ಮಾನಸಿಕ ಅಸ್ಥಿರತೆ ಹೋಗಲಾಡಿಸುವ ಶಕ್ತಿ ಯೋಗಕ್ಕಿದೆ-ತಿಪ್ಪಣ್ಣನವರ

| Published : Jun 23 2024, 02:09 AM IST

ಮಾನಸಿಕ ಅಸ್ಥಿರತೆ ಹೋಗಲಾಡಿಸುವ ಶಕ್ತಿ ಯೋಗಕ್ಕಿದೆ-ತಿಪ್ಪಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದ ದೈಹಿಕ ಸಮಸ್ಯೆಗಳನ್ನು ಹಾಗೂ ಮಾನಸಿಕ ಅಸ್ಥಿರತೆಯನ್ನು ಹೋಗಲಾಡಿಸುವಂತಹ ಶಕ್ತಿ ಯೋಗಕ್ಕಿದೆ ಎಂದು ಎಸ್‌. ಬಿ.ತಿಪ್ಪಣ್ಣವರ ಹೇಳಿದರು.

ಹಿರೇಕೆರೂರು: ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದ ದೈಹಿಕ ಸಮಸ್ಯೆಗಳನ್ನು ಹಾಗೂ ಮಾನಸಿಕ ಅಸ್ಥಿರತೆಯನ್ನು ಹೋಗಲಾಡಿಸುವಂತಹ ಶಕ್ತಿ ಯೋಗಕ್ಕಿದೆ ಎಂದು ಎಸ್‌. ಬಿ.ತಿಪ್ಪಣ್ಣವರ ಹೇಳಿದರು.

