ರೋಗ ದೂರಮಾಡುವ ಶಕ್ತಿ ಯೋಗಕ್ಕಿದೆ

| Published : Jun 22 2024, 12:46 AM IST

ಸಾರಾಂಶ

ತಾಲೂಕಿನ ತುಂಬಗಿ ಗ್ರಾಪಂ ವ್ಯಾಪ್ತಿಯ ಪತ್ತೇಪೂರ ಗ್ರಾಮದ ಅಮೃತ ಸರೋವರ ಕೆರೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ತುಂಬಗಿ ಗ್ರಾಪಂ ವ್ಯಾಪ್ತಿಯ ಪತ್ತೇಪೂರ ಗ್ರಾಮದ ಅಮೃತ ಸರೋವರ ಕೆರೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಮನರೇಗಾ ಸಹಾಯಕ ನಿರ್ದೇಶಕಿ ಸುಜಾತ ಯಡ್ರಾಮಿ ಮಾತನಾಡಿ, ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗವು ಅತ್ಯಾವಶ್ಯಕ. ಯೋಗದಿಂದ ಅಸ್ತಮಾ, ಧಮ್ಮು, ಕೆಮ್ಮು ಅಲ್ಲದೇ ಅನೇಕ ರೋಗಗಳು ದೂರ ಮಾಡುವ ಶಕ್ತಿ ಯೋಗದಲ್ಲಿ ಅಡಗಿದೆ ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಅವರು ಮಾತನಾಡಿದರು. ಈ ಸಮಯದಲ್ಲಿ ಗ್ರಾಪಂ ಉಪಾಧ್ಯಕ್ಷ ಗೌತಮ ಹರಿಜನ, ಸದಸ್ಯ ರಾಮನಗೌಡ ಹಾದಿಮನಿ, ಮದಮಾಬಿ ಮಕಂದಾರ, ಟಿಸಿ ನಾಗರಾಜ, ಐಇಸಿ ಸಂಯೋಜಕರಾದ ಮಲಕಪ್ಪ, ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎ.ಜಿ.ಹುಚನೂರ ಇತರರು ಇದ್ದರು.