ವರ್ಷ ತೊಡಕು: ₹60-₹80 ಲಕ್ಷ ಮಾಂಸ ಮಾರಾಟ

| Published : Apr 02 2025, 01:05 AM IST

ಸಾರಾಂಶ

ತಾಲೂಕಿನಲ್ಲಿ ವರ್ಷ ತೊಡಕು ಹಿನ್ನೆಲೆ ಕಳೆದ ವರ್ಷ 1 ಕೆಜಿ ಮಟನ್ ₹750ಕ್ಕೆ ಮಾರಾಟವಾಗಿದ್ದು, ಈ ಬಾರಿ 1 ಕೆಜಿಗೆ ಮಟನ್ ₹850- ₹900ಕ್ಕೆ ಮಾರಾಟವಾಗಿದೆ. ತಾಲೂಕಿನಲ್ಲಿ ಸುಮಾರು 150ಕ್ಕೂ ಹೆಚ್ಚು ಮಟನ್ ಮಾರಾಟದ ಅಂಗಡಿಗಳಲ್ಲಿ ಸುಮಾರು ₹60 ಲಕ್ಷದಿಂದ ₹80 ಲಕ್ಷದ ಮಟನ್ ಮಾರಾಟವಾಗಿದೆ ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ. ತಾಲೂಕಿನಿಂದ ಹೆಸರಾಂತ ಉದ್ಯಮಿ ಲಿಕ್ಕರ್ ಮಾಲೀಕ ದಿ. ಜೆ.ಪಿ. ನಾರಾಯಣಸ್ವಾಮಿಗೂ ಸಹ ಇಲ್ಲಿಂದ ಮಟನ್ ಹೋಗುತ್ತಿತ್ತು ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನಲ್ಲಿ ವರ್ಷ ತೊಡಕು ಹಿನ್ನೆಲೆ ಕಳೆದ ವರ್ಷ 1 ಕೆಜಿ ಮಟನ್ ₹750ಕ್ಕೆ ಮಾರಾಟವಾಗಿದ್ದು, ಈ ಬಾರಿ 1 ಕೆಜಿಗೆ ಮಟನ್ ₹850- ₹900ಕ್ಕೆ ಮಾರಾಟವಾಗಿದೆ. ತಾಲೂಕಿನಲ್ಲಿ ಸುಮಾರು 150ಕ್ಕೂ ಹೆಚ್ಚು ಮಟನ್ ಮಾರಾಟದ ಅಂಗಡಿಗಳಲ್ಲಿ ಸುಮಾರು ₹60 ಲಕ್ಷದಿಂದ ₹80 ಲಕ್ಷದ ಮಟನ್ ಮಾರಾಟವಾಗಿದೆ ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ. ತಾಲೂಕಿನಿಂದ ಹೆಸರಾಂತ ಉದ್ಯಮಿ ಲಿಕ್ಕರ್ ಮಾಲೀಕ ದಿ. ಜೆ.ಪಿ. ನಾರಾಯಣಸ್ವಾಮಿಗೂ ಸಹ ಇಲ್ಲಿಂದ ಮಟನ್ ಹೋಗುತ್ತಿತ್ತು ಎನ್ನಲಾಗಿದೆ.ಗುಡ್ಡೆ ಮಾಂಸ: ಗ್ರಾಮೀಣ ಪ್ರದೇಶದಲ್ಲಿ ಗುಡ್ಡೆ ಮಾಂಸಕ್ಕಾಗಿ ಚೀಟಿ ನಡೆಸುತ್ತಾರೆ. ಇದನ್ನು ಯುಗಾದಿ ಚೀಟಿ ಎಂದೇ ಕರೆಯುತ್ತಾರೆ. ಗುಡ್ಡೆ ಮಾಂಸ ಎಂದರೆ ನಿರ್ದಿಷ್ಟ ಸಂಖ್ಯೆಯ ಜನ ಚೀಟಿ ಹಾಕಿಕೊಂಡಿರುತ್ತಾರೆ. ಅಂದರೆ ಎಷ್ಟು ಜನ ಚೀಟಿ ಹಾಕಿಕೊಂಡಿರುತ್ತಾರೋ ಅಷ್ಟು ಗುಡ್ಡೆ ಹಾಕಲಾಗುತ್ತದೆ. ಅದರಲ್ಲಿ ಕುರಿ ಅಥವಾ ಮೇಕೆಯ ಪ್ರತಿಯೊಂದು ಭಾಗವನ್ನು ಪ್ರತಿಯೊಂದು ಗುಡ್ಡೆಗೂ ಹಂಚಲಾಗುತ್ತದೆ. ಸರ್ವರಿಗೂ ಸಮಪಾಲು ಎನ್ನುವ ತತ್ವವನ್ನು ಇಲ್ಲಿ ಅಕ್ಷರಶಃ ಜಾರಿಯಾಗಿರುತ್ತದೆ.ಗುಡ್ಡೆ ಮಾಂಸದ ರುಚಿ ತಿಂದವರಿಗೆ ಗೊತ್ತು.