ದೈಹಿಕವಾಗಿ ಸದೃಢರಾಗಲು ಯೋಗ ಸಹಕಾರಿ

| Published : Jun 22 2025, 01:18 AM IST

ಸಾರಾಂಶ

ಯೋಗವು ನಿಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ ಎಂದು ಬಿಇಎಂಎಲ್ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಹ್ಮಣ್ಯಂ ಹೇಳಿದರು.

ಕೆಜಿಎಫ್: ಯೋಗವು ನಿಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ ಎಂದು ಬಿಇಎಂಎಲ್ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಹ್ಮಣ್ಯಂ ಹೇಳಿದರು.

ನಗರದಲ್ಲಿ ಬಿಇಎಂಎಲ್ ಕಾರ್ಖಾನೆಯ ಆವರಣದಲ್ಲಿ ನಡೆದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಯೋಗದ ಮಹತ್ವದ ಬಗ್ಗೆ ಜಗತ್ತಿಗೆ ತಿಳಿಸಿಕೊಟ್ಟ ಗೌರವ ನಮ್ಮ ದೇಶಕ್ಕೆ ಸಲ್ಲುತ್ತದೆ. ಯೋಗಕ್ಕೆ ವಿಶೇಷ ಪ್ರಾಧಾನ್ಯತೆ ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆ ಜೂನ್ ೨೧ನ್ನು ವಿಶ್ವ ಯೋಗ ದಿನಾಚರಣೆಯನ್ನಾಗಿ ಘೋಷಣೆ ಮಾಡಿದ್ದು, ವಿಶ್ವದ ೧೮೦ ಕ್ಕೂ ಹೆಚ್ಚು ದೇಶಗಳು ಯೋಗ ಆಚರಣೆ ಮಾಡುವುದರ ಮೂಲಕ ಭಾರತ ವಿಶ್ವಗುರುವಾಗಿದೆ ಎಂದರು.

ವಿದೇಶಗಳಲ್ಲಿ ಯೋಗದ ಬಗ್ಗೆ ಆಸಕ್ತಿ ಬೆಳೆಯುತ್ತಿದೆ, ಯೋಗದ ಅಭ್ಯಾಸದಿಂದ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತಿ ಲಭಿಸುತ್ತದೆ. ಯೋಗವನ್ನು ಮಾಡುವುದರಿಂದ ವ್ಯಕ್ತಿಯ ಇಡೀ ದಿನ ಮನಸ್ಸು ಪ್ರಫುಲ್ಲತೆ ಹಾಗೂ ಚೈತನ್ಯದಿಂದ ಕೂಡಿರಲಿದೆ ಎಂದರು. ಯೋಗ ದೇಶದ ಮೂಲೆ ಮೂಲೆಗಳ ಹಳ್ಳಿಗಳಿಗೂ ವಿಸ್ತರಿಸಬೇಕು ಎಂದರು. ಬಿಇಎಂಎಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥ ಬೆಮೊಗ್, ಎಸ್‌ಸಿ-ಎಸ್‌ಟಿ ಅಧ್ಯಕ್ಷರು, ಬೆಮಿಯ ಅಧ್ಯಕ್ಷರು, ಕಾರ್ಯನಿರ್ವಾಹಕರು, ಉದ್ಯೋಗಿಗಳು, ಶಾಲಾ ಮಕ್ಕಳು ಮತ್ತು ಬಿಡಬ್ಲ್ಯೂಡಬ್ಲ್ಯೂಎಫ್ ಸದಸ್ಯರು ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದ್ದರು.