ಭಾರತದಲ್ಲಿ ಪ್ರಾಚೀನ ಕಾಲದಿಂದ ಯೋಗವಿದೆ

| Published : Jun 23 2025, 12:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ: ಯೋಗ ಒಂದು ಬೆಳಕು ಇದ್ದಂತೆ, ಅದನ್ನು ಎಲ್ಲರೂ ಒಮ್ಮೆ ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ಕತ್ತಲೆಯೇ ಬರುವುದಿಲ್ಲ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್.ಬಿ.ಪತಂಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ: ಯೋಗ ಒಂದು ಬೆಳಕು ಇದ್ದಂತೆ, ಅದನ್ನು ಎಲ್ಲರೂ ಒಮ್ಮೆ ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ಕತ್ತಲೆಯೇ ಬರುವುದಿಲ್ಲ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್.ಬಿ.ಪತಂಗಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಶಾಲಾ ಅವರಣದಲ್ಲಿ ಹಮ್ಮಿಕೊಂಡ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗ ಒಂದು ಸಂಸ್ಕೃತ ಪದ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯೋಗ ಬೆರೆತು ಹೋಗಿದೆ. ಯೋಗವು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಮನುಷ್ಯನಲ್ಲಿ ನ್ನು ಬದಲಾವಣೆ ತರುತ್ತದೆ. ಯೋಗವು ಚಲನೆ, ಉಸಿರಾಟ ಹಾಗೂ ಧ್ಯಾನಗಳನ್ನು ಳಗೊಂಡಿದೆ ಎಂದರು.

ಸಂಸ್ಥೆ ನಿರ್ದೇಶಕ ಟಿ ಟಿ ಹಗೇದಾಳ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅರಿತು 2014ರಲ್ಲಿ ವಿಶ್ವ ಸಂಸ್ಥೆಯಲ್ಲಿ ಮಂಡಿಸಿ 177 ದೇಶಗಳು ಬೆಂಬಲ ನೀಡಿದ ಪ್ರಯುಕ್ತ ಜೂ 21ರಂದು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ರೀಡಾಪಟು ಆದಿತ್ಯ ಕೆರಕಲಮಟ್ಟಿ ಯೋಗ ಪ್ರದರ್ಶನ ನೀಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ರಮೇಶ ತೋಟದ, ವಿಶ್ವಯೋಗ ದಿನದ ಪ್ರತಿಜ್ಞೆಯನ್ನು ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಬೋಧಿಸಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿವಾನಂದ ಶೀಲವಂತ, ಎಸ್.ಜಿ.ಜಮಖಂಡಿ, ಮುಖ್ಯ ಶಿಕ್ಷಕರಾದ ಆರ್.ಕೆ.ಉಮರಾಣಿ, ವೈ.ಜಿ.ಶಿರೋಳ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವೈಷ್ಣವಿ ಕುಲಕರ್ಣಿ ಸ್ವಾಗತಿಸಿದರು. ಉಪನ್ಯಾಸಕಿ ಶೈಲಾ ಮಠಪತಿ ವಂದಿಸಿದರು. ಶಿಕ್ಷಕಿ ಪ್ರಿಯಾ ಕಾಖಂಡಕಿ ನಿರೂಪಿಸಿದರು. ಶಿಕ್ಷಕಿಯರಾದ ಶೈಲಾ ಬೀಳಗಿ ಹಾಗೂ ನಿಂಗಮ್ಮ ಹಳ್ಳಿ ಪ್ರಾರ್ಥಿಸಿದರು.