ಸಾರಾಂಶ
ನಿತ್ಯದ ಒತ್ತಡ ಬದುಕಿನಿಂದ ಹೊರಬರಲು ಯೋಗ ಹಾಗೂ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ. ಯೋಗ ನಿತ್ಯದ ದಿನಚರಿಯ ಭಾಗವಾಗಬೇಕು. ದೈಹಿಕ ಹಾಗೂ ಮಾನಸಿಕ ಒತ್ತಡ ನೀಗಿಸುವ ಚಟುವಟಿಕೆಗಳ ಕಡೆ ಹೆಚ್ಚು ವಿದ್ಯಾರ್ಥಿಗಳು ಗಮನ ನೀಡಬೇಕು.
ಬಳ್ಳಾರಿ:
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕೋಶ ಸಹಭಾಗಿತ್ವದಲ್ಲಿ ಯೋಗ, ಶ್ರಮದಾನ, ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಬುಧವಾರ ಚಾಲನೆ ದೊರೆಯಿತು.ಯೋಗ, ಧ್ಯಾನ ಹಾಗೂ ಸೇವಾ ಕೈಂಕರ್ಯವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿವಿಯ ಕುಲಪತಿ ಡಾ. ಅನಂತ್ ಝಂಡೇಕರ್ ತಿಳಿಸಿದರು.
ನಿತ್ಯದ ಒತ್ತಡ ಬದುಕಿನಿಂದ ಹೊರಬರಲು ಯೋಗ ಹಾಗೂ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ. ಯೋಗ ನಿತ್ಯದ ದಿನಚರಿಯ ಭಾಗವಾಗಬೇಕು. ದೈಹಿಕ ಹಾಗೂ ಮಾನಸಿಕ ಒತ್ತಡ ನೀಗಿಸುವ ಚಟುವಟಿಕೆಗಳ ಕಡೆ ಹೆಚ್ಚು ವಿದ್ಯಾರ್ಥಿಗಳು ಗಮನ ನೀಡಬೇಕು ಎಂದರು.ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್ ಎಸ್.ಎನ್. ಮಾತನಾಡಿ, ಯೋಗ, ಶ್ರಮದಾನ, ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳನ್ನು ವಿಶ್ವವಿದ್ಯಾಲಯದ ಅಧೀನದ ಎಲ್ಲ ಕಾಲೇಜುಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದರು. ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಿಡಗಳಿಗೆ ನೀರು ಶೇಖರಣೆಯಾಗಲು ಗುಂಡಿಗಳನ್ನು ತೆಗೆಯುವ ಕಾರ್ಯದಲ್ಲಿ ಕುಲಪತಿಗಳು ಹಾಗೂ ಕುಲಸಚಿವರು ಭಾಗಿ, ಶ್ರಮದಾನ ಮಾಡಿದರು.
ಯೋಗ ಉಪನ್ಯಾಸಕ ಮಹೇಶ್‍ಬಾಬು ತರಬೇತಿ ನೀಡಿದರು. ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.