ಸಾರಾಂಶ
ಯೋಗ ವ್ಯಕ್ತಿತ್ವ ರೂಪಿಸುತ್ತದೆ: ಜಿಪಂ ಸಿಇಒ ಪ್ರಭು
ಕನ್ನಡಪ್ರಭ ವಾರ್ತೆ ಕೊರಟಗೆರೆ
ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನು ಯೋಗ ಮತ್ತು ಧ್ಯಾನ ಮಾಡಿದಾಗ ಮಾತ್ರ ಸಧೃಢವಾಗಿರಲು ಸಾಧ್ಯ ಎಂದು ಎಂದು ಜಿಪಂ ಸಿಇಒ ಜಿ. ಪ್ರಭು ಅವರು ತಿಳಿಸಿದರು.ಪಟ್ಟಣದ ಗುರುಭವವದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಏರ್ಪಡಿಸಲಾಗಿದ್ದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ದೇಶದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗಿದ್ದು, ಅದರಂತೆ ಎಲ್ಲಾ ದೇಶಗಳು ಈ ಯೋಗ ಶಿಕ್ಷಣ ಪಡೆಯಬೇಕು ಎಂದು ಅಂತಾರಾಷ್ಟೀಯ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಯೋಗ ಭಾರತೀಯ ಸಂಸ್ಕೃತಿಯ ಸಂಕೇತ. ಇಂದಿನ ಜೀವನ ಕ್ರಮ ನಮ್ಮ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವುದರಿಂದ ನಮ್ಮ ದೇಹ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಹಾಗಾಗಿ ರೋಗ ರುಜುನೆಗಳು ಬೇಗ ನಮ್ಮ ದೇಹವನ್ನು ಆವರಿಸುತ್ತಿದೆ. ಇಂಗ್ಲೀಷ್ ಮೆಡಿಸಿನ್‌ಗಳಿಂದ ತಕ್ಷಣಕ್ಕೆ ಪರಿಹಾರ ಸಿಕ್ಕರೂ ಕೂಡ ಅದು ಶಾಶ್ವತವಾಗಿರುವುದಿಲ್ಲ. ಆದರೆ ನಿರಂತರ ಯೋಗಾಭ್ಯಾಸ ರೂಢಿಸಿಕೊಂಡಲ್ಲಿ ರೋಗ ಬಾರದಂತೆ ತಡಗಟ್ಟುವುದರೊಂದಿಗೆ ಉತ್ತಮವಾದ ವ್ಯಕ್ತಿತ್ವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಈ ಸಂದರ್ಭದಲ್ಲಿ ಸಂಚಾಲಕರಾದ ಜಿ.ಪಿ.ಮಂಜುನಾಥ, ಜಿಲ್ಲಾ ಸಮಿತಿ ಪ್ರಾಂಶುಪಾಲ ಚನ್ನಬಸವಣ್ಣ , ಯೋಗಪಟು ಡಾ. ಆತ್ಮಾರಾಮ ಶೆಟ್ಟಿ, ಕೊರಟಗೆರೆ ಸಮಿತಿ ಪ್ರಮುಖರಾದ ಲೋಕೇಶ್, ಚನ್ನಬಸವಣ್ಣ, ಗಂಗಾಧರ್, ರುದ್ರಾರಾಧ್ಯ, ನಾಗರಾಜು, ಮಂಜುನಾಥ, ಅನಂತರಾಜು, ಬಾಲಣ್ಣ, ಕೆಂಪೇಗೌಡ, ಚಿಕ್ಕನರಸೀಯಪ್ಪ, ದಾಕ್ಷಾಯಿಣಿ, ಚೇತನ, ಭವ್ಯ, ಲಕ್ಷ್ಮಿ, ರಜನಿ, ತನುಜ, ಕಿರಣ್, ಶಿವಕುಮಾರ್, ನಾಗರಾಜು ಇತರರು ಇದ್ದರು.