ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):ಪ್ರತಿ ವರ್ಷ ದವಣದ ಹುಣ್ಣಿಮೆ ದಿನ ಜರುಗುವ ಪಟ್ಟಣದ ಆರಾಧ್ಯ ದೇವತೆ ಯಲ್ಲಮ್ಮ ದೇವಿ ಜಾತ್ರೆ ಹಾಗೂ ನಾಗೇಂದ್ರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮಂಗಳವಾರ ಅದ್ಧೂರಿಯಾಗಿ ನಡೆಯಿತು.ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಿ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):
ಪ್ರತಿ ವರ್ಷ ದವಣದ ಹುಣ್ಣಿಮೆ ದಿನ ಜರುಗುವ ಪಟ್ಟಣದ ಆರಾಧ್ಯ ದೇವತೆ ಯಲ್ಲಮ್ಮ ದೇವಿ ಜಾತ್ರೆ ಹಾಗೂ ನಾಗೇಂದ್ರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮಂಗಳವಾರ ಅದ್ಧೂರಿಯಾಗಿ ನಡೆಯಿತು.ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಿದ್ದಪಡಿಸಿದ ಅಗ್ನಿಕುಂಡದಲ್ಲಿ ದೇವಿಯ ಅರ್ಚಕ ಶಂಕರ ಸಾಬು ಡೊಂಬರ ದೇವಿ ಜಗವನ್ನು ಹೊತ್ತು ಅಗ್ನಿಯನ್ನು ಹಾಯ್ದರು. ಬಳಿಕ ಕಾರ್ಯಕ್ರಮದ ಪ್ರಯುಕ್ತ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಾಗೇಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಅರ್ಚಕರು ನೆರವೇರಿಸಿದರು. ಜಾತ್ರೆ ಅಂಗವಾಗಿ ಸೇರಿದ್ದ ಸಾವಿರಾರು ಭಕ್ತರಿಗೆ ರೇಣುಕಾದೇವಿ ಪಾದಯಾತ್ರೆ ಸಮಿತಿಯಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.