ಸಾರಾಂಶ
ತಾಲೂಕಿನ ಯಡಿಯೂರು ಶ್ರೀ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಸತತ ಸಿದ್ದಲಿಂಗೇಶ್ವರ ಸೇವೆ ಸಲ್ಲಿಸುತ್ತಿದ್ದ ಗಂಗಾ ಹೆಸರಿನ ಆನೆ ಕಳೆದ ಮೂರು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆನೆ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆನೆ ಮಂಗಳವಾರ ಮೃತಪಟ್ಟಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಯಡಿಯೂರು ಶ್ರೀ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಸತತ ಸಿದ್ದಲಿಂಗೇಶ್ವರ ಸೇವೆ ಸಲ್ಲಿಸುತ್ತಿದ್ದ ಗಂಗಾ ಹೆಸರಿನ ಆನೆ ಕಳೆದ ಮೂರು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆನೆ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆನೆ ಮಂಗಳವಾರ ಮೃತಪಟ್ಟಿದೆ.ಎಡೆಯೂರು ದೇವಾಲಯದ ಎಂಜಿನಿಯರ್ ರೇಣುಕಾ ಪ್ರಸಾದ್ ಹಾಗೂ ಶಿಷ್ಟಾಚಾರ ಅಧಿಕಾರಿ ಸುರೇಶ್ ಸೇರಿದಂತೆ ಇತರ ಭಕ್ತರು ತಡರಾತ್ರಿವರೆಗೆ ಗೇಟ್ ಮುಂದೆ ಕಾಯಬೇಕಾದ ಅನಿವಾರ್ಯತೆ ಉಂಟಾಗಿತ್ತು. ಅರಣ್ಯ ಅಧಿಕಾರಿಗಳು ಯಾವುದೇ ರೀತಿ ಸ್ಪಂದನೆ ನೀಡದ ಕಾರಣ ಭಕ್ತರು ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಯಡಿಯೂರು ದೇವಾಲಯದ ಗಂಗಾ ಆನೆಯನ್ನು ನಮ್ಮ ದೇವಾಲಯಕ್ಕೆ ವಾಪಸ್ ಕೊಡಬೇಕೆಂದು ಭಕ್ತರು ಒತ್ತಾಯಿಸಿದರು,
ಆದರೆ ಪಂಚನಾಮೆ ಸೇರಿದಂತೆ ಅವರ ನಿಯಮಗಳನ್ನು ಪೂರೈಸುವ ತನಕ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದ್ದು ನೋವುಂಟಾಗಿತ್ತು. ಇತ್ತ ಯಡಿಯೂರು ದೇವಾಲಯದ ಮುಂಭಾಗದಲ್ಲಿ ನೂರಾರು ಭಕ್ತರು ಜಮಾವಣೆಗೊಂಡಿದ್ದರು. ಅರಣ್ಯಾಧಿಕಾರಿಗಳ ಸ್ಪಂದನೆ ಇಲ್ಲದೆ ಎಲ್ಲಾ ಭಕ್ತರಿಗೆ ನೋವುಂಟು ಮಾಡಿತ್ತು.ಆನೆ ಹಿನ್ನೆಲೆ: ಗದಗಿನ ಡಂಬಳ ಮಠದಿಂದ 1996ರಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಡಿಯೂರು ದೇವಾಲಯಕ್ಕೆ ಆನೆ ಗಂಗಳನ್ನ ಹಸ್ತಾಂತರ ಮಾಡಲಾಗಿತ್ತು. ಎಡೆಯೂರು ದೇವಾಲಯಕ್ಕೆ ಬಂದ ನಂತರ ಪ್ರತಿ ಸಿಬ್ಬಂದಿ ಹಾಗೂ ಭಕ್ತರ ಜೊತೆಯಲ್ಲಿ ಅನ್ಯೂನ್ಯವಾಗಿ ಹೊಂದುಕೊಂಡು ಬರುವ ಭಕ್ತರನ್ನು ಆಶೀರ್ವದಿಸುವ ಕೆಲಸವನ್ನು ಪ್ರತಿನಿತ್ಯ ಮಾಡುತ್ತಾ ಬಂದಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಉಂಟಾದ ಕಾರಣ ಈ ಆನೆ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಲಾಗಿತ್ತು.