ಉಡುಪಿ: ಇಲ್ಲಿನ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ದ 75 ನೇ ವಾರ್ಷಿಕೋತ್ಸವ, ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ, ಅಮೃತ ಮಹೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಗುಂಡಿಬೈಲು ತಲ್ಲೂರು ಗಾರ್ಡನ್ ನಲ್ಲಿ ನಡೆಯಿತು.
ಹಿರಿಯ ಯಕ್ಷಗಾನ ಕಲಾವಿದ, ಪ್ರಸಿದ್ಧ ಸ್ತ್ರೀ ವೇಷಧಾರಿ ದಯಾನಂದ ಬಳೆಗಾರ ನಾಗೂರು ಅವರಿಗೆ ಈ ಸಾಲಿನ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು,ಸಭೆಯ ಅಧ್ಯಕ್ಷತೆ ವಹಿಸಿದ ಇಂದ್ರಾಳಿ ಜಯಕರ್ ಶೆಟ್ಟಿ ಅವರು, ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಅಮೃತ ಮಹೋತ್ಸವ ಕಂಡ ಏಕೈಕ ಹವ್ಯಾಸಿ ಯಕ್ಷಗಾನ ಸಂಘ ಕಲಾಕ್ಷೇತ್ರ, ನೂರಾರು ಕಲಾವಿದರನ್ನು ಕಲಾಸೇವೆಗೆ ಸಿದ್ದಗೊಳಿಸುವಲ್ಲಿ ಸಂಘದ ಪಾತ್ರ ಹಿರಿದಾಗಿದೆ ಎಂದು ಶ್ಲಾಘಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ತಮ್ಮ ಪ್ರಸ್ತಾವನೆಯಲ್ಲಿ ಸಂಘ ಸ್ಥಾಪನೆಗೆ ಕಾರಣೀಕರ್ತರನ್ನು, ಆರಂಭದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿ ಗತಿಸಿದ ನೂರಾರು ಸಕ್ರಿಯ ಸದಸ್ಯರನ್ನು ಸ್ಮರಿಸಿದರು.ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಗೊಳಿಸಿದ ಉಡುಪಿ ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ರಂಜನ್, ಅವರು ಕಲಾಕ್ಷೇತ್ರ ದ ನಿರಂತರ ಕಲಾ ಚಟುವಟಿಕೆ ಗಳನ್ನು ಸ್ಥಳೀಯ ನಿವಾಸಿಯಾಗಿ ಗಮನಿಸಿದ್ದೇನೆ, ಸಂಘ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಯೋಜನೆಗಳು ಯಶಸ್ವಿ ಯಾಗಲಿ ಎಂದು ಹಾರೈಸಿದರು, ಉಡುಪಿ ಶಾಸಕ ಯಶಪಾಲ್ ಸುವರ್ಣ ಮಕ್ಕಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಸಂಸ್ಥೆಗೆ ಶುಭ ಹಾರೈಸಿ, ಅಮೃತ ಮಹೋತ್ಸವ ಕಾರ್ಯಯೋಜನೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಯಕ್ಷಗಾನ ವಿಮರ್ಶಕ ಫ್ರೊ ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ವರದಿ ವಾಚನ ಮಾಡಿದರು. ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ವಂದಿಸಿದರು. ಸಂಘದ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮೆ ಹಾಗೂ ವೀರ ಮಣಿ ಕಾಳಗ ಯಕ್ಷಗಾನ ಬಯಲಾಟ ಜರುಗಿತು.