ಋಷಿ ಪರಂಪರೆ ದೇಶ ಭಾರತಕ್ಕೆ ಯೋಗವೇ ಅಡಿಪಾಯ: ಗುರುಬಸವ ಸ್ವಾಮೀಜಿ

| Published : Jun 22 2024, 12:50 AM IST

ಋಷಿ ಪರಂಪರೆ ದೇಶ ಭಾರತಕ್ಕೆ ಯೋಗವೇ ಅಡಿಪಾಯ: ಗುರುಬಸವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಋಷಿ ಪರಂಪರೆಯ ದೇಶವಾಗಿದ್ದು, ಇದಕ್ಕೆ ಯೋಗವೇ ಅಡಿಪಾಯವಾಗಿದೆ. ಲೋಕಕ್ಕೆ ಯೋಗದ ಕೊಡುಗೆ ನೀಡಿದ ದೇಶ ನಮ್ಮದು ಎಂಬ ವಿಷಯದ ಬಗ್ಗೆ ಹೆಮ್ಮೆ ಇರಲಿ ಎಂದು ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಶಿವಯೋಗಾಶ್ರಮ ಆವರಣದಲ್ಲಿ ಬೃಹತ್ ಯೋಗ ಶಿಬಿರ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತ ಋಷಿ ಪರಂಪರೆಯ ದೇಶವಾಗಿದ್ದು, ಇದಕ್ಕೆ ಯೋಗವೇ ಅಡಿಪಾಯವಾಗಿದೆ. ಲೋಕಕ್ಕೆ ಯೋಗದ ಕೊಡುಗೆ ನೀಡಿದ ದೇಶ ನಮ್ಮದು ಎಂಬ ವಿಷಯದ ಬಗ್ಗೆ ಹೆಮ್ಮೆ ಇರಲಿ ಎಂದು ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ನುಡಿದರು.

ನಗರದ ಶಿವಯೋಗಾಶ್ರಮ ಆವರಣದಲ್ಲಿ ಗುರುವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಬೃಹತ್ ಯೋಗ ಶಿಬಿರದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯೋಗವು ಚಿತ್ತವೃತ್ತಿಗಳನ್ನು ನಿರೋಧಿಸುತ್ತದೆ. ಎಲ್ಲ ಗಮನಾರ್ಹ ಸಾಧನೆಗಳಿಗೆ ಏಕಾಗ್ರವಾಗಿರುವ ಚಿತ್ತ ಹಾಗೂ ಜೀವನದ ಸವಾಲುಗಳ ಮಧ್ಯೆ ಗೆದ್ದು ಬರಲು ಶಾಂತವಾದ ಮನಸ್ಸು ಅವಶ್ಯಕ. ವಿದ್ಯಾರ್ಥಿಗಳಿಗಂತೂ ಯೋಗ ವರದಾನವಾಗಿದೆ ಎಂದು ಸಲಹೆ ನೀಡಿದರು.

ಭಾರತದ ಅಧ್ಯಾತ್ಮ ಸಾಧನೆಯನ್ನು ಜಗವೆಲ್ಲ ಮೆಚ್ಚಿಕೊಂಡು, ಶರಣಾಗಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರದ್ಧೆಯಿಂದ ಆಚರಿಸುತ್ತಿದೆ. ಭಾರತೀಯರಾದ ನಾವೇ ಯೋಗವನ್ನು ಅಸಡ್ಡೆ ಮಾಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಗುರುವಾರ ಬೆಳಗ್ಗೆ 5.30 ರಿಂದ ಯೋಗಗುರು ಚನ್ನಬಸವಣ್ಣ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗ ಶಿಕ್ಷಕರಾದ ಕರಿಬಸಪ್ಪ, ನೀಲಪ್ಪನವರು ತಮ್ಮ ಅನುಭವ ಹಂಚಿಕೊಂಡು, ಯೋಗಾಸಕ್ತರಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ವಿವಿಧ ಯೋಗ ಕೇಂದ್ರಗಳ ಯೋಗ ಶಿಕ್ಷಕರು, ಯೋಗಾಸಕ್ತರು ಭಾಗವಹಿಸಿದ್ದರು. - - - -20ಕೆಡಿವಿಜಿ42:

ದಾವಣಗೆರೆಯಲ್ಲಿ ಅಂತರ ರಾಷ್ಟ್ರೀಯ ಯೋಗ ದಿನ ಅಂಗವಾಗಿ ನಡೆದ ಯೋಗ ಶಿಬಿರದಲ್ಲಿ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿದರು.