ಲಕ್ಷ್ಮೀನಗರ ಸಿರಿಕುಮಾರ ಕೆರೆ ಅಭಿವೃದ್ಧಿಗೆ ಯಶ್ಪಾಲ್ ಸುವರ್ಣ ಚಾಲನೆ

| Published : May 12 2025, 12:01 AM IST

ಸಾರಾಂಶ

ಉಡುಪಿ ನಗರಸಭೆ ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಗರ್ಡೆಯಲ್ಲಿ ಸುಮಾರು ₹ 87 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಸಿರಿ ಕುಮಾರ ಕೆರೆಯ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರಸಭೆ ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಗರ್ಡೆಯಲ್ಲಿ ಸುಮಾರು ₹ 87 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಸಿರಿ ಕುಮಾರ ಕೆರೆಯ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಯಶ್ ಪಾಲ್ ಸುವರ್ಣ, ನಗರಸಭಾ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿ ಮಾಡಿ ಪುನಶ್ಚೇತನಕ್ಕೆ ವಿಶೇಷ ಆದ್ಯತೆ ನೀಡಿ ಅಂತರ್ಜಲ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ನಗರಸಭೆ ಮೂಲಕ ಅನುದಾನ ಒದಗಿಸಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಿರಿಕುಮಾರ ಕೆರೆ ಪುನಶ್ಚೇತನಗೊಳ್ಳಲಿದೆ ಎಂದರು.ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯ ವಿಜಯ ಕೊಡವೂರು, ಸ್ಥಳೀಯ ಪ್ರಮುಖರಾದ ಭೋಜಣ್ಣ ಲಕ್ಷ್ಮೀ ನಗರ, ಶೇಖರ ಗರ್ಡೆ, ರಮೇಶ್ ಗರ್ಡೆ, ಗೆಳೆಯರ ಬಳಗ ಅಧ್ಯಕ್ಷ ಅರುಣ್ ಕುಮಾರ್, ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ , ಗುತ್ತಿಗೆದಾರ ಉಮೇಶ್ ನಾಯ್ಕ್, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದರು.