ಇಂದಿನಿಂದ ಯೋಗಿರಾಜರ ಆರಾಧನಾ ಮಹೋತ್ಸವ

| Published : Nov 29 2024, 01:03 AM IST

ಸಾರಾಂಶ

ಹುಬ್ಬಳ್ಳಿಯ ವಿಭಾವರಿ ಭಜನಾ ಮಂಡಳಿಯಿಂದ ಭಜನೆ, ಸೋತ್ರ ಪಠಣ, ಬೆಂಗಳೂರು ಗೌರಿ ಅರುಣ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ಧಾರವಾಡ ತಾರಕೇಶ್ವರ ಭಜನಾ ಮಂಡಳಿಯಿಂದ ಭಕ್ತಿ ಭಜನೆ

ಗದಗ: ತಾಲೂಕಿನ ಪವಾಡ ಪುರುಷ ಯೋಗಿರಾಜ ಮಹಾರಾಜರ 103ನೇ ಆರಾಧನಾ ಮಹೋತ್ಸವ ನ.29 ರಿಂದ ಮೂರು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗುವುದು.

ಕಾರ್ಯಕ್ರಮವನ್ನು ಇಲ್ಲಿಯ ಯೋಗಿರಾಜ ಭಕ್ತಿ ಮಂಡಳಿಯ ಆಶ್ರಯದಲ್ಲಿ ಶಂಕರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. 29 ರಂದು ಬೆಳಗ್ಗೆ 5.30 ರಿಂದ ಸಂಜೆ 9ರ ವರೆಗೆ ಜರುಗುವ ಧಾರ್ಮಿಕ ಕಾರ್ಯಗಳು ಮೊದಲಿಗೆ ಸದ್ಗುರುಗಳ ಪಾದುಕೆ ಸ್ಥಾಪನೆ ನಂತರ ವಿದ್ಯಾಶಂಕರ ದೇವರಿಗೆ ಲಘು ರುದ್ರಾಭಿಷೇಕ, ಗಣಪತಿ ಸಹಸ್ರ ಮೋದಕ ಹೋಮ, ಮಹಾನೈವೇಧ್ಯ ಮಹಾ ಮಂಗಳಾರತಿ, ಮಹಾ ಪ್ರಸಾದ, ದೀಪೋತ್ಸವ, ಶೇಜಾರತಿ ಮಂತ್ರಪುಷ್ಪ ಹಾಗೂ ಅಷ್ಟಾವಧಾನ ಸೇವೆ ನಡೆಯುವುದು.

ಇನ್ನೂ ವೇದಿಕೆಯಲ್ಲಿ ಬೆಳಗ್ಗೆ 10.30 ರಿಂದ ಸಂಜೆ 7.30 ರವರೆಗೂ ನಡೆಯುವ ಕಾರ್ಯಕ್ರಮಗಳು ಹುಬ್ಬಳ್ಳಿಯ ವಿಭಾವರಿ ಭಜನಾ ಮಂಡಳಿಯಿಂದ ಭಜನೆ, ಸೋತ್ರ ಪಠಣ, ಬೆಂಗಳೂರು ಗೌರಿ ಅರುಣ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ಧಾರವಾಡ ತಾರಕೇಶ್ವರ ಭಜನಾ ಮಂಡಳಿಯಿಂದ ಭಕ್ತಿ ಭಜನೆ, ಗುರುವಿನಹಳ್ಳಿಯ ವಿಶ್ವನಾಥರಾವ್ ಕುಲಕರ್ಣಿ ಅವರಿಂದ ಗಮಕವಾಚನ, ಕುರ್ತುಕೋಟಿಯ ಕೀರ್ತನ ಕೇಸರಿ ದಿಗಂಬರಶಾಸ್ತ್ರೀ ಅವರಿಂದ ಕೀರ್ತನೆ ನೆರವೇರಲಿದೆ.

ನ. 30 ರಂದು ಬೆಳಗ್ಗೆ ಪ್ರಾತ:ಸ್ಮರಣಿ ಕಾಕಡಾರತಿ, ಮಧ್ಯಾಹ್ನ 12 ಕ್ಕೆ ಅಲಂಕಾರ ಪೂಜೆ, ಬೆಳಗ್ಗೆ 9 ರಿಂದ ಸಂಜೆ 9 ರವರೆಗೆ ವೇದಿಕೆ ಕಾರ್ಯಕ್ರಮಗಳು, ಗದಗ ಕರಿ ಭಜನಾ ಮಂಡಳ, ಹುಬ್ಬಳ್ಳಿ ಶಾರಾದಾ ಮಹಿಳಾ ಕುಂಜ ಹಾಗೂ ಹಳೆ ಹುಬ್ಬಳ್ಳಿಯ ಶಂಕರ ಭಜನಾ ಮಂಡಳಿಯಿಂದ ಭಜನಾ, ಹುಬ್ಬಳ್ಳಿಯ ಅರ್ಪಿತಾ ಜಹಗೀರದಾರ ಹಾಗೂ ಶ್ರೀಕಾತ ಹೂಲಿ ಸಂಗಡಿಗರಿಂದ ಭಕ್ತಿ ಸಂಗೀತ ನಡೆಯುವುದು.

ಡಿ.1 ರಂದು ಬೆಳಗ್ಗೆ 5.30 ರಿಂದ ಮದ್ಯಾಹ್ನ 1.30ರ ವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಪ್ರಾತ:ಸ್ಮರಣಿ, ಕಾಕಡಾರತಿ, ಭಿಮಭಿಕ್ಷಾ, ಅವಭೃತ ಸ್ನಾನ, ಬುತ್ತಿ ಪೂಜಾ, ಸತ್ಯನಾರಾಯಣ ಪೂಜಾ ನೆರವೇರುವುದು. ವೇದಿಕೆಯ ಕಾರ್ಯಕ್ರಮಗಳು ಮದ್ಯಾಹ್ನ 1.30 ಕ್ಕೆ ಗದಗ ಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ಭಾಗ್ಯಶ್ರೀ ಘಳಗಿ ರಚಿಸಿದ ದಾಸ ಶ್ರೇಷ್ಠ ಪುರಂದರ ದಾಸರು ನಾಟಕ ಪ್ರದರ್ಶನ, ನಂತರ ಕೋಲಾಟ, ಭಜನೆ ಮದ್ಯಾಹ್ನ ನರೆಗಲ್ಲದ ವೆಂಕಟೇಶ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ ಇವರೊಂದಿಗೆ ಮೂರು ದಿನ ಧಾರವಾಡದ ಉಮೇಶ ಪಾಟೀಲ, ಮೋಹನ ಮಾಗಡಗೇರಿ ಅವರಿಂದ ಸಂಗೀತ ಸೇವೆ ನಡೆಯುವುದು ಎಂದು ಭಕ್ತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.