ಅಂಗಾಂಗಗಳ ಶಕ್ತಿ, ಮಾನಸಿಕ ಏಕಾಗ್ರತೆಗೆ ಯೋಗ ಮದ್ದು: ಡಾ.ಶಾಂತಲಿಂಗ ಶ್ರೀಗಳು

| Published : Jun 25 2024, 12:31 AM IST

ಅಂಗಾಂಗಗಳ ಶಕ್ತಿ, ಮಾನಸಿಕ ಏಕಾಗ್ರತೆಗೆ ಯೋಗ ಮದ್ದು: ಡಾ.ಶಾಂತಲಿಂಗ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ನಾಲಿಗೆಯ ಕ್ಷಣಿಕ ರುಚಿ ಆಸೆಗಾಗಿ ಜನತೆ ದೇಹಕ್ಕೆ ಬೇಡವಾದ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಕಣ್ವಕುಪ್ಪಿ ಗವಿಮಠದ ಡಾ.ಶಾಂತಲಿಂಗ ಶಿವಾಚಾರ್ಯ ಶ್ರೀ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಸುಶ್ರುತ ಆಯುರ್ವೇದ ಕಾಲೇಜು ಆವರಣದಲ್ಲಿ ಯೋಗ ದಿನ - - - ದಾವಣಗೆರೆ: ನಾಲಿಗೆಯ ಕ್ಷಣಿಕ ರುಚಿ ಆಸೆಗಾಗಿ ಜನತೆ ದೇಹಕ್ಕೆ ಬೇಡವಾದ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಕಣ್ವಕುಪ್ಪಿ ಗವಿಮಠದ ಡಾ.ಶಾಂತಲಿಂಗ ಶಿವಾಚಾರ್ಯ ಶ್ರೀ ನುಡಿದರು.

ನಗರದ ಸುಶ್ರುತ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಮಾನವ ವಿಕಾಸ ಫೌಂಡೇಶನ್, ಭಾರತ ವಿಕಾಸ ಪರಿಷತ್ತು ಗೌತಮ ಶಾಖೆ ದಾವಣಗೆರೆ ಸಹಯೋಗದೊಂದಿಗೆ ನಡೆದ ವಿಶ್ವ ಯೋಗ ದಿನಾಚರಣೆ ದಶಮಾನೋತ್ಸವ ಕಾರ್ಯಕ್ರಮ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಾತ್ವಿಕ ಶುದ್ಧ ಆಹಾರ ಪದಾರ್ಥಗಳ ಸೇವನೆಯಿಂದ ದೇಹದ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಪಡೆಯಲು ಸಾಧ್ಯ. ಹಿಂದೆ ಹಣ, ವಿದ್ಯೆ ವಸತಿ ಸಂಪರ್ಕ ಆಹಾರ ಧಾನ್ಯಗಳ ಕೊರತೆ ಇದ್ದಾಗಲೂ ಸಹ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಇಂದು ವಸತಿ ಸ್ಥಾನಮಾನ ಹಣ ಯಾವುದೇ ಕೊರತೆ ಇಲ್ಲದಿದ್ದರೂ ನೆಮ್ಮದಿ ಹಾಗೂ ಆರೋಗ್ಯವೇ ಇಲ್ಲದಂತ ಜೀವನ ಸಾಗಿಸುವಂಥಾಗಿದೆ ಎಂದರು.

ಪ್ರತಿನಿತ್ಯ ಒಂದು ಗಂಟೆ ಯೋಗ ಧ್ಯಾನ ಮತ್ತು ಪ್ರಾಣಾಯಾಮಗಳಿಗೆ ಮೀಸಲಿಟ್ಟಾಗ ದೇಹದ ಅಂಗಾಂಗಗಳು ಶಕ್ತಿಯುತ ಆಗುವುದರ ಜೊತೆಗೆ ಮಾನಸಿಕ ಏಕಾಗ್ರತೆ ಸಾಧ್ಯವಾಗುತ್ತದೆ. ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ ಪ್ರಾಚೀನ ಪದ್ಧತಿಯಂತೆ ಜೀವನ ನಡೆಸುವುದು ಅವಶ್ಯಕ ಎಂದರು.

ಸಂಸ್ಥೆ ಅಧ್ಯಕ್ಷ ಬಸವಂತಪ್ಪ, ಕಾರ್ಯದರ್ಶಿ ಡಾ. ಬಿ.ಜಿ.ಸತೀಶ, ಕಾಲೇಜಿನ ಇತರೆ ವೈದ್ಯ ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು. ಕಾಲೇಜು ಅಧ್ಯಾಪಕರಾದ ಡಾ.ಸೌಮ್ಯ ಯೋಗ ಮತ್ತು ಪ್ರಾಣಾಯಾಮ ಕುರಿತು ವಿಶ್ಲೇಷಣೆ ಸಹಿತ ತಿಳಿಸಿಕೊಟ್ಟರು. ಎಸ್.ಕೃತಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಸಂಸ್ಥೆ ಪ್ರಾಚಾರ್ಯ ಡಾ.ಅಕ್ಬರ್ ಖಾನ್ ಸ್ವಾಗತಿಸಿದರು. ಡಾ.ಚಿನ್ಮಯಿ, ಡಾ.ಸಹನಾ ಕಾರ್ಯಕ್ರಮ ನಿರೂಪಿಸಿದರೆ, ಡಾ.ಸೌಮ್ಯ ವಂದಿಸಿದರು.

- - -

-23ಕೆಡಿವಿಜಿ33ಃ:

ದಾವಣಗೆರೆಯ ಸುಶ್ರುತ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ನಡೆದ ಅಂತರ ರಾಷ್ಟ್ರೀಯ ಯೋಗಾಸನ ಕಾರ್ಯಕ್ರಮದಲ್ಲಿ ಡಾ.ಶಾಂತಲಿಂಗ ಶಿವಾಚಾರ್ಯ ಶ್ರೀಗಳಿಗೆ ಗೌರವಿಸಲಾಯಿತು.