ಸಾರಾಂಶ
ಮಿಲಾಗ್ರಿಸ್ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳು ಐಕ್ಯೂಎಸಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಆರೋಗ್ಯವಂತರಾಗಿರುವುದು ಇಂದಿನ ಅತಿ ಅಗತ್ಯವಾಗಿದ್ದು, ಆರೋಗ್ಯ ಕಾಪಾಡುವ ಉಪಾಯಗಳಲ್ಲಿ ಯೋಗ ಕೂಡ ಒಂದು ಎಂದು ಇಲ್ಲಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳು ಐಕ್ಯೂಎಸಿ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಹೇಳಿದರು.ಮಾನವನ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದೆ. ಹಾಗಾಗಿ ಆರೋಗ್ಯವೂ ಕಡಿಮೆಯಾಗಿದೆ. ಆರೋಗ್ಯವಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯೇ ಹೊರತು ವೈದ್ಯಕೀಯ ಸಿಬ್ಬಂದಿಯದ್ದಲ್ಲ, ಅದಕ್ಕಾಗಿಯೇ ಯೋಗವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯನ್ನು ಗಳಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಉಡುಪಿಯ ಆಯುಷ್ ಸಂಸ್ಥೆಯ ಪ್ರಕಾಶ್ ನಾಯಕ್ ಮುಖ್ಯ ಅತಿಥಿಯಾಗಿದ್ದರು. ಅವರು ಮಾನವ ಶರೀರಶಾಸ್ತ್ರ ಮತ್ತು ಉಸಿರಾಟದ ವ್ಯವಸ್ಥೆ ಮತ್ತು ಅದರ ನಿರ್ವಹಣೆಯ ಪರಿಕಲ್ಪನೆಯನ್ನು ವಿವರಿಸಿದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಅನುಪಮ ಜೋಗಿ ಮತ್ತು ಗಣೇಶ್ ನಾಯಕ್, ಕಾಲೇಜಿನ ಗ್ರಂಥಪಾಲಕಿ ರೇಖಾ ಯು. ಮತ್ತು ರವಿನಂದನ್ ಭಟ್ ಉಪಸ್ಥಿತರಿದ್ದರು. ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.