ಯೋಗ ಪ್ರತಿಯೊಬ್ಬರಿಗೆ ಮನೋಬಲವರ್ಧಕ: ಡಾ. ಪ್ರದೀಪ್ ಕುಮಾರ

| Published : Jun 22 2024, 12:46 AM IST

ಯೋಗ ಪ್ರತಿಯೊಬ್ಬರಿಗೆ ಮನೋಬಲವರ್ಧಕ: ಡಾ. ಪ್ರದೀಪ್ ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ದೈಹಿಕವಾಗಿ ಬಲಿಷ್ಠವಾಗಲು ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಲು ಯೋಗ ಸಹಕಾರಿಯಾಗಿದೆ ಎಂದು ಎಂದು ದೈಹಿಕ ಶಿಕ್ಷಣ ಬೋಧಕ ಡಾ. ಪ್ರದೀಪ್ ಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ದೈಹಿಕವಾಗಿ ಬಲಿಷ್ಠವಾಗಲು ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಲು ಯೋಗ ಸಹಕಾರಿಯಾಗಿದೆ ಎಂದು ಎಂದು ದೈಹಿಕ ಶಿಕ್ಷಣ ಬೋಧಕ ಡಾ. ಪ್ರದೀಪ್ ಕುಮಾರ ಹೇಳಿದರು.

ಕೊಪ್ಪಳದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜಗತ್ತಿಗೆ ನಮ್ಮ ದೇಶ ಯೋಗವನ್ನು ಪರಿಚಯಿಸಿದೆ. ಯೋಗ ಈ ನೆಲದ ಆಸ್ಮಿತೆ. ಯೋಗ ವಿದ್ಯೆ ಪರಾತನ ಕಾಲದ ಋಷಿಮುನಿಗಳಿಂದ ಪ್ರಾರಂಭವಾಗಿದ್ದು, ಇಂದು ಬಹುತೇಕ ಜನರು ಯೋಗ ಮಾಡುತ್ತಿದ್ದಾರೆ. ಪ್ರತಿದಿನ ಯೋಗ ಮಾಡುವುದರಿಂದ ನಮಗೆ ರೋಗಗಳು ಬರುವುದಿಲ್ಲ. ಯೋಗ ನಮಗೆ ಬರುವ ರೋಗಗಳನ್ನು ತಡೆಗಟ್ಟತ್ತದೆ. ಇದು ಕೇವಲ ದೇಹದ ಕಸರತ್ತಲ್ಲ, ಪ್ರಕೃತಿಯೊಡನೆ ಸಮೀಕರಿಸಿಕೊಂಡು ನಮ್ಮನ್ನು ನಾವು ಕಂಡುಕೊಳುವ ಪರಿ. ಯೋಗ ಮಾಡಿದಾಗ ನಾವು ಇಡೀ ದಿನ ಬಹಳ ಲವಲವಿಕೆಯಿಂದ ಇರುತ್ತೇವೆ. ಯೋಗ ಬಲ್ಲವನಿಗೆ ರೋಗವಿಲ್ಲ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಯೋಗವನ್ನು ಕಲಿಯಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ತ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಿಕೋದ್ಯಮ ವಿಭಾದ ಸಹಾಯಕ ಪ್ರಾಧ್ಯಾಪಕರಾದ ಡಾ. ನರಸಿಂಹ ಮಾತನಾಡಿ, ಯೋಗ ಮತ್ತು ಧ್ಯಾನದಿಂದ ಜನರು ಕ್ರಿಯಾಶೀಲರಾಗುತ್ತಾರೆ. ದೇಹ ಮತ್ತು ಮನಸ್ಸಿನ ಸಮ್ಮಿಲನವೇ ಯೋಗ. ಇದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಕ್ತಿತ್ವದ ನಿರ್ಮಾಣದಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ಯೋಗದಿಂದ ಅರೋಗ್ಯ ವೃದ್ಧಿಯಾಗುತ್ತದೆ. ಮನಸ್ಸುನ್ನು ಸದೃಢಗೊಳಿಸುವ ಕ್ರಿಯೆ ಯೋಗದಲ್ಲಿದೆ. ಮನಸ್ಸಿನ ಪ್ರವೃತ್ತಿಗಳನ್ನು ಪರಿಶಮನಗೊಳಿಸುವುದೇ ಯೋಗ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಶಿವಪ್ಪ ಬಡಿಗೇರ, ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಹನಮಂತಪ್ಪ ಹಾಗೂ ವಿದ್ಯಾರ್ಥಿನಿಯರು ಇದ್ದರು.

ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಯೋಗಾಸನಗಳಾದ ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ತ್ರಿಕೋನಾಸನ, ವಜ್ರಾಸನ, ಶಶಾಂಕಸನ ವಕ್ರಾಸನ, ಮಕರಾಸನ, ಭುಜಂಗಾಸನ, ಶಲಬ ಆಸನ, ಪವನ ಮುಕ್ತ ಆಸನ, ಶವ ಆಸನ, ಕಪಾಲ ಭಾತಿ, ಪ್ರಾಣಾಯಾಮ ಮಾಡಿದರು.