ಯೋಗದಿಂದ ಅನೇಕ ರೋಗಗಳಿಗೆ ಮುಕ್ತಿ: ಯೋಗ ಪಟು ಎಸ್.ಲತಾ

| Published : Jun 23 2024, 02:05 AM IST

ಸಾರಾಂಶ

ಯೋಗದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಜಗತ್ತಿಗೆ ಸಾರಲಾಗುತ್ತಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ದಿನನಿತ್ಯವೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಸುತ್ತೂರು ಶ್ರೀಮಠದಲ್ಲಿ ನಿತ್ಯವೂ ಯೋಗಾಭ್ಯಾಸ ನಡೆಯುತ್ತಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮೈಸೂರು

ಯೋಗ ಕೇವಲ ಆಸನವಲ್ಲ, ಅದು ನಮ್ಮ ಬದುಕನ್ನು ಕಟ್ಟಿಕೊಡುವಂತ ಅತ್ಯುನ್ನತ ಸಾಧನ. ಇಂಗ್ಲೀಷ್ ಔಷಧಿ ಮತ್ತು ಆಯುರ್ವೇದ ಔಷಧಿಯಿಂದ ಗುಣಪಡಿಸಲಾಗದಂತ ಹಲವಾರು ರೋಗಗಳನ್ನು ಯೋಗದಿಂದ ಸರಿಪಡಿಸಬಹುದು ಎಂದು ಯೋಗ ಪಟು ಎಸ್. ಲತಾ ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯೋಗಿಗಗಳಾಗಬೇಕೆಂದರೆ ಕೇವಲ ಯಾವುದೋ ಒಂದು ದಿನಕ್ಕೆ ಯೋಗವನ್ನು ಆಚರಣೆ ಮಾಡಿದರೆ ಸಾಧ್ಯವಾಗುವುದಿಲ್ಲ. ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಮ್ಮ ದೇಹದ ಆರೋಗ್ಯ ಸ್ವಾಸ್ಥ್ಯ ಇದ್ದಾಗ ಮನಸ್ಸು ಸಹ ಸ್ವಾಸ್ಥ್ಯವಿರುತ್ತದೆ. ಮನಸ್ಸು ಸರಿ ಇದ್ದರೆ ಒಳ್ಳೆಯ ರೀತಿಯಲ್ಲಿ ವಿಚಾರ ಚಿಂತನೆ ಮಾಡಬಹುದು ಎಂದು ಅವರು ಹೇಳಿದರು.

ನಂತರ ಯೋಗ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಸರಳ ಆಸನಗಳು, ಪ್ರಾಣಾಯಾಮ ಭುಜಂಗಸನಾಗಳನ್ನು ಮಾಡಿಸಿದರು. ಮಕ್ಕಳು ಯೋಗವನ್ನು ಮಾಡುವುದರ ಜೊತೆಗೆ ಯೋಗವನ್ನು ಆನಂದಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಎಂ. ಗುರುಸ್ವಾಮಿ ಮತ್ತು ಸಿಬ್ಬಂದಿ ಇದ್ದರು.ಸದೃಢ ಮನಸ್ಸು ಮತ್ತು ಆರೋಗ್ಯಕ್ಕಾಗಿ ಯೋಗ: ಎಸ್. ನಾಗೇಂದ್ರಪ್ರಭುಕನ್ನಡಪ್ರಭ ವಾರ್ತೆ ಮೈಸೂರುಸದೃಢವಾದ ಮನಸ್ಸು ಮತ್ತು ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯವೂ ಅಭ್ಯಾಸ ಮಾಡಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಯ ಹಾಗೂ ಯೋಗ ಮಾರ್ಗದರ್ಶಕ ಎಸ್. ನಾಗೇಂದ್ರಪ್ರಭು ತಿಳಿಸಿದರು.ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ಭಾರತ ನೀಡಿದ ಮಹತ್ವದ ಕೊಡುಗೆಗಳಲ್ಲಿ ಯೋಗವು ಒಂದು. ಅದರಲ್ಲೂ ಮೈಸೂರಿನ ಬಿ.ಕೆ.ಎಸ್. ಅಯ್ಯಂಗಾರ್ ಮತ್ತು ಪಟ್ಟಾಭಿ ಜೋಯಿಸ್ ಸೇರಿದಂತೆ ಅನೇಕರು ಯೋಗದ ಮಹತ್ವ ಜಗತ್ತಿನೆಲ್ಲೆಡೆ ಪಸರಿಸಲು ಪ್ರಮುಖ ಪಾತ್ರವನ್ನು ವಹಿಸಿದರು ಎಂದರು.

ಯೋಗದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಜಗತ್ತಿಗೆ ಸಾರಲಾಗುತ್ತಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ದಿನನಿತ್ಯವೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಸುತ್ತೂರು ಶ್ರೀಮಠದಲ್ಲಿ ನಿತ್ಯವೂ ಯೋಗಾಭ್ಯಾಸ ನಡೆಯುತ್ತಿರುವುದು ಶ್ಲಾಘನಿಯ ಎಂದು ಅವರು ಹೇಳಿದರು.ಗುರುಕುಲದ ಸಾಧಕರು, ಸೇವಾ ಸಿಬ್ಬಂದಿ ಹಾಗೂ ಇತರ ಯೋಗ ಬಂಧುಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.