ಯಡಿಯೂರಪ್ಪ ಯಾರಿಗೂ ದ್ರೋಹ ಬಗೆದಿಲ್ಲ: ಸಂಸದ ರಾಘವೇಂದ್ರ

| Published : Mar 15 2024, 01:18 AM IST

ಯಡಿಯೂರಪ್ಪ ಯಾರಿಗೂ ದ್ರೋಹ ಬಗೆದಿಲ್ಲ: ಸಂಸದ ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾರಿಗೂ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ಕೆ.ಎಸ್. ಈಶ್ವರಪ್ಪ ಅವರು, ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್ ಜೊತೆಗೆ ಪಕ್ಷ ಕಟ್ಟಿದವರು. ಅವರು ಕಟ್ಟರ್ ರಾಷ್ಟ್ರವಾದಿ ಮತ್ತು ಪ್ರಧಾನಿ ಮೋದಿ ಅಭಿಮಾನಿ. ಯಾವುದೇ ಕಾರಣಕ್ಕೂ ಪಕ್ಷವಿರೋಧಿ ಚಿಂತನೆಯನ್ನು ಅವರು ಮಾಡುವುದಿಲ್ಲ. ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯ ಸಾರಥ್ಯ ವಹಿಸಿ ರಥ ಮುನ್ನಡೆಸಲಿದ್ದಾರೆಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾರಿಗೂ ದ್ರೋಹ ಬಗೆಯುವ ಕೆಲಸ ಮಾಡಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಅವರು ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್ ಜೊತೆಗೆ ಪಕ್ಷ ಕಟ್ಟಿದವರು. ಅವರು ಕಟ್ಟರ್ ರಾಷ್ಟ್ರವಾದಿ ಮತ್ತು ಪ್ರಧಾನಿ ಮೋದಿ ಅಭಿಮಾನಿ. ಯಾವುದೇ ಕಾರಣಕ್ಕೂ ಪಕ್ಷವಿರೋಧಿ ಚಿಂತನೆಯನ್ನು ಅವರು ಮಾಡುವುದಿಲ್ಲ. ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯ ಸಾರಥ್ಯ ವಹಿಸಿ ರಥ ಮುನ್ನಡೆಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆ ಸೋತಾಗ ಹೈಕಮಾಂಡ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಹೊರಟಿತ್ತು. ಆ ಸಂದರ್ಭ ಅವರು ನಾನು ಈಗಾಗಲೇ ರಾಜಶೇಖರ್ ಮೂರ್ತಿ ಅವರಿಗೆ ಭರವಸೆ ನೀಡಿದ್ದೇನೆ. ಅವರನ್ನೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಎಂದು ಹೈಕಮಾಂಡ್‌ಗೆ ತಿಳಿಸಿ ತಮಗೆ ಬಂದ ಅವಕಾಶವನ್ನು ತಿರಸ್ಕರಿಸಿದ್ದರು. ಯಾವುದೇ ಕಾರಣಕ್ಕೂ ಅವರು ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾ.18ರಂದು ಶಿವಮೊಗ್ಗಕ್ಕೆ ಮೋದಿ ಬರುತ್ತಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಇದ್ದಾರೆ. ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಯಿಂದ ಮಾಡುತ್ತಾರೆ.ಒಂದು ವರ್ಷದಲ್ಲಿ ಮೂರನೇ ಬಾರಿ ಮೋದಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ವಿಪಕ್ಷದವರ ಆರೋಪಗಳ ತಲೆ ಕೆಡಿಸಿಕೊಳ್ಳಲ್ಲ. ನಾವು ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ಜನರಿಗೆ ತಿಳಿಸುತ್ತೇವೆ. ರಾಮಮಂದಿರ ಉದ್ಘಾಟನೆ, ಅಭಿವೃದ್ಧಿ ಕೆಲಸದಿಂದ ಜನರಿಗೆ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ 370ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ 28ಕ್ಕೆ 28 ಸ್ಥಾನ ಗೆಲ್ಲಲ್ಲಿದೆ ಎಂದರು.

ರಾಷ್ಟ್ರ ಭಕ್ತರು ರಾಷ್ಟ್ರದ ಹಿತಕೋಸ್ಕರ ಚಿಂತನೆ ಮಾಡುತ್ತಾರೆ. ದೇಶ, ಮೋದಿ ಬಿಟ್ಟು ಬೇರೆ ಚಿಂತನೆ ಮಾಡಲ್ಲ. ಶಿವಮೊಗ್ಗಕ್ಕೆ ಕೈಗಾರಿಕೆಗಳು ಬರಬೇಕು, ಸಾಫ್ಟ್‌ವೇರ್ ಉದ್ಯಮ ಬರಬೇಕು. ಯುವಕರ ಸ್ವಾಭಿಮಾನ ಬದುಕಿಗೆ ಆದ್ಯತೆ ಕೊಡಲಾಗುವುದು. ಕರಾವಳಿ ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ನಲ್ಲಿ ಟನಲ್ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

- - - -14ಎಸ್‌ಎಂಜಿಕೆಪಿ04: ಸಂಸದ ಬಿ.ವೈ.ರಾಘವೇಂದ್ರ