ಸಾರಾಂಶ
ಆರೋಗ್ಯ ಹಾಗೂ ಸಂಸ್ಕಾರ ವೃದ್ಧಿಗೆ ಯೋಗ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅಭಿಪ್ರಾಯ ಪಟ್ಟರು.
ಜಿಲ್ಲಾ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನೂತನ ಯೋಗಮಂದಿರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆರೋಗ್ಯ ಹಾಗೂ ಸಂಸ್ಕಾರ ವೃದ್ಧಿಗೆ ಯೋಗ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅಭಿಪ್ರಾಯ ಪಟ್ಟರು.
ನಗರದ ಬೈಪಾಸ್ ರಸ್ತೆಯ ಕಲ್ಯಾಣನಗರ ಸಮೀಪದಲ್ಲಿ ಜಿಲ್ಲಾ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಪ್ರಾರಂಭಗೊಂಡ ನೂತನ ಯೋಗಮಂದಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು, ಯೋಗಾಭ್ಯಾಸ ಮಾಡುವ ಮೂಲಕ ಗುಂಪಿನಲ್ಲಿ ಆಂತರಿಕ ಆತ್ಮ ಗುರುತಿಸಲು ಸಾಧ್ಯವಾಗುತ್ತದೆ. ಯೋಗಾಸನ, ಧ್ಯಾನ, ಉಸಿರಾಟ, ವಿಶ್ರಾಂತಿ, ಯೋಗ ಆಧಾರಿತ ಚಟುವಟಿಕೆಗಳು, ಆಟಗಳು, ಪಠಣ ಮತ್ತು ಉಪನ್ಯಾಸಗಳು ದೈನಂದಿನ ದಿನಚರಿಯ ಭಾಗವಾಗಿದೆ ಎಂದು ಹೇಳಿದರು.ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಯೋಗ ಮಂದಿರವನ್ನು ಸಮರ್ಪಕವಾಗಿ ಸುತ್ತಮುತ್ತಲಿನ ನಿವಾಸಿಗಳು ಬಳಸಿಕೊಳ್ಳಬೇಕು ಆರೋಗ್ಯ ಶರೀರವನ್ನು ತಮ್ಮದಾಗಿಸಿ ಕೊಳ್ಳಬೇಕು ಎಂದು ಶುಭ ಕೋರಿದರು.ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ವರದರಾಜ್, ಯೋಗ ಶಿಕ್ಷಕ ಪಿ.ಚಂದ್ರಮೌಳಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್, ಮುಖ್ಯಸ್ಥ ರಾಮಸ್ವಾಮಿ, ಸದಸ್ಯ ರಾಘವೇಂದ್ರ, ಯೋಗಾಸಕ್ತರಾದ ಪವರ್, ಸಿದ್ದೇಗೌಡ, ಶೋಭಾ, ನಾಗಣ್ಣ, ಸುಮಿತ್ರ, ಶಾರದಾ, ಪುಷ್ಪ, ಲಕ್ಷ್ಮಮ್ಮ ಹಾಜರಿದ್ದರು.
13 ಕೆಸಿಕೆಎಂ 1ಚಿಕ್ಕಮಗಳೂರಿನ ಬೈಪಾಸ್ ರಸ್ತೆಯ ಕಲ್ಯಾಣನಗರ ಸಮೀಪದಲ್ಲಿ ನೂತನವಾಗಿ ಯೋಗ ಮಂದಿರ ಪ್ರಾರಂಭಗೊಂಡಿತು. ಸಿ.ಟಿ. ರವಿ, ಕೋಚಾ ಶ್ರೀನಿವಾಸ ಪೂಜಾರಿ, ದೇವರಾಜ್ ಶೆಟ್ಟಿ, ವರದರಾಜ್ ಇದ್ದರು.