ಹಿರೇಕೆರೂರ ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಸ್ಥೆ, ಅಧೀನ ಶಾಲಾ ಕಾಲೇಜುಗಳ ಸಹಯೋಗದಲ್ಲಿ, ದುರ್ಗಾದೇವಿ ಯೋಗ ಸಮಿತಿ ಹಿರೇಕೆರೂರ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಅಡಿಯಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಗುಂಪು ಯೋಗವೆಂದು ಕರೆಯಲ್ಪಡುತ್ತದೆ. ಭಾರತೀಯ ತತ್ವಶಾಸ್ತ್ರದ ಹಾಗೂ ಇತರೇ ವಿಷಯಗಳ ಜೊತೆಗೆ ವಿದ್ಯಾವಂತ ಪೌರಾತ್ಯ ಮತ್ತು ಪಾಶ್ಚಾತ್ಯ ಜನರನ್ನು ಯೋಗವು ತನ್ನಡೆ ಸೆಳೆದುಕೊಂಡಿದೆ. ದಿನದ ೨೪ ಗಂಟೆಗಳಲ್ಲಿ ೨೦ ನಿಮಿಷ ಯೋಗವನ್ನು ಮಾಡಿದರೆ ನಮ್ಮ ದೇಹ ಹಾಗೂ ಮನಸ್ಸಿಗೆ ಅತ್ಯಂತ ಆನಂದಮಯ ಶಕ್ತಿಯನ್ನು ಪಡೆಯಬಹುದು. ಇಂದು ನೆರವೇರಿದ ಸಹಸ್ರಾರು ಜನರು ಈ ಯೋಗ ಕ್ರಿಯೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಎಸ್.ಪಾಟೀಲ ಮಾತನಾಡಿ, ಯೋಗ ಶಿಕ್ಷಣವು ಮಾನವನ ದೈಹಿಕ, ಮಾನಸಿಕ ವಿಕಾಸಕ್ಕೆ ಪ್ರಮುಖ ಸಾಧನವಾಗಿದೆ. ಮಾನವನ ದೇಹದ ಪ್ರತಿಯೊಂದು ಅವಯವಗಳು ಕ್ರಿಯಾತ್ಮಕವಾಗಿ ಚಟುವಟಿಕೆಯಿಂದಿರಲು ಯೋಗ ಅವಶ್ಯಕ. ಪ್ರಮುಖವಾಗಿ ಮಕ್ಕಳು ಸಣ್ಣವರಿರುವಾಗಲೇ ಯೋಗದಲ್ಲಿ ಪಾಲ್ಗೊಳ್ಳುವುದರಿಂದ ದೇಹ ರಚನೆಯ ಸೂಕ್ಷ್ಮ ಅಂಗಗಳಾದ ಕಣ್ಣು, ಮೆದುಳು, ನರಮಂಡಲ, ಹೃದಯ ಇವುಗಳು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇಂದು ಭಾರತ ದೇಶದ ಅನೇಕ ಶಾಲೆಗಳು ಪ್ರಾಥಮಿಕ ಪ್ರೌಢ ಶಿಕ್ಷಣದಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಪ್ರಧಾನಿ ಮೋದಿಜಿಯವರು ವಿಶ್ವಸಂಸ್ಥೆಯಿಂದ ಯೋಗಕ್ಕೆ ಮಾನ್ಯತೆಯನ್ನು ಪಡೆದುಕೊಂಡು ಜೂನ್-೨೧ನ್ನು ಅಂತರ್ ರಾಷ್ಟ್ರೀಯ ಯೋಗ ದಿನವೆಂದು ನಿರ್ಣಯಿಸಿರುವುದು ಅದೊಂದು ಐತಿಹಾಸಿಕ ನಿರ್ಣಯವಾಗಿದೆ. ಇಡೀ ವಿಶ್ವವೇ ಭಾರತದ ಯೋಗವನ್ನು ಪುಷ್ಟೀಕರಿಸಿ ಜಗತ್ತಿನಾದ್ಯಂತ ಜನರು ದೈನಂದಿನ ಯೋಗದಲ್ಲಿ ತೊಡಗಿರುವುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಅಂತಹ ಯೋಗವನ್ನು ಉನ್ನತ ಶಿಕ್ಷಣದಲ್ಲಿ ಕಡ್ಡಾಯಗೊಳಿಸುವಂತಹ ನಿರಂತರ ಪ್ರಕ್ರಿಯೆ ನಡೆಯುತ್ತಿರುವುದು ಆಶಾದಾಯಕ ವಿಷಯವಾಗಿದೆ ಎಂದುರು.ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಎಸ್. ವೀರಭದ್ರಯ್ಯ ಹಾಗೂ ದುರ್ಗಾದೇವಿ ಯೋಗ ಸಮಿತಿ ಸದಸ್ಯರಾದ ಶಂಭಣ್ಣ ತಂಬಾಕದ, ಪ್ರಕಾಶ ಶಿರಗಂಬಿ, ಕುಸುಮಾ ಬಣಕಾರ ಹಾಗೂ ಅಧೀನ ಶಾಲಾ ಕಾಲೇಜುಗಳ ಮುಖ್ಯಸ್ಥರಾದ ಬಿ.ಪಿ. ಹಳ್ಳೇರ, ಕೆ.ಆರ್. ಲಮಾಣಿ, ಆರ್.ಹೆಚ್. ಬೆಟ್ಟಳ್ಳೇರ, ಆರ್.ಹೆಚ್. ಪೂಜಾರ, ಬಿ.ವ್ಹಿ. ಸನ್ನೇರ, ಸತೀಶ ಬಣಕಾರ, ಹಿರಿಯ ಶಿಕ್ಷಕರಾದ ಕೆ.ಹೆಚ್. ಮಾವಿನತೋಪ, ಎಂ.ಜಿ. ಕಡದಕಟ್ಟಿ, ಎನ್.ಬಿ. ಮುದಕನಗೌಡ್ರ, ಸಿ.ಎಸ್. ಮರಿಗೂಳಪ್ಪನವರ, ತನುಜಾ ಉಪ್ಪಾರ, ಜಾವಿದ್ ಭಾಷಾ, ರಮೇಶ ಮೆಣಸಿನಹಾಳ, ಎಸ್.ಸಿ. ಬಸರೀಹಳ್ಳಿ, ಎಂ.ಸಿ. ಮುದಿಗೌಡ್ರ, ಪಿ.ಎಂ. ಡಮ್ಮಳ್ಳಿ, ಸಿಬ್ಬಂದಿ ವರ್ಗದವರು ಸಹಸ್ರಾರು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಅಂತರ್ ರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಆರ್.ಎಂ. ಕರೇಗೌಡ್ರ ಸ್ವಾಗತಿಸಿದರು.