ಯಡಿಯೂರಪ್ಪ ನಿರಂತರ ಹೋರಾಟಗಳೇ ರಾಜ್ಯದ ಅಭಿವೃದ್ಧಿ ಗೆ ಪೂರಕ: ಎಂ.ಆರ್.ದೇವರಾಜ್‌ಶೆಟ್ಟಿ

| Published : Feb 28 2025, 12:50 AM IST

ಯಡಿಯೂರಪ್ಪ ನಿರಂತರ ಹೋರಾಟಗಳೇ ರಾಜ್ಯದ ಅಭಿವೃದ್ಧಿ ಗೆ ಪೂರಕ: ಎಂ.ಆರ್.ದೇವರಾಜ್‌ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವೃದ್ದಾಶ್ರಮಕ್ಕೆ ಹಣ್ಣು-ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು

- ಯಡಿಯೂರಪ್ಪ ಜನ್ಮದಿನ : ವಿಶೇಷ ಪೂಜೆ, ಹಣ್ಣು-ಹಂಪಲು ವಿತರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವೃದ್ದಾಶ್ರಮಕ್ಕೆ ಹಣ್ಣು-ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ಥಿತ್ವವೇ ಕಂಡಿರದ ಸಮಯದಲ್ಲಿ ಯಡಿಯೂರಪ್ಪ ಇಡೀ ಜೀವನವನ್ನೆ ಪಕ್ಷಕ್ಕಾಗಿ ದುಡಿದ ಹಿನ್ನೆಲೆಯಲ್ಲಿ ೨೦೦೬ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಭಾಜಪ ಅಧಿಕಾರದ ಚುಕ್ಕಾಣಿ ಹಿಡಿಯಿತು. ಈ ಹಿಂದಿನ ಯಡಿಯೂರಪ್ಪ ನಿರಂತರ ಹೋರಾಟಗಳೇ ರಾಜ್ಯದ ಅಭಿವೃದ್ಧಿ ಪೂರಕವಾಯಿತು ಎಂದರು.ರಾಜ್ಯದಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ಯಡಿಯೂರಪ್ಪನವರು ಯೌವ್ವನವನ್ನು ಲೆಕ್ಕಿಸದೇ, ಹಗಲು-ರಾತ್ರಿ ಎನ್ನದೇ ನಿಸ್ವಾರ್ಥ ರಾಜಕಾರಣ ಮಾಡಿದವರು. ಅವರ ಅವಧಿಯಲ್ಲಿ ಬಡವರ ಕಲ್ಯಾಣ, ದಲಿತರ ಏಳಿಗೆ ಹಾಗೂ ಜಾತಿ, ಬೇಧ ಮೆಟ್ಟಿನಿಂತ ಪರಿಣಾಮ ಇಡೀ ರಾಜ್ಯದ ಜನ ನಾಯಕರಾಗಿ ಗುರುತಿಸಿಕೊಂಡು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ ಕೀರ್ತಿ ಸಲ್ಲುತ್ತದೆ ಎಂದರು.ಅವರ ಕಾಲಘಟ್ಟದಲ್ಲಿ ಅಧಿಕಾರ ನಡೆಸಿದಂಥ ಯಾವುದೇ ಪಕ್ಷಗಳು ರೈತರನ್ನು ಪ್ರತಿ ಬಾರಿ ಕಡೆಗಣಿಸುತ್ತಿದ್ದನ್ನು ಮನಗಂಡಿದ್ಧ ಅವರು, ಮುಖ್ಯಮಂತ್ರಿಯಾದ ಬಳಿಕವೇ ವಿಶೇಷವಾಗಿ ರೈತಪರ ಬಜೆಟ್ ಮಂಡಿಸುವ ಮುಖೇನ ಕೋಟ್ಯಂತರ ರೈತರ ಹೃದಯ ದಲ್ಲಿ ನೆಲೆಸಿದ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್ ಮಾತನಾಡಿ ಬಡವರು, ದೀನದಲಿತರ ಏಳಿಗೆಗೆ ಸದೃಢ ಆಡಳಿತ ನೀಡುವ ಆಲೋಚನೆಯಿದ್ದ ಯಡಿಯೂರಪ್ಪ, ಅಧಿಕಾರ ಗಳಿಸಿ ಹಲವಾರು ಅಭಿವೃದ್ಧಿ ಕೈಗೊಂಡಿದ್ದನ್ನು ಇಂದಿನ ರಾಜ್ಯಸರ್ಕಾರ ನಕಲು ಮಾಡುತ್ತಿವೆ ಎಂದ ಅವರು ದೂರದೃಷ್ಟಿ ನಡೆ, ವಿಚಾರಧಾರೆ ಯಡಿಯೂರಪ್ಪರಲ್ಲಿ ಆಳವಾಗಿ ಅಡಗಿತ್ತು ಎಂದರು.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನ್ಮದಿನ ಎಂದರೆ ಕೇವಲ ಮೋಜು, ಮಸ್ತಿಯಂತಾಗಿದೆ. ಇದರ ಬದಲಾಗಿ ಸಾಮಾಜಿಕ ಕಾರ್ಯದ ಮುಖಾಂ ತರ ಪ್ರತಿಯೊಬ್ಬ ಗಣ್ಯರ ಜನ್ಮದಿನವನ್ನು ಆಚರಿಸಿಕೊಂಡರೆ, ಆ ವ್ಯಕ್ತಿಯ ಘನತೆ ಇನ್ನಷ್ಟು ಹೆಚ್ಚಲಿದೆ ಹಾಗೂ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.ಇದೇ ವೇಳೆ ನಗರದ ಎಂ.ಜಿ.ರಸ್ತೆ ಗಣಪತಿ ದೇವಾಲಯಕ್ಕೆ ತೆರಳಿದ ಕಾರ್ಯಕರ್ತರು ಯಡಿಯೂರಪ್ಪನವರ ಧೀರ್ಘಾಯುಷ್ಯ ಕ್ಕೆ ಪ್ರಾರ್ಥಿಸಿದರು. ಬಳಿಕ ಇಂದಾವರ ಸಮೀಪ ಅನ್ನಪೂರ್ಣ ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಹಣ್ಣು-ಹಂಪಲು, ಬ್ರೆಡ್‌ ವಿತರಿಸಿದರು.ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ನಗರ ಮೋರ್ಚಾ ಅಧ್ಯಕ್ಷ ಜೀವನ್ ಕೋಟೆ, ನಗರಸಭಾ ಸದಸ್ಯ ಜೆ.ರಾಜು, ಮಧ್ಯಮ ಪ್ರಮುಖ್ ಕೋಟೆ ದಿನೇಶ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚ್ಚಿನ್‌ಗೌಡ, ಕಾರ್ಯದರ್ಶಿ ಗೌತಮ್, ಮುಖಂಡರಾದ ನೆಟ್ಟಕೆರೆಹಳ್ಳಿ ಜಯಣ್ಣ, ರೇವನಾಥ್, ಎಚ್.ಕೆ.ಕೇಶವಮೂ ರ್ತಿ, ರವಿ, ಶಿವಕುಮಾರ್ ಮತ್ತಿತರರಿದ್ದರು.