ಸಾರಾಂಶ
ಪ್ರತಿಯೊಬ್ಬರೂ ಯೋಗವನ್ನು ಅಭ್ಯಾಸ ಮಾಡುವುದರಿಂದ ಇಡೀ ಸಮಾಜವೇ ರೋಗಮುಕ್ತ ಆಗಬಲ್ಲದು. ದೇಶದ ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಇದು ತುಂಬಾ ಅಮೂಲ್ಯವಾದ ಕಾರ್ಯಕ್ರಮ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.
- ಹರಿಹರ ಬಿಜೆಪಿ ಕಚೇರಿಯಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಹರಿಹರ ಪ್ರತಿಯೊಬ್ಬರೂ ಯೋಗವನ್ನು ಅಭ್ಯಾಸ ಮಾಡುವುದರಿಂದ ಇಡೀ ಸಮಾಜವೇ ರೋಗಮುಕ್ತ ಆಗಬಲ್ಲದು. ದೇಶದ ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಇದು ತುಂಬಾ ಅಮೂಲ್ಯವಾದ ಕಾರ್ಯಕ್ರಮ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಶನಿವಾರ ಬಿಜೆಪಿ ಕಚೇರಿಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯೋಗದ ಮಹತ್ವ ಇಡೀ ವಿಶ್ವಕ್ಕೇ ತಿಳಿಸಿದ ಕೀರ್ತಿ ನಮ್ಮ ಭಾರತಕ್ಕೆ ಸಲ್ಲುತ್ತದೆ. ಜಗತ್ತಿನ ಹಲವಾರು ದೇಶಗಳ ಕೋಟ್ಯಂತರ ಮಂದಿ ಯೋಗವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನಾವೂ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿ ಇರೋಣ ಎಂದರು.ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಸ್ವಸ್ಥ್ಯ ಮನಸ್ಸು ಹಾಗೂ ಸದೃಡ ದೇಹಕ್ಕಾಗಿ ಯೋಗಾಭ್ಯಾಸ ಅನಿವಾರ್ಯವಾಗಿದೆ ಎಂದರು.
ನಗರಸಭಾ ಸದಸ್ಯೆ ಅಶ್ವಿನಿ ಕೃಷ್ಣ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಪಿ.ಲಿಂಗರಾಜ್, ದೂಡಾ ಮಾಜಿ ಸದಸ್ಯರಾದ ಭಾತಿ ಚಂದ್ರಶೇಖರ್, ರಾಜು ರೋಖಡೆ, ಪ್ರದಾನ ಕಾರ್ಯದರ್ಶಿಗಳಾದ ಕೆ.ಎನ್.ಹಳ್ಳಿ ಮಾಂತೇಶ್, ತುಳಜಪ್ಪ ಭೂತೆ, ವೀರೇಶ್ ಆದಾಪುರ, ಮುಖಂಡರಾದ ಸ್ವಾತಿ ಹನುಮಂತ, ಆದಿತ್ಯ ಮೆಹರ್ವಾಡೆ, ಗೋಪಿ, ಪ್ರಶಾಂತ್ ಕುಮಾರ್, ಸಾಕ್ಷಿ ಶಿಂದೆ ಇತರರಿದ್ದರು.- - -
-21ಎಚ್‍ಆರ್‍ಆರ್04:ಹರಿಹರ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಯೋಗ ದಿನ ಆಚರಿಸಲಾಯಿತು.
;Resize=(128,128))
;Resize=(128,128))
;Resize=(128,128))