ಡಾಲ್ಫಿನ್‌ ಎಫ್‌ಸಿ ತಂಡಕ್ಕೆ ಯಾಮಿಟಿ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ ಟ್ರೋಫಿ

| Published : Feb 03 2024, 01:48 AM IST

ಡಾಲ್ಫಿನ್‌ ಎಫ್‌ಸಿ ತಂಡಕ್ಕೆ ಯಾಮಿಟಿ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ ಟ್ರೋಫಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಯಾಮಿಟಿ ಯುನೈಟೆಡ್ ಫುಬ್ಬಾಲ್ ಕ್ಲಬ್ ವತಿಯಿಂದ 3 ದಿನಗಳ ಕಾಲ ಗದ್ದೆಹಳ್ಳದ ಆರ್.ಕೆ. ಲೇಜೌಟ್‌ನಲ್ಲಿ ಫುಟ್ಬಾಲ್‌ ಪಂದ್ಯಾವಳಿ ಸಂಪನ್ನಗೊಂಡಿತು. ಗದ್ದೆಹಳ್ಳದ ಡಾಲ್ಪಿನ್ ಎಫ್,ಸಿ ತಂಡ ಜಯಗಳಿಸಿತು. ದ್ವಿತೀಯ ಸ್ಥಾನವನ್ನು ಮಿಡ್‌ಸಿಟಿ ಎಫ್.ಸಿ. ತಂಡ ಪಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಗದ್ದೆಹಳ್ಳದ ಯಾಮಿಟಿ ಯುನೈಟೆಡ್ ಫುಬ್ಬಾಲ್ ಕ್ಲಬ್ ವತಿಯಿಂದ 3 ದಿನಗಳ ಕಾಲ ಗದ್ದೆಹಳ್ಳದ ಆರ್.ಕೆ. ಲೇಜೌಟ್‌ನಲ್ಲಿ ಫುಟ್ಬಾಲ್‌ ಪಂದ್ಯಾವಳಿ ಸಂಪನ್ನಗೊಂಡಿತು. ಅಂತಿಮ ಹಣಾಹಣಿಯಲ್ಲಿ ಗದ್ದೆಹಳ್ಳದ ಡಾಲ್ಪಿನ್ ಎಫ್,ಸಿ ತಂಡ ಜಯಗಳಿಸಿ ನಗದು 66,666 ರು. ಹಾಗೂ ಟ್ರೋಫಿ ಮುಡಿಗೇರಿಸಿಕೊಂಡಿತು.

ದ್ವಿತೀಯ ಸ್ಥಾನವನ್ನು ಮಿಡ್‌ಸಿಟಿ ಎಫ್.ಸಿ. ತಂಡ ಪಡೆದು ಟ್ರೋಫಿ ಹಾಗೂ 33,333 ರು. ನಗದು ಬಹುಮಾನ ಪಡೆದುಕೊಂಡಿತು. ಕ್ರೀಡಾಕೂಟದ ಸಂದರ್ಭ ಬೆಳಗ್ಗೆ ಯಾಮಿಟಿ ಯುನೈಟೆಡ್‌ ಫುಟ್ಬಾಲ್‌ ಕ್ಲಬ್ ವತಿಯಿಂದ 6ನೇ ವರ್ಷದ ಹೊನಲು ಬೆಳಕಿನ ಪಂದ್ಯಾಟದ ಸಲುವಾಗಿ ಕೂರ್ಗ್ ಬ್ಲೆಡ್ ಡೊನರ್ಸ್ ಇವರಿಗೆ ಸುಮಾರು 60 ಮಂದಿ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮರೆದರು.

ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್‌, ಉಪಾಧ್ಯಕ್ಷೆ ಶಿವಮ್ಮ, ಸದಸ್ಯೆ ನಾಗರತ್ನ, ಸಮಾಜ ಸೇವಕರಾದ ರಶೀದ್, ಯಾಮಿಟಿ ಯುನೈಟೇಡ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಎಂ.ಎ.ರಶೀದ್, ಕೆ.ವೈ.ಬಶೀರ್ ಸಮಿತಿ ಸದಸ್ಯರು ಹಾಜರಿದ್ದರು.

ಇದೇ ಸಂದರ್ಭ ಯೂನಿರ್ವಸಿಟಿ ಸೌತ್ ಜೋನ್ ಪಂಜಾಬ್ ಎಂ.ಎಸ್.ಸಾದಿಕ್, ಮೊಹಮ್ಮದ್ ಉಸಾಮ ಅವರನ್ನು ಸನ್ಮಾನಿಸಲಾಯಿತು.

ಕಳೆದ 6 ವರ್ಷಗಳಿಂದ ಕ್ರೀಡಕೂಟದಿಂದ ಉಳಿತಾಯ ಮೊತ್ತವನ್ನು ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ನೆರವು ನೀಡುತ್ತಿರುವುದಾಗಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದರು. ಇತ್ತೀಚೆಗೆ ಗದ್ದೆಹಳ್ಳದಲ್ಲಿ ಆಯೋಜಿಸಲಾದ ಪುಟ್ಬಾಲ್ ಪಂದ್ಯಾವಳಿಯಲ್ಲಿ ಸುಮಾರು 35ಕ್ಕೂ ಮಿಕ್ಕಿ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.