ಯೋಗಾಭ್ಯಾಸದಿಂದ ರೋಗನಿರೋಧಕ ಶಕ್ತಿ ಹೆಚ್ಚಳ

| Published : Sep 23 2025, 01:03 AM IST

ಸಾರಾಂಶ

ವೇಗದ ಜೀವನಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ರೋಗಗಳಿಂದ ದೂರವಿರಲು ಯೋಗ ಹಾಗೂ ಧ್ಯಾನಗಳು ಅನಿವಾರ್ಯವಾಗಿವೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಆಧುನಿಕ ಜೀವನಕ್ಕೆ ಶಾಂತಿಯನ್ನು ತರುವ ಭಾರತದ ಅಮೂಲ್ಯ ಕೊಡುಗೆಗಳಾಗಿವೆ. ಪತಂಜಲಿ ಋಷಿಗಳು ನೀಡಿದ ಈ ಕೊಡುಗೆಯನ್ನು ಸರಿಯಾಗಿ ಬಳಸಿಕೊಂಡು, ದೇಹ ಮತ್ತು ವಯಸ್ಸಿಗೆ ತಕ್ಕಂತೆ ಯೋಗಾಭ್ಯಾಸವನ್ನು ಮಾಡಬೇಕು ಎಂದು ಸಲಹೆ ನೀಡಿದರು. ಸದೃಢ ದೇಹ ಮತ್ತು ಉತ್ತಮ ಯೋಗಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯುವ ಅವಧಿಯಲ್ಲಿಯೇ ಯೋಗ, ಧ್ಯಾನ ಮತ್ತು ಪ್ರಾಣಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇವು ದೇಹದಲ್ಲಿ ರೋಗಗಳನ್ನು ತಡೆಗಟ್ಟಲು ಸಹಾಯಕವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಅವರು ಪಟ್ಟಣದ ನ್ಯೂ ಅಲೆಯನ್ಸ್ ಕಾಲೇಜು ಸಭಾಂಗಣದಲ್ಲಿ ನಡೆದ ಹೋಲಿಸ್ಟಿಕ್ ಯೋಗ ಮುದ್ರಾ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವೇಗದ ಜೀವನಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ರೋಗಗಳಿಂದ ದೂರವಿರಲು ಯೋಗ ಹಾಗೂ ಧ್ಯಾನಗಳು ಅನಿವಾರ್ಯವಾಗಿವೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಆಧುನಿಕ ಜೀವನಕ್ಕೆ ಶಾಂತಿಯನ್ನು ತರುವ ಭಾರತದ ಅಮೂಲ್ಯ ಕೊಡುಗೆಗಳಾಗಿವೆ. ಪತಂಜಲಿ ಋಷಿಗಳು ನೀಡಿದ ಈ ಕೊಡುಗೆಯನ್ನು ಸರಿಯಾಗಿ ಬಳಸಿಕೊಂಡು, ದೇಹ ಮತ್ತು ವಯಸ್ಸಿಗೆ ತಕ್ಕಂತೆ ಯೋಗಾಭ್ಯಾಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ವಿಶ್ವಬಂಧು ಮತ್ತು ಯೋಗ ಗುರುಗಳಾದ ಡಾ. ನಾಗೇಶ್ ಅವರು ಯೋಗದ ಮಹತ್ವವನ್ನು ವಿವರಿಸಿ, ಪ್ರಾಯೋಗಿಕವಾಗಿ ಯೋಗಾಭ್ಯಾಸ ಮಾಡಿಸಿದರು. ಯೋಗ ಗುರುಲಕ್ಷ್ಮಣ್ ಗುರೂಜಿ, ಮಾತನಾಡಿ ಸಕಾರಾತ್ಮಕ ಚಿಂತನೆಗಳಿಗೆ ಭದ್ರ ಬುನಾದಿ ಹಾಕುವ ಕೃಷಿಯೇ ಯೋಗವಾಗಿದೆ. ಸದೃಢ ದೇಹ ಮತ್ತು ಉತ್ತಮ ಯೋಗಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಾಯೋಗಿಕ ವಿಧಾನಗಳನ್ನು ತಿಳಿಸಿದರು.

ಗ್ಲೋಬಲ್ ಯೋಗ ಕೇಂದ್ರವು ನಡೆಸಿದ ಯೋಗ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ೧೫ ವಿಜೇತರಿಗೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಲಿಸ್ಟಿಕ್ ಯೋಗ ಮುದ್ರಾ ಕೇಂದ್ರದ ಸಂಸ್ಥಾಪಕಿ ಎಸ್.ಆರ್. ರೇಖಾ, ರಾಣಿ, ಮಾತನಾಡಿ, ಮಹಿಳೆಯರು ಯೋಗಭ್ಯಾಸದಲ್ಲಿ ತೊಡಗಿಸಿ. ಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.ನ್ಯೂ ಅಲೆಯನ್ಸ್ ಕಾಲೇಜಿನ ಪ್ರಾಂಶು ಪಾಲರಾದ ಬಿ.ಎಂ. ಲೋಹಿತ್, ಉಪ ಪ್ರಾಂಶು ಪಾಲರಾದ ಉಲ್ಲಾಸ್ ಎಚ್.ವಿ.. ಸುಧಾಕರ್, ಅನ್ನಪೂರ್ಣ ಮತ್ತು ಅರ್ಪಿತ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.