ಸಾರಾಂಶ
ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮತ್ತು ಬ್ಲಾಕ್ ಅಧ್ಯಕ್ಷರ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಲೋಕಸಭೆ ಚುನಾವಣೆಯ ಬಗ್ಗೆ ಮಾರ್ಗದರ್ಶನ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮತ್ತು ಬ್ಲಾಕ್ ಅಧ್ಯಕ್ಷರ ಸಭೆಯು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಿ, ಜೆಡಿಎಸ್ ಬಿಜೆಪಿಯ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ನಿಷ್ಠೆಯಿಂದ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.ಅಲ್ಲದೆ ಬಿಜೆಪಿ ಪಕ್ಷದ ನಾಯಕರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು, ಆ ಮೂಲಕ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಕಟಿ ಬದ್ಧರಾಗಬೇಕು ಎಂದರು.ಪಕ್ಷದ ರಾಜ್ಯ ಪದಾಧಿಕಾರಿಗಳಾದ ಜಯಕುಮಾರ್ ಪರ್ಕಳ ಮತ್ತು ಸುಧಾಕರ್ ಶೆಟ್ಟಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ, ಶ್ರೀಕಾಂತ್ ಹೆಬ್ರಿ, ಕಿಶೋರ್ ಬಲ್ಲಾಳ್ ಮತ್ತು ಜಿಲ್ಲಾ ನಾಯಕರಾದ ಜಯರಾಮ ಆಚಾರ್ಯ, ದಕ್ಷತ್ ಆರ್. ಶೆಟ್ಟಿ, ರಮೇಶ್ ಕುಂದಾಪುರ, ಸಂಜಯ್ ಕುಮಾರ್, ಉದಯ ಆರ್. ಶೆಟ್ಟಿ, ವೆಂಕಟೇಶ್ ಎಂ.ಟಿ., ರಾಮರಾವ್, ದೇವರಾಜ್ ತೊಟ್ಟಂ, ಕೀರ್ತಿರಾಜ್, ಅಶ್ರಫ್ ಪಡುಬಿದ್ರಿ, ಬಿ.ಕೆ. ಮೊಹಮ್ಮದ್, ಯು.ಎ. ರಶೀದ್, ಸತೀಶ್ ಪೂಜಾರಿ, ಹರೀಶ್ ಹೆಗ್ಡೆ, ರಂಗ ಕೋಟ್ಯಾನ್, ಸುಮಿತ್ ಪರ್ಕಳ ಉದಯ ಕುಮಾರ್, ರವಿಚಂದ್ರ ಹೆಗ್ಡೆ, ದಯಾಕರ ಶೆಟ್ಟಿ ಮತ್ತು ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.