತಂದವು. ಪೆರ್ಡೂರು, ಹಿರಿಯಡ್ಕ, ರಂಜದಕಟ್ಟೆ, ಕಿಗ್ಗ, ಶೃಂಗೇರಿ, ಕೊಡವೂರು ಮೇಳದಲ್ಲಿ ದುಡಿದು 1983 ದಶಕದಲ್ಲಿ ಹಾಲಾಡಿ ಮೇಳವನ್ನು ಕಾಲಗರ್ಭದಲ್ಲಿ ಹೂತು ಹೋಗಿದ್ದ ಮೇಳವನ್ನು ಪುನಃಚೇತನ ಗೈದಿದ್ದರು. ನಂತರ ಮಾಡಮಕ್ಕಿ ಮೇಳ ಇಬ್ಬಾಗವಾಗುವ ಸನ್ನಿವೇಶ ಎದುರಾದಾಗ ಮೇಳಕ್ಕೆ ಸರಳ ಸೂತ್ರವನ್ನು ಹೆಣಿದು ಮೇಳದ ಮೆನೇಜರ್ ಆಗಿ ಪುನ್ಚೇಚೇತನಕ್ಕೆ ಕಾರಣರಾದರು.

ನಂತರ ದಿನದಲ್ಲಿ ಮೇಳದಲ್ಲಿ ಕಲಾವಿದರಗಿಯೂ ಸಂಘಟಕರಗಿಯೂ ಯಕ್ಷಗಾನ ಕ್ಷೇತ್ರದಿಂದ ನಿವೃತರಾದರು.

ನಂತರ ರಾಜ್ಯದಲ್ಲಿ ಪ್ರಖ್ಯಾತ ದೇಗುಲ ಕುಕ್ಕೆ ಸುಬ್ರಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರ ಜೊತೆ ಸೇರಿ 2012ರ ವರೆಗೆ ಧಾರ್ಮಿಕ ಕಾರ್ಯಕ್ರಮ ನೇತೃತ್ವ ವಹಿಸಿ ಸೇವೆ ಸಲ್ಲಿಸಿದರು. ಯಕ್ಷಗಾನ ಧಾರ್ಮಿಕ ಮತ್ತು ಜೊತೆಗೆ ತನ್ನೂರು ಅಜೆಕಾರಿನಲ್ಲಿ ಕೃಷಿ ಮಾಡಿ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು. ಪತ್ನಿ, ಓರ್ವ ಪುತ್ರಿ ಹಾಗು ಹಾಗು ಪುತ್ರನನ್ನು ಅಗಲಿದ್ದಾರೆ.