ಮೆದುಳು ನಮ್ಮ ದೇಹದ ಅತ್ಯಂತ ಮಹತ್ವದ ಅಂಗವಾಗಿದೆ. ಅದು ಆಲೋಚನೆ, ಚಲನೆ, ಭಾವನೆಗಳನ್ನು ನಿಯಂತ್ರಿಸುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ.ಅಶ್ವಿನಿ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೆದುಳು ನಮ್ಮ ದೇಹದ ಅತ್ಯಂತ ಮಹತ್ವದ ಅಂಗವಾಗಿದೆ. ಅದು ಆಲೋಚನೆ, ಚಲನೆ, ಭಾವನೆಗಳನ್ನು ನಿಯಂತ್ರಿಸುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ.ಅಶ್ವಿನಿ ಹಿರೇಮಠ ಹೇಳಿದರು.

ನಗರದ ಬರಟಗಿ ರಸ್ತೆಯಲ್ಲಿರುವ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಎಸ್.ಕುಮಾರ ಮಹೇಶ ಪಿಯು ಸೈನ್ಸ್ ಕಾಲೇಜಿನಲ್ಲಿ ಯುವಕರ ದಿನಾಚರಣೆಯ ಪ್ರಯುಕ್ತವಾಗಿ ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ನಡೆದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೆದುಳಿನ ಆರೋಗ್ಯವನ್ನು ಕಾಪಾಡಿ ದೈನಂದಿನ ಜಿವನದ ಗುಣಮಟ್ಟವನ್ನು ಸುಧಾರಣೆ ಮಾಡಿಕೊಳ್ಳುವುದು. ಮೆದುಳಿನ ಆರೋಗ್ಯಕ್ಕೆ ಸಮತೋಲನ ಆಹಾರ, ದೈಹಿಕ ಚಟುವಟಿಕೆ ವ್ಯಾಯಾಮ, ಯೋಗ ಮಾಡುವುದರಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಮತ್ತು ಮುಖ್ಯವಾಗಿ ವಾಹನ ಸಂಚಾರ ಮಾಡುವಾಗ ಹೆಲ್ಮೆಟ್ ಧರಿಸಬೇಕು ಎಂದರು.ಡಾ.ಮೀನಾಕ್ಷಿ ಸೊನ್ನದ ಮಾತನಾಡಿ, ಕಣ್ಣು ಮಾನವನ ದೇಹದ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಜ್ಞಾನೇಂದ್ರಿಯವಾಗಿದ್ದು, ಸುತ್ತಲಿನ ಪ್ರಪಂಚವನ್ನು ನೋಡಲು ಮತ್ತು ಗ್ರಹಿಸಲು ಸಹಾಯ ಮಾಡುತ್ತದೆ‌ ಎಂದರು. ಡಾ.ರೇಣುಕಾ ಪಾಟೀಲ ಮಾತನಾಡಿ, ಯಾವುದೇ ಒಂದು ರಾಷ್ಟ್ರದ ನಿಜವಾದ ಸಂಪತ್ತು ಯುವಪೀಳಿಗೆ. ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆ ಯುವಕರದಾಗಿದೆ‌ ಎಂದರು. ಟೇಲ್ಸ್ ಆಫ್ ವಿಜಯಪುರ ತಂಡದ ಅನ್ವಿಯಾ ಮತ್ತು ಶಿವಾನಿ ಮಾತನಾಡಿ, ಸಾಕು ಪ್ರಾಣಿ ಮತ್ತು ಸಾಕು ಪ್ರಾಣಿಗಳು ಕಚ್ಚುವುದರಿಂದ ಹರಡುವ ರೇಬಿಸ್ ಸೋಂಕಿನ ಕುರಿತು ವಿವರಣೆ ನೀಡಿದರು.

ಸಂಸ್ಥೆ ಸಂಸ್ಥಾಪಕ ಎಸ್.ಕುಮಾರ, ಸಂಸ್ಥೆ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ, ಡಾ.ಶ್ವೇತಾ ನಾಯ್ಡು, ಕಾಲೇಜಿನ ಪ್ರಾಚಾರ್ಯ ಸದಾಶಿವ ವಾಲಿಕಾರ, ಶಾಲೆ ಮುಖ್ಯಗುರು ಪ್ರಶಾಂತ ಹಿರೇಮಠ ಇದ್ದರು. ಶಿಕ್ಷಕಿ ಅರ್ಪಿತಾ ದಲಾಲ್‌ ನಿರೂಪಿಸಿದರು.