6 ತಿಂಗಳಲ್ಲೇ ಕಿತ್ತುಹೋದ ಯರಿನಾರಾರಾಯಣಪುರ, ಯರಗುಪ್ಪಿ ರಸ್ತೆ

| Published : Aug 20 2024, 01:02 AM IST

6 ತಿಂಗಳಲ್ಲೇ ಕಿತ್ತುಹೋದ ಯರಿನಾರಾರಾಯಣಪುರ, ಯರಗುಪ್ಪಿ ರಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

68 ಲಕ್ಷ ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣ ಮಾಡಲಾಗಿದೆ. ಡಾಂಬರೀಕರಣದ ವೇಳೆ ಸರಿಯಾದ ಪ್ರಮಾಣದಲ್ಲಿ ಕಡಿ, ಡಾಂಬರ್‌ ಬಳಕೆ ಮಾಡಿಲ್ಲ. ಇದರಿಂದಾಗಿ ನಿರ್ಮಾಣವಾದ ಆರೇ ತಿಂಗಳಲ್ಲಿ ಹಾಳಾಗಿದೆ.

ಕುಂದಗೋಳ:

ತಾಲೂಕಿನ ಯರಿನಾರಾರಾಯಣಪುರ-ಯರಗುಪ್ಪಿ ಗ್ರಾಮದಲ್ಲಿ ₹ 68 ಲಕ್ಷ ಮೊತ್ತದಿಂದ ನಿರ್ಮಿಸಲಾಗಿದ್ದ ರಸ್ತೆಯು 6 ತಿಂಗಳಲ್ಲಿ ಕಿತ್ತುಹೋಗಿದೆ. ಕಾಮಗಾರಿಯಲ್ಲಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಸಾರ್ವಜನಿಕರು ಸಂಚರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಆರೋಪಿಸಿದರು.

ಅವರು ತಾಲೂಕಿನಲ್ಲಿ ಯರಿನಾರಾಯಣಪುರ ಗ್ರಾಮದ ಹೊರ ವಲಯದಲ್ಲಿ ಕಳಪೆ ಕಾಮಗಾರಿಯಿಂದ ಕಿತ್ತುಹೋಗಿರುವ ರಸ್ತೆಯಲ್ಲಿನ ತಗ್ಗು-ಗುಂಡಿಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಗ್ರಾಮದಿಂದ ಯರಗುಪ್ಪಿ-ಕುಂದಗೋಳ-ಶಿರಗುಪ್ಪಿ-ಹುಬ್ಬಳ್ಳಿಗೆ ಸಂಚರಿಸುವ ಮುಖ್ಯ ರಸ್ತೆ ಇದಾಗಿದ್ದು, ಕಳೆದ 6 ತಿಂಗಳ ಹಿಂದೆ ₹ 68 ಲಕ್ಷ ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣ ಮಾಡಲಾಗಿದೆ. ಡಾಂಬರೀಕರಣದ ವೇಳೆ ಸರಿಯಾದ ಪ್ರಮಾಣದಲ್ಲಿ ಕಡಿ, ಡಾಂಬರ್‌ ಬಳಕೆ ಮಾಡಿಲ್ಲ. ಇದರಿಂದಾಗಿ ನಿರ್ಮಾಣವಾದ ಆರೇ ತಿಂಗಳಲ್ಲಿ ರಸ್ತೆಯಲ್ಲಿ ಬೃಹತ್‌ ಪ್ರಮಾಣದ ತೆಗ್ಗು, ಗುಂಡಿಗಳು ಬಿದ್ದು ವಾಹನ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಿ ಎಂದು ಸಂಬಂಧಿಸಿದ ಎಇಇ ಅವರಿಗೆ ತಿಳಿಸಿದರೂ ಸಹ ಯಾವುದೇ ಕ್ರಮವಾಗಿಲ್ಲ. ಒಂದು ವಾರದೊಳಗೆ ಹಾಳಾಗಿರುವ ರಸ್ತೆ ದುರಸ್ತಿಗೊಳಿಸಬೇಕು ಇಲ್ಲದೇ ಇದ್ದರೆ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಫಕ್ಕಿರಗೌಡ ಫಕ್ಕಿರಗೌಡ್ರ, ವೆಂಕನಗೌಡ ಕೆಂಚನಗೌಡ್ರ, ದೇವೇಂದ್ರಪ್ಪ ಕೆರಿ, ಬಸವರಾಜ ಜೋಗಣ್ಣವರ, ರಮೇಶ ಬೆಟದೂರ, ಮಾಬುಲಿ ನದಾಫ, ನಾಶಿರ ಭಾನಿ ಸೇರಿದಂತೆ ಹಲವರಿದ್ದರು.