ಸಾರಾಂಶ
ಹಲವು ರೋಗದಿಂದ ದೂರವಿರಲು ಯೋಗ ರಾಮಬಾಣವಾಗಿದೆ ಎಂದು ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮಿಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಹಲವು ರೋಗದಿಂದ ದೂರವಿರಲು ಯೋಗ ರಾಮಬಾಣವಾಗಿದೆ ಎಂದು ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಬಯಲು ರಂಗಮಂದಿರದಲ್ಲಿ ಶುಕ್ರವಾರ ತಾಲೂಕಾಡಳಿತ, ಬಸವಲಿಂಗೇಶ್ವರ ಯೋಗ ತರಬೇತಿ ಕೇಂದ್ರ ಹಾಗೂ ಪಪಂ ಸಹಯೋಗದಲ್ಲಿ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಹಣ, ಬಂಗಾರ, ಬೆಳ್ಳಿ ಗಳಿಸುವುದಕ್ಕಿಂತ ಆರೋಗ್ಯ ಸಂಪತ್ತನ್ನು ಗಳಿಸಿದಾಗ ಆರೋಗ್ಯವಂತರಾಗಿ ಇರಲು ಯೋಗ, ಧ್ಯಾನ, ಪ್ರಣಾಯಾಮ ಅತಿ ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಯೋಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದ್ದು, ಯೋಗದಿಂದಾಗುವ ಉಪಯುಕ್ತತೆಯನ್ನು ಜನತೆ ಮನಗಂಡಿದ್ದಾರೆ. ಹೀಗಾಗಿ, ಮಹಿಳೆಯರು, ಯುವಕರು, ವಯೋವೃದ್ಧರು, ಶಾಲಾ ಮಕ್ಕಳು ಯೋಗಾಭ್ಯಾಸಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ದೇಹ, ಮನಸ್ಸನ್ನು ಒಂದುಗೂಡಿಸುವುದೇ ಯೋಗ. ನೈತಿಕ ಮೌಲ್ಯ ಮತ್ತು ಆಧ್ಮಾತ್ಮಿಕ ಶಿಸ್ತನ್ನು ರೂಢಿಸಿಕೊಳ್ಳಲು ಯೋಗ ಅತಿ ಅವಶ್ಯ. ಇಂತಹ ಕೊಡುಗೆಯನ್ನು ವಿಶ್ವಕ್ಕೆ ನೀಡಿದ್ದು ಭಾರತೀಯರು ಎಂಬುದು ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸ್ಹೀಲ್ದಾರ್ ಬಸವರಾಜ ತೆನ್ನೆಳ್ಳಿ, ತಾಪಂ ಇಒ ಸಂತೋಷ ಬಿರಾದಾರ, ಪಿಎಸ್‌ಐ ವಿಜಯಪ್ರತಾಪ, ಡಾ. ವಿವೇಕ, ಪಪಂ ಮಾಜಿ ಅಧ್ಯಕ್ಷರಾದ ಸುರೇಶಗೌಡ ಶಿವನಗೌಡ್ರ, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ಸಿದ್ರಾಮೇಶ ಬೇಲೇರಿ, ದಾನನಗೌಡ ತೊಂಡಿಹಾಳ, ಕಲ್ಲೇಶ ಕರಮುಡಿ, ಅಧಿಕಾರಿಗಳಾದ ಮುಖ್ಯಾಧಿಕಾರಿ ನಾಗೇಶ, ಕೆ.ಟಿ. ನಿಂಗಪ್ಪ, ದೇವೇಂದ್ರಪ್ಪ, ಶಿಕ್ಷಕರಾದ ಎಸ್.ವಿ. ಧರಣಾ, ಖಾದರಬಾಷ ಮತ್ತಿತರರು ಇದ್ದರು.