ಯತ್ನಾಳ ಬ್ರೆನ್‌ಗೆ, ನಾಲಿಗೆಗೆ ಸಂಬಂಧವಿಲ್ಲ

| Published : Sep 16 2024, 01:49 AM IST

ಸಾರಾಂಶ

ಯತ್ನಾಳ ಅವರ ಬ್ರೆನ್‌ಗೆ ಮತ್ತು ನಾಲಿಗೆಗೆ ಸಂಬಂಧವಿಲ್ಲವಾಗಿದೆ. ಬಿಜೆಪಿ ಅವರು ಅವ್ನೊಬ್ಬನ ಬೊಗಳೊಕ್ಕೆ ಬಿಟ್ಟು ಬಿಟ್ಟಿದ್ದಾರೆ. ಬೊಗಳೋ ಭರದಲ್ಲಿ ಯತ್ನಾಳ ಏನೇನೋ ಬೊಗಳ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಯತ್ನಾಳ ಅವರ ಬ್ರೆನ್‌ಗೆ ಮತ್ತು ನಾಲಿಗೆಗೆ ಸಂಬಂಧವಿಲ್ಲವಾಗಿದೆ. ಬಿಜೆಪಿ ಅವರು ಅವ್ನೊಬ್ಬನ ಬೊಗಳೊಕ್ಕೆ ಬಿಟ್ಟು ಬಿಟ್ಟಿದ್ದಾರೆ. ಬೊಗಳೋ ಭರದಲ್ಲಿ ಯತ್ನಾಳ ಏನೇನೋ ಬೊಗಳ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ರಾಹುಲ್ ಗಾಂಧಿ ಬಗ್ಗೆ ಶಾಸಕರಾದ ಯತ್ನಾಳ ಅವರು ನಾಲಿಗೆ ಹರಿ ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ತಂದೆಗೆ ಹುಟ್ಟತಾರೆ, ತಾಯಿಗೆ ಹುಟ್ಟುತ್ತಾರೆ ಅನ್ನೋ ಮಾತು ಸರಿಯಲ್ಲ. ಯತ್ನಾಳ ವಿರುದ್ಧ ಹೋರಾಟದ ಬಗ್ಗೆ ಪಾರ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಅಸಭ್ಯವಾಗಿ ಮಾತನಾಡೋದು ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು, ಟೀಕೆಗಳು ಇರಬೇಕು ಅದು ಸಾಪ್ಟಾಗಿ ಇರಬೇಕು. ಯತ್ನಾಳ ರೀತಿ ಬಾಯಿ ಹರಿ ಬಿಡಬಾರದು, ಇದು ಒಳ್ಳೆಯದಲ್ಲ ಎಂದು ಎಚ್ಚರಿಸಿದರು.ಕೇಂದ್ರ ಸರ್ಕಾರ ಪತನವಾಗೋದು ಗ್ಯಾರಂಟಿ:

ದೀಪಾವಳಿ ಬಳಿಕ ಕಾಂಗ್ರೆಸ್ ಸರ್ಕಾರ ಪತನ ವಾಗಲಿದೆ ಎಂಬ ಮಾಜಿ ಸಚಿವರಾದ ಸಿ.ಟಿ ರವಿ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವ ತಿಮ್ಮಾಪೂರ ಅವರು, ಸಿ.ಟಿ.ರವಿ ಮಿಸ್ಟೇಕ್ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಬೀಳುತ್ತೆ ಅಂತಾ ಹೇಳಲು ಹೋಗಿ ಹೀಗೆ ಹೇಳಿದ್ದಾರೆ. ಕೇಂದ್ರ ಮೋದಿ ಸರ್ಕಾರ ಬಹಳ ದಿನ ನಡೆಯಲ್ಲ, ಬೇಷರತ್ ಬಹುಮತ ಪಡೆದ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗೆ ಬೀಳುತ್ತೆ. ಮೋದಿ ಬೇರೆ-ಬೇರೆ ಪಕ್ಷಗಳ ಬೆಂಬಲದಿಂದ ಕೇಂದ್ರ ಸರ್ಕಾರ ರಚನೆ ಆಗಿದೆ. ಇದು ಸಿ.ಟಿ.ರವಿ ಅವ್ರಿಗೆ ಗೊತ್ತಿಲ್ಲ ಅಂತಾ ಕಾಣುತ್ತೆ. ಅವ್ರು ಕನ್ಫ್ಯೂಸ್ ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರ ಬಹಳ ದಿನ ಇರಲ್ಲ, ಕೇಂದ್ರ ಸರ್ಕಾರ ಪತನವಾಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.ಶಾಸಕ ಮುನಿರತ್ನ ನಡುವಳಿಕೆ ಸರಿಯಾಗಿಲ್ಲ:

ಬಿಜೆಪಿ ಶಾಸಕ ಮುನಿರತ್ನ ಬಂಧನದ ಕುರಿತು ಮಾತನಾಡಿ, ಶಾಸಕನಾಗಿ ಮುನಿರತ್ನ ಅವರ ನಡುವಳಿಕೆ ಸರಿಯಾಗಿಲ್ಲ. ಬಿಜೆಪಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಅಂಬೇಡ್ಕರ್ ಬಗ್ಗೆ ಅವಹೇಳನ, ಸಂವಿಧಾನ ಸುಟ್ಟು ಹಾಕುವ ಹೇಳಿಕೆಗಳು, ಕೆಲವುಗಳನ್ನು ಬಿಜೆಪಿಗರು ಚಕಾರ ಎತ್ತದೇ ಇರುವುದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಂದು ಕಪ್ಪು ಚುಕ್ಕೆ. ಇಂತವೆಲ್ಲ ಆಗಬಾರದು, ಪ್ರಜಾಪ್ರಭುತ್ವ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿಗರು ಮಾಡ್ತಿದಾರೆ ಎಂದು ಕಿಡಿಕಾರಿದರು.