ಸಾರಾಂಶ
ಪಶ್ಚಿಮ ಬಂಗಾಲದಲ್ಲಿ ಕರ್ತವ್ಯದ ವೇಳೆ ಇದ್ದಾಗ ಮಿಸ್ ಫೈರಿಂಗ್ ಆಗಿ ಗುಂಡು ತಗುಲಿ ಮೃತಪಟ್ಟಿದ್ದ ತಾಲೂಕಿನ ಕಟಗೇರಿ ಗ್ರಾಮದ ಉಮೇಶ ಅಖಂಡಪ್ಪ ಡಬಗಲ್(33) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬಾದಾಮಿ
ಪಶ್ಚಿಮ ಬಂಗಾಲದಲ್ಲಿ ಕರ್ತವ್ಯದ ವೇಳೆ ಇದ್ದಾಗ ಮಿಸ್ ಫೈರಿಂಗ್ ಆಗಿ ಗುಂಡು ತಗುಲಿ ಮೃತಪಟ್ಟಿದ್ದ ತಾಲೂಕಿನ ಕಟಗೇರಿ ಗ್ರಾಮದ ಉಮೇಶ ಅಖಂಡಪ್ಪ ಡಬಗಲ್(33) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನಡೆಯಿತು.ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯ ಕಟಗೇರಿ ಗ್ರಾಮದ ಯುವಕ ಉಮೇಶ ಅಖಂಡಪ್ಪ ಡಬಗಲ್ ಈತ ಪಶ್ಚಿಮ ಬಂಗಾಲದ ಬಿ.ಎಸ್.ಎಫ್. ಬಟಾಲಿಯನ್ 5 ರಲ್ಲಿ ಫೈರಿಂಗ್ ಮಿಸ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇವರು 13 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತ ಯೋಧನ ಪಾರ್ಥಿವ ಶರೀರ ಶುಕ್ರವಾರ ಬೆಳಿಗ್ಗೆ ಸ್ವ ಗ್ರಾಮಕ್ಕೆ ಆಗಮಿಸಿತು. ನಂತರ ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸಕಲ ಸರಕಾರಿ ಗೌರವಗಳೊಂದಿಗೆ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಉಮೇಶನಿಗೆ ಪತ್ನಿ ರೂಪಾ, ಕುಶಾಲ ಎಂಬ 4 ವರ್ಷದ ಮಗು ಇದೆ. ತಂದೆ ಅಖಂಡಪ್ಪ ಸೇರಿದಂತೆ ಮೂವರು ಸಹೋದರರು ಇದ್ದಾರೆ.