ಸಾರಾಂಶ
ಆಧುನಿಕ ಜೀವನಶೈಲಿಯಿಂದಾಗಿ ಹಾಗೂ ನಮ್ಮ ದೈನಂದಿನ ಜೀವನಕ್ಕೆ ಆರಾಮ ಮತ್ತು ಅನುಕೂಲಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆಗಳೇ ಇಂದು ಸಕ್ಕರೆ ಕಾಯಿಲೆ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆಯಂತಹ ಅನೇಕ ರೋಗಗಳನ್ನು ತಂದೊಡ್ಡಿಕೊಂಡಿದ್ದೇವೆ.
ಕನ್ನಡಪ್ರಭ ವಾರ್ತೆ ರಾಮನಗರ
ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಸಾಮಾಜಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಿಸ್ತಿನ ಅಭ್ಯಾಸಗಳೇ ಯೋಗ ಎಂದು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಟಿ.ಸತೀಶ್ ಹೇಳಿದರು.ನೇಟಸ್ ಶಾಲೆಯ ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯೋಗಾಭ್ಯಾಸದ ಭಾಗವಾದ ಪ್ರಾಣಾಯಾಮ, ಕಪಾಲಭಾತಿ, ಸೂರ್ಯ ನಮಸ್ಕಾರ, ತದಾಸನ, ಶವಾಸನಗಳು ಮನುಷ್ಯನ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಆಧುನಿಕ ಜೀವನಶೈಲಿಯಿಂದಾಗಿ ಹಾಗೂ ನಮ್ಮ ದೈನಂದಿನ ಜೀವನಕ್ಕೆ ಆರಾಮ ಮತ್ತು ಅನುಕೂಲಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆಗಳೇ ಇಂದು ಸಕ್ಕರೆ ಕಾಯಿಲೆ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆಯಂತಹ ಅನೇಕ ರೋಗಗಳನ್ನು ತಂದೊಡ್ಡಿಕೊಂಡಿದ್ದೇವೆ.ಉಸಿರಾಟದ ಸಮಸ್ಯೆ, ಮಧುಮೇಹದ ನಿಯಂತ್ರಣ, ದೇಹದ ಸಾಮರ್ಥ್ಯಗಳನ್ನು ಹೆಚ್ಚಿಸಲು, ಮಾನಸಿಕ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಲು, ನಿದ್ರಾಹೀನತೆಯನ್ನು ತಡೆಗಟ್ಟಲು ಮಾರ್ಗದರ್ಶಕರ ಮೂಲಕ ಪ್ರತಿದಿನ ನಿಯಮಿತ ಕಾಲದ ಯೋಗಾಭ್ಯಾಸ ಮಾಡಿದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಶಾಲೆಯ ಸಂಯೋಜನೆ ಅಧಿಕಾರಿಯದ ವೆಂಕಟೇಶ್ ಆರೋಗ್ಯಕರ ಬದುಕಿಗಾಗಿ ಯೋಗಾಭ್ಯಾಸವನ್ನು ಜೀವನ ಶೈಲಿಯನ್ನಾಗಿಸಿಕೊಳ್ಳೋಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಲೆಯ ಮುಖ್ಯ ಶಿಕ್ಷಕಿ ಸಿ.ಎಸ್ . ಅನಿತಾ ಲಕ್ಷ್ಮೀ ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು ಎಂದು ತಿಳಿಸಿದರು.
ಶಾಲೆಯ ಸಂಯೋಜನಧಿಕಾರಿ ದೀಪ. ಎಸ್, ಶಾಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಗಂಗಾಧರ್, ದೈಹಿಕ ಶಿಕ್ಷಣ ಶಿಕ್ಷಕರಾದ ಧನಂಜಯ್. ಶಿಕ್ಷಕಿಯರಾದ ಅನ್ಸಿಲಾ, ಸಂಧ್ಯಾ , ಅನಿತಾ, ಅಶ್ವಿನಿ, ಜೂಲಿಯಟ್, ಕವಿತಾ, ರೇಣುಕಾ, ಕುಮುದ, ಲಕ್ಷ್ಮೀದೇವಿ, ಪೂಜಾ, ಚರಣ್ ಹಾಗೂ ಶಾಲೆಯ ಎಲ್ಲಾ ಬೋಧಕ ಮತ್ತು ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು..