ಸದೃಢ ಆರೋಗ್ಯಕ್ಕೆ ಯೋಗ ಅತ್ಯವಶ್ಯ

| Published : Jun 20 2024, 01:01 AM IST

ಸಾರಾಂಶ

ಆರೋಗ್ಯ ಇದ್ದರೇ ನಾವು ಏನನ್ನಾದರೂ ಸಾಧಿಸಬಲ್ಲೆವು. ಅದಕ್ಕಾಗಿ ಪ್ರತಿದಿನ ತಪ್ಪದೇ ಯೋಗವನ್ನು ಮಾಡಬೇಕು. ಯೋಗದಿಂದ ಆರೋಗ್ಯ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಆರೋಗ್ಯ ಇದ್ದರೇ ನಾವು ಏನನ್ನಾದರೂ ಸಾಧಿಸಬಲ್ಲೆವು. ಅದಕ್ಕಾಗಿ ಪ್ರತಿದಿನ ತಪ್ಪದೇ ಯೋಗವನ್ನು ಮಾಡಬೇಕು. ಯೋಗದಿಂದ ಆರೋಗ್ಯ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.

ಪಟ್ಟಣದ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಪಟ್ಟಣದ ಪ್ರಮುಖರು ಗಣ್ಯರು ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ ಯೋಗವು ಮನಸ್ಸು, ದೇಹ, ಆತ್ಮವನ್ನು ಒಳಗೊಳ್ಳುವ ಅಭ್ಯಾಸವಾಗಿದೆ. ವಿಜಯಪುರದ ಜ್ಞಾನ ಯೋಗಶ್ರಮದ ಪ.ಪೂ ಲಿಂ. ಸಿದ್ದೇಶ್ವರ ಸ್ವಾಮೀಜಿಯವರ ಶಿಷ್ಯರಾದ ಅಮೃತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯೋಗ ಅಭ್ಯಾಸ ಹಾಗೂ ಪ್ರವಚನ ಕಾರ್ಯಕ್ರಮ ಜೂನ್ 21ರಂದು ಬೆಳಗ್ಗೆ 6.30ಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಆಸಕ್ತರು ಯೋಗೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತಾಗಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವಾಳಖೇಡದ ಸಿದ್ದಕೃಪಾ ಮಹಾಂತಮಠದ ಡಾ.ಬಸವಾನಂದ ಶ್ರೀಗಳು ಭಾಗವಹಿಸಿ ಪಟ್ಟಣದ ಶಾಲಾವರಣದಲ್ಲಿ ಸ್ಥಳದ ವ್ಯವಸ್ಥೆ, ಸ್ವಚ್ಛತೆ, ಅಧಿಕ ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳನ್ನು ಸೇರಿಸುವುದು,ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡುವ ಕುರಿತು ತಿಳಿಸಿದರು.ಸಂದರ್ಭದಲ್ಲಿ ಡಾ.ಆರ್.ಆರ್.ನಾಯಕ, ಡಾ.ಮಂಜುನಾಥ ಮಠ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದುರಿ, ಯೋಗ ಶಿಕ್ಷಕ ಪಿ.ಎಸ್. ಮಿಂಚನಾಳ, ಮಡಿವಾಳಪ್ಪ ದೊಡಮನಿ ಅವರು ಮಾತನಾಡಿ ಎಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನಿಂಗರಾಯ ಮಹಾರಾಜರು, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಕಾಸುಗೌಡ ಬಿರಾದಾರ,ಗುರುರಾಜ ಗಡೇದ, ರಮೇಶ ಮಸಬಿನಾಳ ಮುಖಂಡರುಗಳಾದ ಪ್ರಕಾಶ ಮಲ್ಹಾರಿ, ಸೋಮು ದೇವೂರ, ಸುನೀಲ ಕನಮಡಿ, ಬ್ರಹ್ಮಾನಂದಗೌಡ ಪಾಟೀಲ, ಕಾಸು ಕೋರಿ,ಶಿವಪದ್ಮ ಕೂಟನೂರ,ಮಲ್ಲು ಜಮಾದಾರ, ಶರಣಗೌಡ ಪಾಟೀಲ, ಪಿ.ಸಿ.ತಳಕೇರಿ,ಮುರ್ತೂಜ ತಾಂಬೋಳಿ ,ರವೀಂದ್ರ ಕೊಟೀನ, ಸಂಗನಬಸು ನಂದ್ಯಾಳ, ಶಿವಾನಂದ ಕೊಟೀನ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಸ್ವಾಗತಿಸಿ, ವಂದಿಸಿದರು.