ಯೋಗಾಸನ ಸ್ಪರ್ಧೆ: ಡಾ.ಎಸ್ಸೆಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ಬಹುಮಾನ

| Published : Feb 02 2024, 01:03 AM IST

ಯೋಗಾಸನ ಸ್ಪರ್ಧೆ: ಡಾ.ಎಸ್ಸೆಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ಬಹುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಡಾ.ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಸ್ಕೂಲ್‌ನ ಯೋಗ ವಿದ್ಯಾರ್ಥಿಗಳು ಭಾಗವಹಿಸಿದ ಬಹುಮಾನ ಗಳಿಸಿ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 8-10 ವರ್ಷದ ಬಾಲಕಿಯರ ವಿಭಾಗದಲ್ಲಿ ಭೂಮಿ ಆರ್.ರಾಥೋಡ್ ಪ್ರಥಮ ಸ್ಥಾನ ಚಿನ್ನದ ಪದಕ, ಮೇಧಾ ಪಾಟೀಲ್ ದ್ವಿತೀಯ ಸ್ಥಾನ ಬೆಳ್ಳಿ ಪದಕ ಪಡೆದಿದ್ದಾರೆ.

ದಾವಣಗೆರೆ: ಪುಣೆಯ ಇಂಡಿಯನ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಇತ್ತೀಚೆಗೆ ವೆಲ್ಫೇರ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಯೂತ್ ಗೇಮ್ಸ್ 2023-24ರ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ಡಾ.ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಸ್ಕೂಲ್‌ನ ಯೋಗ ವಿದ್ಯಾರ್ಥಿಗಳು ಭಾಗವಹಿಸಿದ ಬಹುಮಾನ ಗಳಿಸಿ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 8-10 ವರ್ಷದ ಬಾಲಕಿಯರ ವಿಭಾಗದಲ್ಲಿ ಭೂಮಿ ಆರ್.ರಾಥೋಡ್ ಪ್ರಥಮ ಸ್ಥಾನ ಚಿನ್ನದ ಪದಕ, ಮೇಧಾ ಪಾಟೀಲ್ ದ್ವಿತೀಯ ಸ್ಥಾನ ಬೆಳ್ಳಿ ಪದಕ, 10-12 ವರ್ಷದವರ ವಿಭಾಗದಲ್ಲಿ ಎನ್.ತನುಶ್ರೀ ಮತ್ತು ಪೂನಂ ವಿ.ಭಟ್ ಪ್ರಥಮ ಸ್ಥಾನ ಚಿನ್ನದ ಪದಕ, ರಿಷಿಕಾ ಪಾಟೀಲ್ ತೃತೀಯ ಸ್ಥಾನ ಕಂಚಿನ ಪದಕ, 14-16 ವರ್ಷದ ವಿಭಾಗದಲ್ಲಿ ಎಂ.ಎನ್.ವರ್ಷಿತಾ ದ್ವಿತೀಯ ಸ್ಥಾನ, ಬೆಳ್ಳಿ ಪದಕ ಹಾಗೂ ಬಾಲಕರ ವಿಭಾಗದಲ್ಲಿ ಆರ್.ಎಂ.ಸೌರಭ ಪ್ರಥಮ ಸ್ಥಾನ, ಚಿನ್ನದ ಪದಕ ಸಮಗ್ರವಾಗಿ ಪಡೆದು ಕರ್ನಾಟಕ ತಂಡದ ಪ್ರಶಸ್ತಿ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲೆ ಚೇರ್ಮನ್ ಎಸ್.ಎಸ್.ಗಣೇಶ, ಶಾಲೆಗಳ ಮುಖ್ಯಸ್ಥ ಮಂಜುನಾಥ ಗಂಗರಾಜು, ಪ್ರಾಚಾರ್ಯರಾದ ಕಮಲ್, ಯೋಗ ಶಿಕ್ಷಕ ಡಾ.ಸ್ವಪ್ನ, ಶಿಕ್ಷಕರು ಅಭಿನಂದಿಸಿದ್ದಾರೆ.