ಸಾರಾಂಶ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿವಪಾಡಿ ಶಾಖೆ ಪ್ರಥಮ ವಾರ್ಷಿಕೋತ್ಸವಮಣಿಪಾಲ: ಯೋಗ ನಮ್ಮ ದೈಹಿಕ, ಮಾನಸಿಕ ಸಮಾತೋಲನವನ್ನು ಕಾಪಾಡಿಕೊಳ್ಳುವುದರೊಂದಿಗೆ ಆರೋಗ್ಯವಾಗಿರಲು ಸಹಕಾರಿಯಾಗಿದೆ. ಯೋಗವು ಒಂದು ಅಖಂಡ ಭಾರತದ ಚಿಂತನೆಯಾಗಿದೆ ಎಂದು ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಹೇಳಿದ್ದಾರೆ.ಶಿವಪಾಡಿಯ ರತ್ನ ಸಂಜೀವ ಕಲಾಮಂಡಲದಲ್ಲಿ ಭಾನುವಾರ ನಡೆದ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿವಪಾಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಯೋಗ ಬಂಧು ದಿವಾಕರ್ ಅವರು ಮಾತನಾಡಿ ನಿರಂತರ ಯೋಗಾಭ್ಯಾಸವು ನಮ್ಮ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವುದಲ್ಲದೆ ದೈಹಿಕ ಸದೃಢತೆಯನ್ನು ಕಾಪಾಡಿಕೊಳಲು ಸಾಧ್ಯವಾಗುತ್ತದೆ ಎಂದರು.ಶಾಖೆಯ ಮುಖ್ಯ ಶಿಕ್ಷಕಿ ವಾಣಿ ನರೇಶ, ನಗರ ಸಂಚಾಲ ರಮೇಶ್, ಶ್ರೀಪತಿ, ಪ್ರದೀಪ್, ಶಿವ ಪ್ರಸಾದ್, ರೇಷ್ಮಾ, ಅನಿತಾ, ಪ್ರಕಾಶಿನಿ ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು. ರಶ್ಮಿತಾ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಚೇತನ ಗಣೇಶ ಅವರು ಸ್ವಾಗತಿಸಿ, ನಮಿತಾ ಪ್ರಾರ್ಥಿಸಿ, ನಮಿತಾ. ಜಿ ನಿರೂಪಿಸಿ, ಮಹೇಶ್ ನಾಯ್ಕ್ ವಂದಿಸಿದರು. ಕಾರ್ಯಕ್ರಮ ದಲ್ಲಿ 40 ಕ್ಕೂ ಹೆಚ್ಚು ಯೋಗ ಬಂಧುಗಳು ಉಪಸ್ಥಿತರಿದ್ದು ಯೋಗಾಭ್ಯಾಸ ಮಾಡಿದರು.
;Resize=(128,128))
;Resize=(128,128))