ಕಸ್ತೂರಿ ರಂಗನ್ ೭ನೇ ಅಧಿಸೂಚನೆಗೆ ಆಕ್ಷೇಪ ಪತ್ರ ಸಲ್ಲಿಸಲು ಯಲ್ಲಾಪುರದಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿಯಲ್ಲಿ ಆಕ್ಷೇಪ ಪತ್ರ ಸಲ್ಲಿಸುವುದರೊಂದಿಗೆ ಹೋರಾಟಕ್ಕೆ ಬೆಂಬಲಿಸಲು ತಾಲೂಕಿನಲ್ಲಿ ತೀರ್ಮಾನಿಸಲಾಯಿತು.
ಕಸ್ತೂರಿ ರಂಗನ್ ವಿರೋಧ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷಕನ್ನಡಪ್ರಭ ವಾರ್ತೆ ಯಲ್ಲಾಪುರ
ಕಸ್ತೂರಿ ರಂಗನ್ ೭ನೇ ಅಧಿಸೂಚನೆಗೆ ಆಕ್ಷೇಪ ಪತ್ರ ಸಲ್ಲಿಸಲು ಯಲ್ಲಾಪುರದಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿಯಲ್ಲಿ ಆಕ್ಷೇಪ ಪತ್ರ ಸಲ್ಲಿಸುವುದರೊಂದಿಗೆ ಹೋರಾಟಕ್ಕೆ ಬೆಂಬಲಿಸಲು ತಾಲೂಕಿನಲ್ಲಿ ತೀರ್ಮಾನಿಸಲಾಯಿತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಸೋಮವಾರ ತಾಲೂಕಿನ ವೆಂಕಟರಮಣ ಸಭಾಂಗಣದಲ್ಲಿ ಕಸ್ತೂರಿ ರಂಗನ್ ವಿರೋಧ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಕಣ್ಣೀಗೇರಿ, ಹಿತ್ಲಳ್ಳಿ, ಕುಂದರಗಿ, ನಂದೊಳ್ಳಿ, ಉಮ್ಮಚಗಿ, ಮಾವಿನಮನೆ, ಹಾಸಣಗಿ, ಆನಗೋಡ, ಮದನೂರು, ಚಂದಗುಳಿ, ದೇಹಳ್ಳಿ, ಕಂಪ್ಲಿ, ವಜ್ರಳ್ಳಿ, ಇಡಗುಂದಿ, ಕಿರವತ್ತಿ ಗ್ರಾಪಂ ವ್ಯಾಪ್ತಿಯ ೮೪ ಹಳ್ಳಿಗಳು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ ಎಂದರು.ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆಯಂತೆ ಪರಿಸರ ಅತೀ ಸೂಕ್ಷ್ಮ ಪ್ರದೇಶ ನಿಗದಿಗೊಳಿಸುವ ಅಂಶವು ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ, ವರದಿ ಅನುಷ್ಟಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಈಗಾಗಲೇ ಸಾಕಷ್ಟು ಕಾನೂನು ನೀತಿ, ನಿಯಮ ಅಳವಡಿಸಲಾಗಿದ್ದು, ವಿನಾಕಾರಣ ಹೆಚ್ಚಿನ ಕಾನೂನಿನ ಬಲಪ್ರಯೋಗದ ಮೂಲಕ ನಿಯಂತ್ರಿಸಲು ಪ್ರಯತ್ನಿಸದಿದ್ದಲ್ಲಿ ಜನಸಾಮಾನ್ಯರ ನೈಜ್ಯ ಜೀವನಕ್ಕೆ ಮಾರಕವಾಗುವುದೆಂದು ಹೇಳಿದರು.ಸಭೆಯಲ್ಲಿ ತಾಲೂಕಾಧ್ಯಕ್ಷ ಭೀಮಶೀ ವಾಲ್ಮೀಕಿ, ಸಂಚಾಲಕರಾದ ಚಂದ್ರಶೇಖರ ಪೂಜಾರಿ, ರಾಘವೇಂದ್ರ ಕುಣಬಿ, ಅಣ್ಣಪ್ಪ ನಾಯ್ಕ ಕಣ್ಣೀಗೇರಿ, ಪ್ರಶಾಂತ್ ಜೈನ ಅಟಬೈಲ್, ಸೀತಾರಾಮ ನಾಯ್ಕ ಕುಂದರಗಿ, ಸುಬ್ರಾಯ ಹೆಗಡೆ ಆನಗೋಡ, ವಿನೋದ ತಳಕೇರಿ ಹಾಸಣಗಿ, ಯೋಗೇಶ ನಾಯ್ಕ, ಅರವೀಸ್ ಫರ್ನಾಂಡಿಸ್ ಬಸ್ತ್ಯಾಂವ್ ಡಿಸೋಜಾ, ಶಿವರಾಮ ಆಚಾರಿ, ಸಹದೇವ ಗಾವಡಿ, ರಾಘವೇಂದ್ರ ಮರಾಠಿ, ಕೃಷ್ಣ ಕುಣಬಿ ಮುಂತಾದವರಿದ್ದರು.
ಮನೆ ಮನೆಯಿಂದ ಆಕ್ಷೇಪಣೆ:ಕಸ್ತೂರಿ ರಂಗನ್ ವರದಿ ಆಕ್ಷೇಪ ಪತ್ರವನ್ನು ಮನೆ ಮನೆಯಿಂದ ಕೇಂದ್ರ ಪರಿಸರ ಇಲಾಖೆಗೆ ಸಲ್ಲಿಸುವಂತೆ ಹೋರಾಟಗಾರರ ವೇದಿಕೆ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ವಟಗೇರಿ ತಿಳಿಸಿದರು.